Advertisement

ಕಾಂಗ್ರೆಸ್‌ನಿಂದ ಪರಿಶಿಷ್ಟರ ಕಡೆಗಣನೆ: ಕಾರಜೋಳ

05:26 PM Dec 04, 2019 | Team Udayavani |

ರಾಣಿಬೆನ್ನೂರ: ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಇನ್ನು ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡದವರ ಸ್ಥಿತಿಗತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವ ಕಾಂಗ್ರೆಸ್‌ ಪರಿಶಿಷ್ಟರನ್ನು ಕಡೆಗಣಿಸಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಆರೋಪಿಸಿದರು.

Advertisement

ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ತಾಲೂಕಿನ ಕೊಡಿಯಾಲ ಹೊಸಪೇಟೆಯ ವಿವಿಧ ಬಡಾವಣೆ ಸೇರಿದಂತೆ ಅಂಬೇಡ್ಕರ್‌ ಕಾಲೋನಿಗೆ ಭೇಟಿನೀಡಿ ಬಿಜೆಪಿ ಅಭ್ಯರ್ಥಿ ಅರುಣಕುಮಾರ್‌ ಪೂಜಾರ್‌ ಪರ ಮತಯಾಚಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ ಅವರ ಜೀವನ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕಡೆಗಣಿಸಿದೆ ಎಂದು ಆರೋಪಿಸಿದರು.

ದಿನೇಶಕುಮಾರ, ಗಂಗಾಧರ ಕೊಡಿಯಾಲ, ಜುಂಜಪ್ಪ ಕೋಳಿ, ಬಸವರಾಜ ಹಿರೇಮಠ, ನಾಗರಾಜ ಗುತ್ತೂರ, ಗುರುಬಸಪ್ಪ ಗುತ್ತೂರ, ವಿಜಯ ಹಿತ್ತಲಮನಿ, ಪ್ರವೀಣ ಕರಡೆಪ್ಪನವರ, ಬಸವರಾಜ ಕರೂರ, ಕಾಳಪ್ಪ ಅಂಬಿಗೇರ, ಮಂಜು ಕರಡೆಪ್ಪನವರ ಇದ್ದರು. ನಂತರ ತಾಲೂಕಿನ ಕರೂರು, ಚಳಗೇರಿ, ನದಿಹರಳಹಳ್ಳಿ, ಐರಣಿ, ಹಿರೇಬಿದರಿ ಹಾಗೂ ಮೆಡೇರಿ ಗ್ರಾಮಗಳಿಗೆ ತೆರಳಿ ಅಭ್ಯರ್ಥಿ ಪರ ಮತಯಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next