Advertisement

ಬಡವರಿಗೆ ಶೀಘ್ರ ಹಕ್ಕುಪತ್ರ ವಿತರಿಸಿ

04:42 PM Oct 04, 2019 | Team Udayavani |

ಗೌರಿಬಿದನೂರು: ನಗರದ ಸಂತೆ ಮೈದಾನದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡಿರುವ ಬಡವರಿಗೆ ಕೂಡಲೇ ಹಕ್ಕು ಪತ್ರ ನೀಡಬೇಕು ಎಂದು ಶಾಸಕ ಎನ್‌.ಎಚ್‌. ಶಿವಶಂಕರರೆಡ್ಡಿ ಸೂಚಿಸಿದರು.

Advertisement

ನಗರಸಭೆಯಲ್ಲಿ ಕರೆದಿದ್ದ ತುರ್ತು ಸಭೆಯಲ್ಲಿ ಮಾತನಾಡಿ, ತಲೆತಲಾಂತರಗಳಿಂದ ಸಂತೆ ಮೈದಾನದಲ್ಲಿ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಹಾಗೂ ನಾನು, ಸ್ಥಳಕ್ಕೆ ಖುದ್ದು ಭೇಟಿ ನೀಡಿ, ಪರಿಸ್ಥಿತಿ ಖುದ್ದು ಪರಿಶೀಲನೆ ನಡೆಸಿದ್ದೆವು. ಅವರ ಮನವಿ ನ್ಯಾಯಬದ್ಧವಾಗಿದೆ. ಅವರಿಗೆ ಕೂಡ ಹಕ್ಕುಪತ್ರ ನೀಡಿ ಎಂದು ತಿಳಿಸಿದರು.

ನಗರ ಸಭೆಯಲ್ಲಿ ಮಾಜಿ ಸದಸ್ಯರು ತಮ್ಮ ವಾರ್ಡುಗಳ ನೀರಿನ ಬವಣೆ ವಿವರಿಸಿ ಸೂಕ್ತ ಕ್ರಮಕೈಗೊಳ್ಳಬೇಕುಎಂದು ಆಗ್ರಹಿಸಿದರು. ನೆಹರು ಕಾಲೋನಿಯ ಗಂಗರತ್ನಮ್ಮ ಅಂಜಿನಪ್ಪ ಮಾತನಾಡಿ, ಕೋರ್ಟು ಮುಂಭಾಗದ ಬಡವಾಣೆಯಲ್ಲಿ ಕೊಳವೆ ಬಾವಿಯಿದ್ದರೂ ನೀರು ಸರಬರಾಜು ಮಾಡುತ್ತಿಲ್ಲ. ಪೈಪ್‌ಲೈನ್‌ ಹಾಳಾಗಿವೆ ಎಂದು ಸಬೂಬು ಹೇಳುತ್ತ ಜನರನ್ನು ಸಂಕಷ್ಟಕ್ಕೆ ದೂಡಲಾಗುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ಮಾಜಿ ಉಪಾಧ್ಯಕ್ಷ ರಮೇಶ್‌ ಧ್ವನಿ ಗೂಡಿಸಿದರು. ಮಾಜಿ ಅಧ್ಯಕ್ಷರಾದ ಖಲಿ ಉಲ್ಲಾ, ಕಲ್ಪನಾ ರಮೇಶ್‌, ಗೋಪಿನಾಥ್‌ ಗೋಂದರಾಜ್‌ ವಾರ್ಡುಗಳ ನೀರಿನ ಬವಣೆಯ ಬಗ್ಗೆ ಸಭೆಯಲ್ಲಿ ತಿಳಿಸಿದರು. ಆಯುಕ್ತ ಜಿ.ಎನ್‌.ಚಲಪತಿ ಮಾತನಾಡಿ, ಸಧ್ಯದಲ್ಲಿ ನಗರದ ನೀರಿನ ಬವಣೆ ನಿವಾರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಎಂಜಿನಿಯರ್‌ ಕುಮಾರ್‌ ಮಾತನಾಡಿ, ಕೆಲವೆಡೆ ಪೈಪ್‌ಲೈನ್‌ಗಳ ದುರಸ್ತಿ ನಡೆಯುತ್ತಿದೆ.ನಂತರ ನೀರನ್ನು ಸಮರ್ಪಕವಾಗಿ ಪೂರೈಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next