Advertisement
ಆದರೆ, ಶಿಂಧೆ ವಿರುದ್ಧ ಮತ ಚಲಾಯಿಸಿದ ಶಾಸಕ ಆದಿತ್ಯ ಠಾಕ್ರೆ ಅವರಿಗೆ ಮಾತ್ರ ನೋಟಿಸ್ ನೀಡಿಲ್ಲ. ಬಾಳಾ ಸಾಹೇಬ್ ಠಾಕ್ರೆ ಅವರನ್ನು ನಾವು ಗೌರವಿಸುವ ಕಾರಣ, ಆದಿತ್ಯ ಅವರಿಗೆ ನೋಟಿಸ್ ಜಾರಿ ಮಾಡಿಲ್ಲ ಎಂದು ಚೀಫ್ ವಿಪ್ ಭರತ್ ಸ್ಪಷ್ಟಪಡಿಸಿದ್ದಾರೆ.
ಉದ್ಧವ್ ವಿರುದ್ಧ ಬಂಡಾಯವೆದ್ದ ಏಕನಾಥ ಶಿಂಧೆ ಅವರನ್ನೇ ಸಿಎಂ ಮಾಡುವಂತೆ ಪಕ್ಷದ ಹೈಕಮಾಂಡ್ ಮುಂದೆ ಪ್ರಸ್ತಾಪಿಸಿದ್ದೇ ನಾನು ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ. ಮಂಗಳವಾರ ತಮ್ಮ ಹುಟ್ಟೂರು ನಾಗ್ಪುರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನಾನು ಡಿಸಿಎಂ ಆಗಲು ಮಾನಸಿಕವಾಗಿ ಸಿದ್ಧನಿರಲಿಲ್ಲ. ಆದರೆ, ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆದ ಮೇಲೆ ಹಾಗೂ ಜೆಪಿ ನಡ್ಡಾ, ಅಮಿತ್ ಶಾ ಅವರು ಮಧ್ಯಪ್ರವೇಶಿಸಿದ ಬಳಿಕ ನನ್ನ ನಿರ್ಧಾರ ಬದಲಿಸಿಕೊಂಡೆ ಎಂದೂ ಹೇಳಿದ್ದಾರೆ.