Advertisement

ಶಾಲೆಗಳಿಗೆ ಪಠ್ಯ-ಪುಸ್ತಕ ವಿತರಣೆಗೆ ಸಕಲ ಸಿದ್ದತೆ

12:47 PM Apr 26, 2022 | Team Udayavani |

ಆಳಂದ: ಸಾರ್ವಜನಿಕ ಶಿಕ್ಷಣ ಇಲಾಖೆ ಮೇ 15ರಂದು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಆರಂಭಕ್ಕೆ ನಿರ್ಧರಿಸಿದ್ದು, ಶಾಲೆಗಳ ಆರಂಭಕ್ಕೂ ಮೊದಲೇ ಪಠ್ಯ-ಪುಸ್ತಕ ವಿತರಣೆ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

Advertisement

ತಾಲೂಕಿನ ಶಾಲೆಗಳಿಗೆ ಪುಸ್ತಕ ಹಂಚಿಕೆ ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗುಲಮಡಿ ನೇತೃತ್ವದಲ್ಲಿ ಸಿಬ್ಬಂದಿ ತಂಡ ಕಾರ್ಯಪ್ರವೃತ್ತವಾಗಿದ್ದು, ಶೇ. 20ರಷ್ಟು ಪುಸ್ತಕ ದಾಸ್ತಾನು ಮಾಡಿಕೊಂಡಿದ್ದು, ಇನ್ನುಳಿದ ಪುಸ್ತಕಗಳ ದಾಸ್ತಾನಿಗೆ ಮುಂದಾಗಿದೆ.

ಪುಸ್ತಕ ಬೇಡಿಕೆ: ತಾಲೂಕಿನ 1ರಿಂದ 10ನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಒಟ್ಟು 1ರಿಂದ 8ನೇ ತರಗತಿ ವರೆಗೆ 304 ಶಾಲೆ, 49 ಪ್ರೌಢಶಾಲೆ ಮತ್ತು ಅನುದಾನಿತ 19 ಪ್ರಾಥಮಿಕ ಶಾಲೆ, 11 ಪ್ರೌಢಶಾಲೆಗಳಿಗೆ ಉಚಿತವಾಗಿ ವಿತರಿಸಲು 509238 ಪುಸ್ತಕಗಳ ಬೇಡಿಕೆ ಇದೆ.

ಈಗಾಗಲೇ 111770 ಪುಸ್ತಕಗಳ ದಾಸ್ತಾನು (ಶೇ. 22) ಕೈಗೊಳ್ಳಲಾಗಿದೆ. ಇದಕ್ಕೆ ಹೊರತಾಗಿಯೂ ಅನುದಾನ ರಹಿತ ಶಾಲೆಗಳಾದ 125 ಪ್ರಾಥಮಿಕ, ಪ್ರೌಢಶಾಲೆಗಳಿಗೆ ಮಾರಾಟಕ್ಕಾಗಿ ವಿವಿಧ ವಿಷಯಗಳ 64866 ಪುಸ್ತಕಗಳ ಬೇಡಿಕೆಯಿದ್ದು, 9738 ಪುಸ್ತಕಗಳು ದಾಸ್ತಾನು (ಶೇ. 20ರಷ್ಟು) ಮಾಡಲಾಗಿದೆ. ಇನ್ನೂ ಮೂರು ಲಾರಿ ಪುಸ್ತಕಗಳು ಬಂದಿವೆ. ದಾಸ್ತಾನು ಕಾರ್ಯ ನಡೆದಿದೆ.

ದಾಸ್ತಾನು ಕೈಗೊಂಡು ಪುಸ್ತಕಗಳನ್ನು ಏಪ್ರಿಲ್‌ ತಿಂಗಳ ಕೊನೆ ವಾರದಲ್ಲಿ ಏಕಕಾಲಕ್ಕೆ ತಾಲೂಕಿನ ಎಲ್ಲ ಶಾಲೆಗಳ ಮೂಲಕ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುವ ಕಾರ್ಯ ಕೈಗೊಂಡು ಮೇ 15ಕ್ಕೆ ಶಾಲಾ ಆರಂಭೋತ್ಸವ ಅದ್ಧೂರಿಯಾಗಿ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

Advertisement

ಕಳೆದೆರಡು ವರ್ಷಗಳಿಂದ ಕೋವಿಡ್‌-19 ಹಿನ್ನೆಲೆಯಲ್ಲಿ ಶೈಕ್ಷಣಿಕವಾಗಿ ಮಕ್ಕಳಿಗೆ ತೊಂದರೆಯಾಗಿದೆ. ಕುಂಠಿತವಾದ ಶೈಕ್ಷಣಿಕ ಗುಣಮಟ್ಟ ಸರಿದೂಗಿಸಲು ಗ್ರಾಮೀಣ ಭಾಗದ ಮಕ್ಕಳಿಗೆ ಶೈಕ್ಷಣಿಕ ಅನುಕೂಲ ಕಲ್ಪಿಸಲು ಶಾಲಾ ಆರಂಭದ ಮುಂಚೆಯೇ ಶಾಲೆಗಳ ಎಲ್ಲ ಮಕ್ಕಳಿಗೆ ಪಠ್ಯ-ಪುಸ್ತಕ ವಿತರಣೆಗೆ ಕ್ರಮ ಕೈಗೊಳ್ಳಲು ಶ್ರಮಿಸಲಾಗುತ್ತಿದೆ. ಅಲ್ಲದೇ, ಶಾಲೆಗಳಲ್ಲಿ ಶಿಕ್ಷಕರ ವರ್ಗಾವಣೆ ನಿಯೋಜನೆ ನಡೆಯಲಿದೆ. ಕೊರತೆ, ಸಾಧಕ-ಬಾಧಕ ಸರಿಪಡಿಸುವ ಕಾರ್ಯ ನಡೆದಿದೆ. –ಚಿತ್ರಶೇಖರ ದೇಗುಲಮಡಿ, ಕ್ಷೇತ್ರ ಶಿಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next