Advertisement

ಸದ್ಯದಲ್ಲೇ ಎಲ್ಲರಿಗೂ ಸಿಗ್ತಾನೆ “ಮಿಕ್ಕಿ ಮೌಸ್‌’

11:30 AM Jul 08, 2022 | Team Udayavani |

ವಾಷಿಂಗ್ಟನ್‌: ಜಗತ್ಪ್ರಸಿದ್ಧ ಕಾರ್ಟೂನ್ ಪಾತ್ರವಾದ ಮಿಕ್ಕಿ ಮೌಸ್‌ ಅನ್ನು ಸದ್ಯದಲ್ಲೇ ಯಾವ ಕಂಪನಿ ಬೇಕಾದರೂ ಬಳಸಿ ಆ್ಯನಿಮೇಷನ್‌ ಚಿತ್ರ ನಿರ್ಮಿಸಬಹುದಾದ ಅವಕಾಶ ಸಿಗಲಿದೆ ಎಂದು ಮೂಲಗಳು ಹೇಳಿವೆ.

Advertisement

ಮಿಕ್ಕಿ ಮೌಸ್‌ ಎಂಬ ಇಲಿಯ ಪಾತ್ರವನ್ನು ಸೃಷ್ಟಿಸಿದ್ದು ಅಮೆರಿಕದ ಡಿಸ್ನಿ ಕಂಪನಿ. 1928ರ ಅ. 1ರಂದು ಈ ಪಾತ್ರವಿರುವ ಕಾರ್ಟೂನ್ ಗಳು ಹೊರಬಂದಿದ್ದವು.

ಅಮೆರಿಕದಲ್ಲಿರುವ ಕಾನೂನಿನ ಪ್ರಕಾರ, ಯಾವುದೇ ರಚನಾತ್ಮಕ ಕಲೆಯ ಒಡೆತನ 95 ವರ್ಷಗಳವರೆಗೆ ಮಾತ್ರ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಕೈಯ್ಯಲ್ಲಿರಬೇಕು. ಅದು ಮುಗಿದ ಮೇಲೆ ಅದರ ಮೇಲೆ ಯಾರೂ ಹಕ್ಕುಸ್ವಾಮ್ಯ ಚಲಾಯಿಸುವಂತಿಲ್ಲ.

ಹಾಗಾಗಿ, ಮಿಕ್ಕಿ ಮೌಸ್‌ ಪಾತ್ರವನ್ನು ಇನ್ನು ಜಗತ್ತಿನ ಯಾವುದೇ ಚಿತ್ರ ನಿರ್ಮಾಪಕರು ತಮ್ಮಿಷ್ಟದಂತೆ ಬಳಸಲು ಅವಕಾಶ ಸಿಗಲಿದೆ. ಆದರೆ, ಮಿಕ್ಕಿ ಮೌಸ್‌ ಪಾತ್ರವನ್ನಿಟ್ಟುಕೊಂಡು ಡಿಸ್ನಿಯವರು ಸೃಷ್ಟಿಸಿದ್ದ ಸರಣಿಗಳನ್ನು ಮರು ಸೃಷ್ಟಿಸುವಂತಿಲ್ಲ ಅಷ್ಟೆ.

Advertisement

Udayavani is now on Telegram. Click here to join our channel and stay updated with the latest news.

Next