ಬೆಳ್ತಂಗಡಿ: ಪ್ರೇತ, ಭೂತ ಬಾಧಿತ ವ್ಯಕ್ತಿಗಳನ್ನು ಕ್ಷೇತ್ರಕ್ಕೆ ಕರೆತಂದು ಉಚ್ಚಾಟನೆ ಮಾಡಲು ದೇವರ ಮೊರೆ ಹೋಗುತ್ತಾರೆ. ಅದರಂತೆ ವ್ಯಸನಬಾಧಿತ ವ್ಯಕ್ತಿಯ ದುಶ್ಚಟದ ಉಚ್ಚಾಟನೆ ಮಾಡಲು ಶಿಬಿರಕ್ಕೆ ಹೋಗಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ನಿವಾಸದಲ್ಲಿ 137ನೇ ವಿಶೇಷ ಮದ್ಯವರ್ಜನ ಶಿಬಿರದ 56 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಹೇಮಾವತಿ ವೀ. ಹೆಗ್ಗಡೆ ಮಾತ ನಾಡಿ, ವ್ಯಸನಮುಕ್ತರು ಜೇನು ನೊಣದಂತೆ ಮಕರಂದವನ್ನು ಹೀರ ಬೇಕು. ಸುಖೀ ಸಂಸಾರದಲ್ಲಿ ಮಕ್ಕಳೊಂದಿಗೆ ಆನಂದ ಸವಿಯಿರಿ ಎಂದರು.
ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಉಪಸ್ಥಿತರಿದ್ದರು. ಶಿಬಿರದಲ್ಲಿ ಆಂಧ್ರ ಪ್ರದೇಶ, ತಮಿಳುನಾಡಿನ ಶಿಬಿರಾರ್ಥಿಗಳಿದ್ದರು. ಬೆಂಗಳೂರು, ಶಿವಮೊಗ್ಗದಿಂದ ಗರಿಷ್ಠ 15 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಕನಿಷ್ಠ 22, ಗರಿಷ್ಠ 65 ವಯೋಮಿತಿಯ ಉತ್ತಮ ಕೌಟುಂಬಿಕ ಹಿನ್ನಲೆಯುಳ್ಳ ಸರಕಾರಿ ಉದ್ಯೋಗಿಗಳು 5, ಗ್ರಾಹಕರ ಕೋರ್ಟಿನ ಅಧಿಕಾರಿ, ಪೊಲೀಸ್ ಅಧಿಕಾರಿ, ಕೆ.ಎಸ್.ಆರ್. ಟಿ.ಸಿ., ಕೆ.ಪಿ.ಟಿ.ಸಿ.ಎಲ್., ಅರಣ್ಯ ಇಲಾಖೆಯಿಂದ ಹಾಗೂ ವಕೀಲರು 1, ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಮಾಡುವ 3 ಮಂದಿ, ಸೊÌàದ್ಯೋಗಿಗಳು 15 ಮಂದಿ, ಕೃಷಿಕರು 27 ಮಂದಿ ಹಾಜರಿದ್ದರು.
ವಿವೇಕ್ ವಿ. ಪಾçಸ್ ನಿರ್ದೇಶನದಲ್ಲಿ ಪಿ. ಚೆನ್ನಪ್ಪ ಗೌಡ ಯೋಜನಾಧಿಕಾರಿ ಯಾಗಿ, ದಿವಾಕರ ಪೂಜಾರಿ ಶಿಬಿರಾಧಿ ಕಾರಿಯಾಗಿ, ಪ್ರಸಿಲ್ಲಾ ಡಿ’ಸೋಜಾ ಆರೋಗ್ಯ ಸಹಾಯಕಿಯಾಗಿ ಶಿಬಿರ
ದಲ್ಲಿ ಸಹಕರಿಸಿದ್ದಾರೆ. ಮುಂದಿನ ವಿಶೇಷ ಶಿಬಿರ ಜೂ. 17 ರಂದು ನಡೆಯಲಿದೆ.
ಅಂತರಂಗ ಶುದ್ಧಿ
ಅಂತರಂಗ ಮತ್ತು ಬಹಿರಂಗ ಶುದ್ಧಿಯಲ್ಲಿ ಅಂತರಂಗ ಶುದ್ಧಿ ಶ್ರೇಷ್ಠವಾಗಿದೆ. ಅಂತರಂಗ ಶುದ್ಧಿಗೆ ಉತ್ತಮ ಅಭ್ಯಾಸ, ಸಾತ್ವಿಕತೆ, ಆಧ್ಯಾತ್ಮ, ಸಂಸ್ಕಾರ ಮತ್ತು ತೀರ್ಥಸ್ನಾನವನ್ನೇ ಮಾಡಬೇಕಾಗುತ್ತದೆ. ನಮ್ಮ ದುಶ್ಚಟವೆಂಬ ಪಾಪವು ಪರಿವರ್ತನೆ ಎಂಬ ಪುಣ್ಯದ ಮೂಲಕ ಬದಲಾಯಿಸಬೇಕು. ಇದಕ್ಕಾಗಿ ದೃಢಸಂಕಲ್ಪ, ಪಾತ್ರ ಗೌರವ, ಸ್ಪಷ್ಟತೆ, ಪರಿಪೂರ್ಣತೆಯಿಂದ ಬದುಕಬೇಕು.
– ಡಾ| ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ