ನವದೆಹಲಿ: ವಿಡಿಯೋ ಸ್ಟ್ರೀಮಿಂಗ್ App ಡಿಸ್ನಿ+ಹಾಟ್ ಸ್ಟಾರ್ ಭಾರತದ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 30ಕ್ಕೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಬರೋಬ್ಬರಿ 2.8 ಮಿಲಿಯನ್ ಸಬ್ಸ್ ಕ್ರೈಬರ್ಸ್ ಅನ್ನು ಕಳೆದುಕೊಂಡಿರುವುದಾಗಿ ಡಿಸ್ನಿ ಸಿಇಒ ಬಾಬ್ ಇಗರ್ ತಿಳಿಸಿದ್ದಾರೆ.
ಇದನ್ನೂ ಓದಿ:Venus; ಶುಕ್ರನಲ್ಲಿದೆ ಆಮ್ಲಜನಕ…: ಹೊಸ ಯೋಜನೆಗಳಿಗೆ ನಾಂದಿ ಹಾಡಿದ ವಿಜ್ಞಾನಿಗಳ ಆವಿಷ್ಕಾರ
2023ನೇ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಡಿಸ್ನಿ + ಹಾಟ್ ಸ್ಟಾರ್ 40.2 ಮಿಲಿಯನ್ ಸಬ್ಸ್ ಕ್ರೈಬರ್ಸ್ ಹೊಂದಿದ್ದು, 3ನೇ ತ್ರೈಮಾಸಿಕದಲ್ಲಿ ಸಬ್ಸ್ ಕ್ರೈಬರ್ಸ್ಸ್ ಗಳ ಸಂಖ್ಯೆ 37.6 ಮಿಲಿಯನ್ ಗೆ ಇಳಿಕೆಯಾಗಿರುವುದಾಗಿ ವರದಿ ವಿವರಿಸಿದೆ.
ಬುಧವಾರ (ನವೆಂಬರ್ 08) ತ್ರೈಮಾಸಿಕ ವರದಿ ಬಂದ ನಂತರ ಇಗರ್ ತಜ್ಞರ ಜೊತೆ ಸಂವಹನ ನಡೆಸಿದ್ದರು. ಭಾರತದಲ್ಲಿ ನಮ್ಮ ವಹಿವಾಟು ಉತ್ತಮವಾಗಿದ್ದು, ಡಿಸ್ನಿ+ಹಾಟ್ ಸ್ಟಾರ್ ಉದ್ಯಮ ಭಾರತದಲ್ಲಿ ಮುಂದುವರಿಯಲಿದೆ ಎಂದು ಇಗರ್ ತಿಳಿಸಿದ್ದಾರೆ.
ಡಿಸ್ನಿ+ಹಾಟ್ ಸ್ಟಾರ್ ವಿಡಿಯೋ ಸ್ಟ್ರೀಮಿಂಗ್ ಹಣ ಗಳಿಸುತ್ತಿದೆ ಆದರೆ ಉದ್ಯಮದ ಮತ್ತೊಂದು ಭಾಗ ತುಂಬಾ ಸವಾಲಿನದ್ದಾಗಿದೆ. ಇದು ದುಬಾರಿಯ ವಹಿವಾಟು ಎಂದು ಇಗರ್ ತಜ್ಞರ ಜೊತೆಗಿನ ಸಮಾಲೋಚನೆ ವೇಳೆ ತಿಳಿಸಿರುವುದಾಗಿ ವರದಿ ವಿವರಿಸಿದೆ.