Advertisement

ನಿರಾಶ್ರಿತರಿಗೆ ಆಹಾರ ವಿತರಣೆ

03:17 PM Apr 01, 2020 | Team Udayavani |

ಮದ್ದೂರು: ಕೋವಿಡ್ 19 ಸೋಂಕು ನಿಯಂತ್ರಣಕ್ಕೆಭಾರತವನ್ನು ಲಾಕ್‌ಡೌನ್‌ ಮಾಡಲಾಗಿದ್ದು, ಅದು ಮುಗಿಯುವವರೆಗೆ ನಿರಾಶ್ರಿತರು ಹಾಗೂ ದಿನಗೂಲಿ ನೌಕರರಿಗೆ ಪ್ರತಿನಿತ್ಯ ಆಹಾರ ವಿತರಣೆ ಜವಾಬ್ದಾರಿಯನ್ನು ಶಾಸಕ ಡಿ.ಸಿ.ತಮ್ಮಣ್ಣ ವಹಿಸಿಕೊಂಡಿದ್ದಾರೆ.

Advertisement

ನಗರದ ಶಾದಿ ಮಹಲ್‌ನಲ್ಲಿ ಆಹಾರ ತಯಾರಿ ಮಾಡಲು ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದು, ತಯಾರಿಕಾ ಸಮಯದಲ್ಲೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಪಟ್ಟಣ ಪುರಸಭೆಯ 23 ವಾರ್ಡ್‌, 32 ಗ್ರಾಪಂ ವ್ಯಾಪ್ತಿಯಲ್ಲಿ ಬರುವ ನಿರಾಶ್ರಿತರಿಗೆ ಪ್ರತಿನಿತ್ಯ ಆಹಾರ ವಿತರಣೆಗೆ ಕ್ರಮ ವಹಿಸಲಾಗಿದೆ.

ಇನ್ನು 14 ದಿನ ಪ್ರತಿನಿತ್ಯ ಎರಡು ಬಾರಿ ಆಹಾರ ವಿತರಣೆ ಮಾಡಲಾಗುವುದು. ಗ್ರಾಪಂಗಳಲ್ಲಿ ಅಗತ್ಯ ದಿನಬಳಕೆ ವಸ್ತುಗಳನ್ನು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ವಿತರಣೆ ಮಾಡುವುದಾಗಿ ತಹಶೀಲ್ದಾರ್‌ ವಿಜಯ ಕುಮಾರ್‌ ಹೇಳಿದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಮುನಿರಾಜು, ತಾಲೂಕು ವೈದ್ಯಾಧಿಕಾರಿ ಡಾ.ಆಶಾಲತಾ, ಟಿಎಪಿಸಿಎಂಎಸ್‌ ಅಧ್ಯಕ್ಷ ಮಹದೇವ, ಜೆಡಿಎಸ್‌ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮಯ್ಯ, ಪುರಸಭಾ ಸದಸ್ಯರಾದ ಪ್ರವೀಣ್‌, ಪ್ರಸನ್ನ, ಆದಿಲ್‌ ಖಾಲಿ ಖಾನ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next