Advertisement
ನಗರದಲ್ಲಿ ಸಾಮಾನ್ಯವಾಗಿ ಪ್ರತೀ ದಿನ ಘನತ್ಯಾಜ್ಯ ವಿಲೇವಾರಿ ಕಾರ್ಯ ನಡೆಯುತ್ತದೆ. ಆದರೆ, ಮಂಗಳವಾರ ಸಂಜೆಯಾಗುತ್ತಿದ್ದರೂ ಕಸದ ವಾಹನ ಬರದಿದ್ದುದನ್ನು ಕಂಡು ಸಾರ್ವಜನಿಕರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು. ಇನ್ನು, ನಗರದ ಮಾರುಕಟ್ಟೆ, ಅಂಗಡಿಗಳು ಸೇರಿದಂತೆ ಮನೆ ಮುಂದೆ ಪ್ಲಾಸ್ಟಿಕ್‌ನಲ್ಲಿ ಕಟ್ಟಿದ್ದ ತ್ಯಾಜ್ಯದ ರಾಶಿ ಬಿದ್ದಿದ್ದವು. ನಗರದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ಹೆಚ್ಚಿನ ಕಾರ್ಮಿಕರು ಬಾದಾಮಿ, ಬಾಗಕೋಟೆ ಪ್ರದೇಶದ ಮಂದಿ ಇರುವುದರಿಂದ ಅಲ್ಲಿ ಮಂಗಳವಾರ ಮತದಾನ ನಡೆದಿತ್ತು. ಇದೇ ಕಾರಣಕ್ಕೆ ಕಾರ್ಮಿಕರು ತೆರಳಿದ್ದಾರೆ. ಇದರಿಂದಾಗಿ ಒಂದು ದಿನಗಳ ಕಾಲ ನಗರದಲ್ಲಿ ತ್ಯಾಜ್ಯ ವಿಲೇವಾರಿ ಸ್ಥಗಿತಗೊಂಡಿತ್ತು.
ಪಾಲಿಕೆ ಪ್ರಭಾರ ನಾರಾಯಣಪ್ಪ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ತ್ಯಾಜ್ಯ ವಿಲೇವಾರಿ ಮಾಡುವ ಹೆಚ್ಚಿನ ಕಾರ್ಮಿಕರು ಮತದಾನದ ಕಾರಣಕ್ಕೆ ತಮ್ಮ ಊರುಗಳಿಗೆ ತೆರಳಿದ್ದಾರೆ. ಇದರಿಂದಾಗಿ ಒಂದು ದಿನಗಳ ಕಾಲ ತ್ಯಾಜ್ಯ ವಿಲೇವಾರಿಯಲ್ಲಿ ವ್ಯತ್ಯಯವಾಗಿದೆ. ಬುಧವಾರದಿಂದ ಎಂದಿನಂತೆ ಕಾರ್ಯ ಸಾಗಲಿದೆ ಎನ್ನುತ್ತಾರೆ.