Advertisement
ಅತೃಪ್ತ ಶಾಸಕರು ನನ್ನನ್ನು ದೂರ ವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದ್ದರು ಎಂದು ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ಸರಿ ಎಂದು ಮಾಜಿ ಸಿಎಂ ತಿಳಿಸಿದ್ದಾರೆ.
Related Articles
Advertisement
ನಾವು ಹದಿನೈದು ಶಾಸಕರು ಒಟ್ಟಾಗಿದ್ದು, ನಮ್ಮ ನಿರ್ಧಾರ ಗಟ್ಟಿಯಾಗಿದೆ. ನಾವು ಬಂಡೆಯಂತಿದ್ದೇವೆ, ಮಂಗಳವಾರ ಬೆಂಗಳೂರಿಗೆ ಬಂದು ಪತ್ರಿಕಾಗೋಷ್ಠಿ ನಡೆಸಿ ರಾಜೀನಾಮೆಗೆ ಕಾರಣ ಬಹಿರಂಗಪಡಿಸುತ್ತೇವೆ ಎಂದರು.
ನಾಗರಾಜ್ ಮಾತನಾಡಿ, ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಸರಿಯಾಗಿ ನಿಭಾಯಿಸಲಿಲ್ಲ. ನಾವು ನೋವು ಹೇಳಿಕೊಂಡರೆ ಗಮನ ನೀಡಲಿಲ್ಲ. ಈಗ ನಮ್ಮನ್ನೇ ದೂರುತ್ತಿದ್ದಾರೆ. ನಾವು ಯಾರನ್ನೂ ಸಂಪರ್ಕಿಸಿಲ್ಲ. ಎಲ್ಲವೂ ಸುಳ್ಳು ಎಂದರು.
ಎಂ.ಬಿ. ಪಾಟೀಲ್ ಹೇಳಿದ್ದೇನು?
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಎಂ.ಬಿ.ಪಾಟೀಲ್, ಮುಂಬಯಿಯಲ್ಲಿರುವ ಅತೃಪ್ತ ಇಬ್ಬರು ಶಾಸಕರು ಶುಕ್ರವಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೊಬೈಲ್ಗೆ ಕರೆ ಮಾಡಿ ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಅವರು ಕರೆ ಸ್ವೀಕರಿಸಿಲ್ಲ ಎಂದಿದ್ದರು. ಯಡಿಯೂರಪ್ಪನವರು ಏನೆಲ್ಲ ತಂತ್ರಗಾರಿಕೆ ಮಾಡಿದರೂ ಅವರ ಸರಕಾರಕ್ಕೆ ಆರು ತಿಂಗಳಿಂದ ಒಂದು ವರ್ಷ ಮಾತ್ರ ಆಯುಷ್ಯ ಇದೆ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್- ಜೆಡಿಎಸ್ ಚುನಾವಣೆಗೆ ಸಿದ್ಧತೆ
ಅತೃಪ್ತ ಶಾಸಕರ ಪೈಕಿ ಮೂವರ ಸದಸ್ಯತ್ವ ಅನರ್ಹವಾದದ್ದು ಬಿಟ್ಟರೆ, ಉಳಿದವರ ಬಗ್ಗೆ ನಿರ್ಧಾರ ಆಗಿಲ್ಲ. ಈ ನಡುವೆ ಕಾಂಗ್ರೆಸ್, ಜೆಡಿಎಸ್ ಉಪಚುನಾವಣೆಗೆ ತಯಾರಿ ನಡೆಸಿವೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಈ ಕುರಿತು ಶನಿವಾರ ಸಭೆ ನಡೆಸಿದರು.
ಜತೆಗೆ ಉಪಚುನಾವಣೆ ನಡೆದರೆ, ಗೋಕಾಕ್‌ಗೆಲಖನ್ ಜಾರಕಿಹೊಳಿ, ಕಾಗವಾಡಕ್ಕೆ ಪ್ರಕಾಶ್ ಹುಕ್ಕೇರಿ, ಚಿಕ್ಕಬಳ್ಳಾಪುರಕ್ಕೆ ಶಾಸಕ ಡಾ| ಎಂ.ಸಿ. ಸುಧಾಕರ್, ಮಹಾ ಲಕ್ಷ್ಮೀ ಬಡಾವಣೆಗೆ ಮಾಗಡಿ ಬಾಲಕೃಷ್ಣ, ರಾಜ ರಾಜೇಶ್ವರಿ ನಗರಕ್ಕೆ ರಾಜ್‌ಕುಮಾರ್ ಅಥವಾ ಪ್ರಿಯಾಕೃಷ್ಣ, ಕೆ.ಆರ್. ಪುರಕ್ಕೆ ನಾರಾಯಣ ಸ್ವಾಮಿ, ಕೆ.ಆರ್. ಪೇಟೆಗೆ ಚೆಲುವ ರಾಯಸ್ವಾಮಿ ಅಥವಾ ಕೆ.ಬಿ. ಚಂದ್ರಶೇಖರ್, ಶಿವಾಜಿ ನಗರಕ್ಕೆ ರಿಜ್ವಾನ್ ಹರ್ಷದ್ ಹೆಸರು ಪ್ರಸ್ತಾಪವಾಯಿತು ಎನ್ನಲಾಗಿದೆ.
ಅತ್ತ ದೇವೇಗೌಡರೂ ಉಪಚುನಾವಣೆಗೆ ತಮ್ಮವರಿಗೆ ಸಜ್ಜಾಗುವಂತೆ ಹೇಳಿದ್ದಾರೆ.