Advertisement

ಸೋಂಕು ನಿವಾರಕ ಸುರಂಗ ಮಾರ್ಗ

02:10 PM Apr 12, 2020 | mahesh |

ಚಿಕ್ಕಬಳ್ಳಾಪುರ: ಲಾಕ್‌ಡೌನ್‌ ಯಶಸ್ವಿಗೆ ಶ್ರಮಿಸುತ್ತಿರುವ ಪೊಲೀಸರ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾ ಕೇಂದ್ರದ ನಗರ ಠಾಣೆಯಲ್ಲಿ ಸೋಂಕು ನಿವಾರಕ ಸುರಂಗ ಮಾರ್ಗವನ್ನು ಸ್ಥಾಪಿಸಲಾಗಿದೆ. ಚಿಕ್ಕಬಳ್ಳಾಪುರ ಉಪ ವಿಭಾಗದ ಆರಕ್ಷಕ ಉಪಾಧೀಕ್ಷಕ ಕೆ.ರವಿ ಸುರಂಗ ಮಾರ್ಗವನ್ನು ಉದ್ಘಾಟಿಸಿ ಸಿಬ್ಬಂದಿಯ ಹಾಗೂ ಠಾಣೆಗೆ ಬರುವ ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು. ನಿತ್ಯ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಹೊತ್ತು ಕೆಲಸ ಮಾಡುವ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸ ಮುಗಿಸಿ ಮನೆಗೆ ವಾಪಸ್ಸು ಹೋಗುವ ವೇಳೆ ಠಾಣೆ ಆವರಣದಲ್ಲಿ ನಿರ್ಮಿಸಿರುವ ಸೋಂಕು ನಿವಾರಕ ಸುರಂಗ
ಮಾರ್ಗದಲ್ಲಿ ಸಂಚರಿಸಬೇಕು.

Advertisement

ಎಲ್ಲ ಠಾಣೆಗಳಲ್ಲಿ ಸ್ಥಾಪನೆಗೆ ಸಿದ್ಧತೆ:
ವೈಜ್ಞಾನಿಕವಾಗಿ ಯಾವುದೇ ಅಡ್ಡಪರಿಣಾಮಗಳು ಬೀರದ ಔಷಧ ಬಳಸಿರುವ ಸೋಂಕು ನಿವಾರಕ ಸುರಂಗ ಮಾರ್ಗವನ್ನು ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ನಗರದ ನಗರ ಠಾಣೆ ಆವರಣದಲ್ಲಿ ಸ್ಥಾಪಿಸಲಾಗಿದೆ. ಪೊಲೀಸ್‌ ಸಿಬ್ಬಂದಿಯ ಆರೋಗ್ಯಕ್ಕಾಗಿ ಎಲ್ಲಾ ಠಾಣೆಗಳಲ್ಲಿ ಇತಂಹ ಸೋಂಕು ನಿವಾರಕ ಸುರಂಗವನ್ನು ಸ್ಥಾಪಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಎಲ್ಲಾ ಠಾಣಾಧಿಕಾರಿಗಳಿಗೆ ಸೂಚಿಸಿದ್ದಾರೆ. ಚಿಕ್ಕಬಳ್ಳಾಫ‌ುರದ ಆರಕ್ಷಕ ವೃತ್ತ ನಿರೀಕ್ಷಕ ಸುದರ್ಶನ್‌, ನಗರ ಠಾಣೆ ಪಿಎಸ್‌ಐ ವರುಣ್‌ ಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next