Advertisement

ಕಲ್ಪತರು ನಾಡಿನಲ್ಲಿ “ಕೈ’ತಪ್ಪಿದ ಕ್ಷೇತ್ರ: ಅಸಮಾಧಾನ 

12:30 AM Mar 15, 2019 | Team Udayavani |

ತುಮಕೂರು: ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರಕೋಟೆ ತುಮಕೂರು ಲೋಕಸಭಾ ಕ್ಷೇತ್ರ. ಇತ್ತೀಚೆಗೆ ನಾಲ್ಕು ಚುನಾವಣೆಗಳಿಂದ ತನ್ನ ಸ್ಥಾನ ಕಳೆದುಕೊಂಡಿದ್ದ ಕಾಂಗ್ರೆಸ್‌ ಕಳೆದ ಚುನಾವಣೆಯಲ್ಲಿ ಮೋದಿ ಅಲೆಯ ನಡುವೆ “ಕೈ’ ಕಮಾಲು ಮೆರೆದಿತ್ತು. ಈ ಕ್ಷೇತ್ರ ಯಾವುದೇ ಕಾರಣಕ್ಕೂ ಜೆಡಿಎಸ್‌ ಪಾಲಾಗುವುದಿಲ್ಲ ಎಂದೇ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಲೆಕ್ಕಾಚಾರ ಹಾಕಿದ್ದರು. ಇದೀಗ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದಕ್ಕೆ ಅಸಮಾಧಾನ ಭುಗಿಲೆದ್ದಿದೆ.

Advertisement

ಕಾಂಗ್ರೆಸ್‌ ಹಾಲಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್‌ ವಂಚಿಸಿ, ಜೆಡಿಎಸ್‌ ಅಭ್ಯರ್ಥಿಗೆ ಸೀಟು ಬಿಟ್ಟುಕೊಟ್ಟಿರುವುದಕ್ಕೆ ಕಾಂಗ್ರೆಸ್‌ ಮುಖಂಡರ ವಿರುದಟಛಿ ಆಕ್ರೋಶ ವ್ಯಕ್ತವಾಗುತ್ತಿದೆ. ಮುದ್ದಹನುಮೇಗೌಡರಿಗೇ ಪಕ್ಷದ ಟಿಕೆಟ್‌ ನೀಡಬೇಕೆಂಬ ಒತ್ತಡವನ್ನು ಕಾಂಗ್ರೆಸ್‌ ಕಾರ್ಯಕರ್ತರು ಹಾಕುತ್ತಿದ್ದಾರೆ.

ಪರಮೇಶ್ವರ್‌ಗೆ ತೀವ್ರ ಹಿನ್ನಡೆ: ಕ್ಷೇತ್ರದಿಂದ ಜೆಡಿಎಸ್‌ ಸ್ಪರ್ಧೆ ಮಾಡಿದ್ದೇ ಆದರೆ ಜೆಡಿಎಸ್‌ಗೆ ಕಾಂಗ್ರೆಸ್‌ ಬೆಂಬಲ ನೀಡುತ್ತಾ? ಜೆಡಿಎಸ್‌ಗೆ ಟಿಕೆಟ್‌ ಖಾತ್ರಿ ಆದರೆ ಜೆಡಿಎಸ್‌ಗೆ ಟಕ್ಕರ್‌ ನೀಡಲು ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಪಕ್ಷೇತರರಾಗಿ ನಿಲ್ಲುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಮೈಸೂರಿನಲ್ಲಿ ಸಿದ್ದರಾಮಯ್ಯಗೆ ಟಿಕೆಟ್‌ ವಿಚಾರದಲ್ಲಿ ಮೇಲುಗೈಯಾಗಿದ್ದು, ತುಮಕೂರು ಕ್ಷೇತ್ರದ ಟಿಕೆಟ್‌ ವಿಚಾರಕ್ಕೆ ಪರಮೇಶ್ವರ್‌ಗೆ ತೀವ್ರ ಹಿನ್ನಡೆಯಾಗಿದೆ. ಈ
ನಡುವೆ ಮುದ್ದಹನುಮೇಗೌಡರ ನಿಲುವು ಇನ್ನೂ ಬಹಿರಂಗವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next