Advertisement
ನಿವಾಸಿಗಳಿಂದ ಹೋರಾಟದ ಎಚ್ಚರಿಕೆ: ನಗರದ ಅರ್ಕಾವತಿ ಬಡಾವಣೆಯಲ್ಲಿರುವ ಗ್ಯಾಸ್ ಗೋಡೌನ್ ಘಟಕದ ಎದುರು ಜಮಾಯಿಸಿದ ನಾಗರಿಕರು, ಏಜೆನ್ಸಿ ಮಾಲಿಕ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಿರಂತರ ಅಪಾಯದ ಆತಂಕಕ್ಕೆ ಕಾರಣವಾಗಿರುವ ಈ ಘಟಕವನ್ನು ಕೂಡಲೇ ಸ್ಥಳಾಂತರಿಸದಿದ್ದರೆ ನಿರಂತರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
Related Articles
Advertisement
ಆತಂಕದಲ್ಲೇ ಜೀವನ: ಬಡಾವಣೆ ನಿವಾಸಿಗಳು ಪ್ರತಿ ನಿತ್ಯ ಆತಂಕದಲ್ಲೇ ದಿನದೂಡುವಂತಾಗಿದೆ. ಒಂದು ಸಿಲಿಂಡರ್ ಸ್ಫೋಟಗೊಂಡರೆ ಭಾರೀ ಅನಾಹುತ ಸಂಭಸುತ್ತದೆ. ನೂರಾರು ಸಿಲಿಂಡರ್ ಒಮ್ಮೆಲೆ ಸ್ಫೋಟಗೊಂಡರೆ ಆಗುವ ಅನಾಹುತ ಊಹೆಗೂ ನಿಲುಕದ್ದು ಆತಂಕ ವ್ಯಕ್ತಪಡಿಸಿದರು. ಗೋದಾಮಿಗೆ ಹೊಂದಿಕೊಂಡಂತೆ ಮನೆಗಳು ನಿರ್ಮಾಣವಾಗಿದೆ. ಅನತಿ ದೂರದಲ್ಲೇ ಶಾಲೆ ಕೂಡ ಇದೆ. ಪೊಲೀಸ್ ವಸತಿ ಗೃಹ ಹಾಗೂ ಸರಕಾರಿ ಅಧಿಕಾರಿಗಳ ವಸತಿ ಗೃಹಗಳೂ ಇವೆ. ಒಂದು ವೇಳೆ ಪ್ರಾಣ ಹಾನಿ ಸಂಭಸಿದರೆ ಜಿಲ್ಲಾಡಳಿತವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ನಾಗರೀಕರು ಎಚ್ಚರಿಸಿದರು.
ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೂ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲಾಗಿದೆ. ಈ ವಿಚಾರದಲ್ಲಿ ಅವರು ಸಹ ಮೌನ ವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. ಪ್ರತಿಭಟನೆಯಲ್ಲಿ ಬಡಾವಣೆಯ ನಿವಾಸಿಗಳಾದ ರಾಜಣ್ಣ, ಪುಟ್ಟರಾಮಣ್ಣ, ಯಶವಂತರಾವ್, ಪೂರ್ಣಚಂದ್ರ, ಹನುಮಂತೇಗೌಡ, ಜಗದೀಶ್, ಬ್ಯಾಂಕ್ ಶಿವಣ್ಣ, ರೈಡ್ ನಾಗರಾಜು, ವಕೀಲ ಅಂಬರೀಷ್, ಕಿರಣ್, ಭೋಜಣ್ಣ ಮತ್ತಿತರರು ಪಾಲ್ಗೊಂಡಿದ್ದರು.