Advertisement

ಎನ್‌ 95 ಮಾಸ್ಕ್ ಮರುಬಳಕೆಗೆ ಯೋಗ್ಯ

07:08 PM Apr 19, 2020 | Hari Prasad |

ಜಗತ್ತಿನಾದ್ಯಂತ ವೈದ್ಯ ಸಿಬಂದಿ ಕೋವಿಡ್ ವೈರಸ್‌ ಸೋಂಕು ತಡೆ ಹಾಗೂ ಸೋಂಕಿತರ ಚಿಕಿತ್ಸೆಗೆ ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ. ಆದರೆ, ಅವರಿಗೆ ಸೋಂಕು ತಗುಲದಂತೆ ತಡೆಯಲು ಪ್ರಮುಖ ಪಾತ್ರ ವಹಿಸುವ ಎನ್‌ 95 ಮಾಸ್ಕ್ ಸೇರಿ ಇತರ ಅಗತ್ಯ ವೈದ್ಯಕೀಯ ಸುರಕ್ಷತಾ ಉತ್ಪನ್ನಗಳ ಕೊರತೆ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಈ ನಡುವೆ ಮಾಸ್ಕ್ ಗಳ ಮರು ಬಳಕೆ ಕುರಿತು ಹಲವು ಸಂಶೋಧನೆ, ಅಧ್ಯಯನಗಳೂ ನಡೆಯುತ್ತಿವೆ.

Advertisement

ವೈದ್ಯ ಸಿಬಂದಿ ಬಳಸುವ ಎನ್‌ 95 ಮಾಸ್ಕ್ ಗಳನ್ನು ಒಮ್ಮೆ ಬಳಸಿ ಬಿಸಾಡಬೇಕೇ ಅಥವಾ ಮತ್ತೆ ಬಳಸಬಹುದೇ ಎಂಬ ಕುರಿತಂತೆ ಹಲವು ಗೊಂದಲಗಳಿವೆ. ಆದರೆ, ಈ ಮಾಸ್ಕ್ ಗಳನ್ನು ಶಿಸ್ತು ಹಾಗೂ ಸ್ವಚ್ಛತೆಯಿಂದ ಕಾಪಾಡಿಕೊಂಡರೆ ಮೂರು ಬಾರಿ ಬಳಸಬಹುದು ಎಂದು

ಹೇಳಿರುವ ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್‌ಐಎಚ್‌), ಗೊಂದಲಗಳಿಗೆ ತೆರೆ ಎಳೆದಿದೆ. ಆದರೆ ಪ್ರತಿ ಬಳಕೆಯ ಅನಂತರ ಮಾಸ್ಕ್ ಗಳಲ್ಲಿರುವ ರೆಸ್ಪಿರೇಟರ್‌ ಅನ್ನು ನಿರ್ದಿಷ್ಟ ವಿಧಾನದ ಮೂಲಕ ಸ್ವಚ್ಛಗೊಳಿಸಬೇಕು ಎಂದು ಎನ್‌ಐಎಚ್‌ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next