Advertisement

ತ್ಯಾಜ್ಯ ವಿಲೇವಾರಿಗೊಳಿಸಿ ಮಾದರಿಯಾದರು

11:09 PM Jun 24, 2019 | Team Udayavani |

ಉಪ್ಪಳ: ಮಂಗಲ್ಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಉಪ್ಪಳ ರೈಲ್ವೇ ಸ್ಟೇಶನ್‌ ಪರಿಸರದ ವಿದ್ಯುತ್‌ ಸಬ್‌ಸ್ಟೇಶನ್‌ ಪಕ್ಕದಲ್ಲಿ ಶೇಖರಣೆಯಾದ ತ್ಯಾಜ್ಯವನ್ನು ಉಪ್ಪಳ ಮಣಿಮುಂಡ ಬ್ರದರ್ಸ್‌ನ ಕಾರ್ಯಕರ್ತರು ಪರಿಶ್ರಮದಿಂದ ಶ್ರಮದಾನದ ಮೂಲಕ ವಿಲೇವಾರಿಗೊಳಿಸಿ ಇತರರಿಗೆ ಮಾದರಿಯಾದರು.

Advertisement

ಈ ಪರಿಸರದಲ್ಲಿ ನೀರು ಹರಿದು ಹೋಗಲು ಒಂದು ಚರಂಡಿಯನ್ನು ನಿರ್ಮಿಸಲಾಗಿದ್ದು ಬೇಸಿಗೆ ಕಾಲದಲ್ಲಿ ಈ ಚರಂಡಿಯಲ್ಲಿ ಪರಿಸರವಾಸಿಗಳು ಹಾಗು ದಾರಿ ಹೋಕರು ಮನೆಗಳ ತ್ಯಾಜ್ಯಗಳನ್ನು ಇಲ್ಲಿ ಬಿಸಾಡುವುದು ಮಾಮೂಲಿಯಾಗಿದೆ.

ಇದರಲ್ಲಿ ಮಕ್ಕಳ ಪ್ಯಾಂಪರ್ಸ್‌ ಅತಿ ಹೆಚ್ಚಿನ ಮಟ್ಟದಲ್ಲಿ ಶೇಖರಣೆಯಾಗಿದ್ದು ಈ ಬಗ್ಗೆ ಸ್ಥಳೀಯರು ಹಲವಾರು ಸಲ ಮಂಗಲ್ಪಾಡಿ ಪಂಚಾಯತ್‌ಅಧಿಕೃತರಲ್ಲಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಹಲವು ಬಾರಿ ತಮ್ಮ ಅಳಲನ್ನು ತೋಡಿಕೊಂಡರೂ ಯಾರು ಇತ್ತ ಕಡೆ ಗಮನ ಹರಿಸಿಲ್ಲವೆಂಬುದಾಗಿ ಊರವರು ಹೇಳುತ್ತಿದ್ದಾರೆ.

ಈ ನಿಟ್ಟಿನಲ್ಲಿ ಮನಿಮುಂಡ ಬ್ರದರ್ಸ್‌ನ ನೇತೃತ್ವದಲ್ಲಿ ಈ ಪರಿಸರದ ಶುಚೀಕರಣ ನಡೆದಿದೆ. ಚರಂಡಿಯಲ್ಲಿ ತ್ಯಾಜ್ಯದಿಂದ ಸ್ಥಗಿತ ಗೊಂಡಿದ್ದ ಮಳೆ ನೀರು ಸೂಕ್ತವಾದ ರೀತಿಯಲ್ಲಿ ಹರಿದು ಹೋಗುವಂತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಮನಿಮುಂಡ ಬ್ರದರ್ಸ್‌ ಕಾರ್ಯಕರ್ತರಾದ ಜಫರುಲ್ಲಾ, ಮೊಹಮ್ಮದ್‌ ತಬ್ರಿಸ್‌, ಮುದಸ್ಸರ್‌ ನಜರ್‌, ಮುಸ್ತಾಕ್‌ ಮೊದಲಾದವರು ನೇತೃತ್ವವನ್ನು ನೀಡಿದರು.

Advertisement

ಪಂಚಾಯತಿಗೆ ಸವಾಲೊಡ್ಡಿ ಇತರರಿಗೆ ಮಾದರಿಯಾದ ಶ್ರಮದಾನವನ್ನು ವೀಕ್ಷಿಸಲು ಸ್ಥಳೀಯ ವಾರ್ಡ್‌ ಸದಸ್ಯರಾದ ಜೀನತ್‌ ಸಕರಿಯಾ ಹಾಗು ಸುಜಾತ ಶೆಟ್ಟಿ ಆಗಮಿಸಿದ್ದು ವಿಶೇಷವಾಗಿತ್ತೆಂದು ಸ್ಥಳೀಯರು ತಿಳಿಸಿದರು.

ಜನಪ್ರತಿನಿಧಿಗಳ, ಅಧಿಕಾರಿಗಳ ಅಸಡ್ಡೆ
ತ್ಯಾಜ್ಯಗಳು ರಸ್ತೆಗಳ ಮೇಲ್ಭಾಗಕ್ಕೆ ಬಂದು ಅದನ್ನು ಮೆಟ್ಟಿಕೊಂಡೇ ನಡೆದಾಡುವಂತಹ ಪರಿಸ್ಥಿತಿ ಬಂದೊದಗಿದೆ. ಮಳೆಗಾಲಕ್ಕೆ ಮುನ್ನವೇ ಎಚ್ಚೆತ್ತುಗೊಳ್ಳಬೇಕಾಗಿದ್ದ ಪಂಚಾಯತ್‌ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಾಢವಾಗಿ ನಿದ್ರೆಗೆ ಜಾರಿರುವುದು ಇವರ ಅಸಡ್ಡೆಯನ್ನು ಎತ್ತಿ ತೋರಿಸುತ್ತಿರುವುದಾಗಿ ಊರವರು ಆಡಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next