ಲಕ್ನೋ: ವಾದ್ಯದವರಿಗೆ ಹಣ ಪಾವತಿಸುವ ವಿಚಾರದಲ್ಲಿ ವಧು ಮತ್ತು ವರನ ಕಡೆಯವರ ನಡುವೆ ವಿವಾದ ನಡೆದಿದ್ದು, ಕೊನೆಗೂ ವರ ಮಂಟಪದಿಂದ ಹೊರನಡೆದ ಪರಿಣಾಮ ಮದುವೆ ಮುರಿದು ಬಿದ್ದ ಘಟನೆ ಉತ್ತರಪ್ರದೇಶದ ಸಹರಾನ್ ಪುರದಲ್ಲಿ ನಡೆದಿದೆ.
ಇದನ್ನೂ ಓದಿ:ಸಿದ್ದರಾಮಯ್ಯನಿಗೆ ಹುಚ್ಚು ಹಿಡಿದಿದೆ, ಹುಚ್ಚು ಬಿಡಿಸಲು ಪ್ರಪಂಚದಲ್ಲೇ ಔಷಧಿ ಇಲ್ಲ: ಈಶ್ವರಪ್ಪ
ಧರ್ಮೇಂದ್ರ ಎಂಬ ವರ ಫರೂಖಾಬಾದ್ ನ ಕಂಪಿಲ್ ನಿಂದ ಮಿರ್ಜಾಪುರಕ್ಕೆ ಬ್ಯಾಂಡ್ (ವಾದ್ಯ)ನೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದ್ದ ಎಂದು ಮಿರ್ಜಾಪುರ ಪೊಲೀಸ್ ಠಾಣಾಧಿಕಾರಿ ಅರವಿಂದ್ ಕುಮಾರ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.
ವಿವಾಹ ಮಂಟಪದಲ್ಲಿ ವಿಧಿ, ವಿಧಾನಗಳು ನಡೆಯುತ್ತಿರುವ ಸಂದರ್ಭದಲ್ಲಿ ವಾದ್ಯ ವೃಂದದವರು ವರನ ಕಡೆಯವರಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಆದರೆ ವರನ ಕಡೆಯವರು ನಾವು ಹಣ ಕೊಡುವುದಿಲ್ಲ ಅದನ್ನು ವಧುವಿನ ಕಡೆಯವರು ನೀಡುತ್ತಾರೆ ಎಂದು ಹೇಳಿದ್ದರು.
ಹಣದ ವಿಚಾರದಲ್ಲಿ ವರ ಮತ್ತು ವಧುವಿನ ಸಂಬಂಧಿಗಳ ನಡುವೆ ವಾಗ್ವಾದ ನಡೆದಿದ್ದು, ಇದರಿಂದಾಗಿ ತಮ್ಮ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಹೇಳಿ, ವರ ಮಂಟಪದಿಂದ ಹೊರ ನಡೆದಿರುವುದಾಗಿ ಪೊಲೀಸರು ವಿವರಿಸಿದ್ದಾರೆ.
ಬ್ಯಾಂಡ್ ನವರಿಗೆ ಹಣ ನೀಡುವ ವಿಚಾರದಲ್ಲಿ ವಿವಾಹ ಮುರಿದು ಬಿದ್ದಿದ್ದರಿಂದ ವಧುವಿನ ಸಂಬಂಧಿಗಳು ಕೂಡಾ ಸಂಬಂಧವನ್ನು ಕಡಿದುಕೊಂಡಿರುವುದಾಗಿ ವರದಿ ತಿಳಿಸಿದೆ.