Advertisement
ಇತ್ತೀಚಿನ ಬೆಳವಣಿಗೆ ಪ್ರಕಾರ ಬಿಸಿಸಿಐ ಸದ್ಯ 6 ತಾಣಗಳಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸುವ ಯೋಜನೆಯಲ್ಲಿದೆ. ಇವುಗಳೆಂದರೆ ಮುಂಬಯಿ, ಚೆನ್ನೈ, ಹೊಸದಿಲ್ಲಿ, ಬೆಂಗಳೂರು, ಅಹ್ಮದಾಬಾದ್ ಮತ್ತು ಕೋಲ್ಕತಾ. ಇದಕ್ಕೂ ಮೊದಲು ಕೇವಲ 2 ಅಥವಾ 3 ಕೇಂದ್ರಗಳಲ್ಲಿ ಐಪಿಎಲ್ ನಡೆಸುವ ಯೋಜನೆಯೂ ಇತ್ತು. ಇದಕ್ಕಾಗಿ ಮುಂಬಯಿ, ಪುಣೆ ಮತ್ತು ಅಹ್ಮದಾಬಾದ್ ಆಯ್ಕೆಯಾಗಿದ್ದವು.
ಆದರೀಗ ಬಿಸಿಸಿಐ ಯೋಜನೆ ಬದಲಾಗಿದೆ. ತಾಣಗಳನ್ನು ಮೂರರಿಂದ ಆರಕ್ಕೆ ಏರಿಸಲು ಬಿಸಿಸಿಐ ನಿರ್ಧರಿಸಿದೆ. ಆಗ ಕೆಲವು ಫ್ರಾಂಚೈಸಿಗಳಿಗೆ ತವರಿನಲ್ಲಿ ಪಂದ್ಯಗಳನ್ನಾಡಲು ಸಾಧ್ಯವಾಗದು. ಸನ್‌ರೈಸರ್ ಹೈದರಾಬಾದ್, ರಾಜ ಸ್ಥಾನ್ ರಾಯಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳಿಗೆ ತವರಿನ ಪಂದ್ಯ ತಪ್ಪಲಿದೆ. “ಐಪಿಎಲ್ ಪಂದ್ಯಗಳನ್ನು ಒಂದೆ ರಡು ಕೇಂದ್ರಗಳಿಗೆ ಸೀಮಿತಗೊಳಿಸು ವುದಕ್ಕಿಂತ ಐದಾರು ತಾಣಗಳಲ್ಲಿ ಆಯೋಜಿಸುವ ನಿರ್ಧಾರ ಸ್ವಾಗ ತಾರ್ಹ. ಆದರೂ ಇದರಿಂದ ಹೋಮ್ ಆ್ಯಂಡ್ ಎವೇ ಮಾದರಿ ಸಾಧ್ಯ ವಾಗದು. ಹಾಗೆಯೇ ಅಹ್ಮದಾಬಾದ್‌ನಲ್ಲಿ ಪಂದ್ಯ ನಡೆಯುವುದರಿಂದ ಯಾವ ಫ್ರಾಂಚೈಸಿಗೂ ಲಾಭವಿಲ್ಲ. ಎಲ್ಲರಿಗೂ ಇದೊಂದು ತಟಸ್ಥ ಕೇಂದ್ರವಾಗಿರುತ್ತದೆ. ಇದರ ಬದಲು ಹೈದರಾಬಾದ್, ಪಂಜಾಬ್ ಮತ್ತು ರಾಜಸ್ಥಾನ್ ತಂಡಗಳಿಗೂ ತವರು ಪಂದ್ಯ ಸಿಗುವ ರೀತಿಯಲ್ಲಿ ಹಿಂದಿ ನಂತೆಯೇ ಕೂಟವನ್ನು ನಡೆಸುವುದು ಸೂಕ್ತ’ ಎಂಬುದಾಗಿ ಫ್ರಾಂಚೈಸಿಯ ಮುಖ್ಯಸ್ಥ ರೊಬ್ಬರು ಹೇಳಿದ್ದಾರೆ.
Related Articles
Advertisement
ಈ ನಡುವೆ ಐಪಿಎಲ್ ಯಾವಾಗ ಆರಂಭವಾಗುತ್ತದೆ, ಪ್ರೇಕ್ಷಕರಿಗೆ ಅವಕಾಶವಿದೆಯೇ ಎಂಬುದು ಪ್ರಶ್ನೆ ಗಳಾಗಿಯೇ ಉಳಿದಿವೆ.
ಹೈದರಾಬಾದ್‌ಗೂ ಆತಿಥ್ಯ ನೀಡಿಇದೇ ವೇಳೆ ಹೈದರಾಬಾದ್‌ಗೂ ಎಂದಿನಂತೆ ಐಪಿಎಲ್ ಆತಿಥ್ಯ ನೀಡುವಂತೆ “ತೆಲಂಗಾಣ ರಾಷ್ಟ್ರ ಸಮಿತಿ’ (ಟಿಆರ್‌ಎಸ್) ಬಿಸಿಸಿಐಗೆ ಮನವಿ ಸಲ್ಲಿಸಿದೆ. ಹಾಗೆಯೇ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಮುಂಬಯಿಯಲ್ಲಿ ಪಂದ್ಯಗಳನ್ನು ಆಡಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಕೂಡ ಕೇಳಿಬಂದಿದೆ. ಆಗ ಹೈದರಾಬಾದ್ ಸೇರಿದಂತೆ ಉಳಿದ ಕೇಂದ್ರಗಳಿಗೆ ಆತಿಥ್ಯ ಲಭಿಸಬಹುದು ಎಂಬ ಲೆಕ್ಕಾಚಾರವೂ ಇದೆ.