Advertisement

Politics: “ಮಹಾ” ಶಾಸಕರ ಅನರ್ಹತೆ ಜ.10ರೊಳಗೆ ಇತ್ಯರ್ಥ: ಸುಪ್ರೀಂ ಕೋರ್ಟ್‌

08:47 PM Dec 15, 2023 | Team Udayavani |

ನವದೆಹಲಿ: ಮಹಾರಾಷ್ಟ್ರದಲ್ಲಿ ಸದ್ಯ ಸಿಎಂ ಏಕನಾಥ ಶಿಂಧೆ ಜತೆಗೆ ಗುರುತಿಸಿಕೊಂಡಿರುವ ಶಾಸಕರನ್ನು ಅನರ್ಹಗೊಳಿಸುವ ಬಗೆಗಿನ ದಿನಾಂಕವನ್ನು ಸುಪ್ರೀಂಕೋರ್ಟ್‌ ಜ.10ರ ವರೆಗೆ ವಿಸ್ತರಿಸಿದೆ. ಅದರ ಒಳಗಾಗಿ ಸ್ಪೀಕರ್‌ ರಾಹುಲ್‌ ನರ್ವೇಕರ್‌ ಅವರು ಅನರ್ಹತೆ ಬಗೆಗಿನ ಹಲವು ಅರ್ಜಿಗಳನ್ನು ವಿಚಾರಣೆ ನಡೆಸಿ ಇತ್ಯರ್ಥಗೊಳಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠ ಸೂಚನೆ ನೀಡಿದೆ.

Advertisement

ಸದ್ಯ ನಿಗದಿಯಾಗಿರುವ ಪ್ರಕಾರ ಡಿ.31ರ ಒಳಗೆ ಸಂವಿಧಾನದ ಹತ್ತನೇ ಷೆಡ್ನೂಲ್‌ನ ಅನ್ವಯ ಶಾಸಕರನ್ನು ಅನರ್ಹಗೊಳಿಸುವ ಬಗ್ಗೆ ತೀರ್ಮಾನಿಸಬೇಕು ಎಂದು ಸೂಚಿಸಲಾಗಿತ್ತು. ಹೆಚ್ಚುವರಿಯಾಗಿ ಹತ್ತು ದಿನ ಕೇಳಿದ್ದರಿಂದ ನ್ಯಾಯಪೀಠ ಅದನ್ನು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next