Advertisement

ಸೋಂಕು ನಿವಾರಕ ಸಿಂಪಡಣೆ

05:43 PM May 09, 2021 | Team Udayavani |

ಚಿಂತಾಮಣಿ: ನಗರದ ತಾಲೂಕು ಕಚೇರಿಯನ್ನುಶನಿವಾರ ಸಂಪೂರ್ಣ ಸ್ಯಾನಿಟೈಸ್‌ ಮಾಡಲಾಯಿತು.ಸ್ಯಾನಿಟೈಸ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಹಶೀಲ್ದಾರ್‌ ಡಿ.ಹನುಮಂತರಾಯಪ್ಪ, ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆಹೆಚ್ಚಾಗುತ್ತಿದೆ. ಜನರು ಇದನ್ನು ಅರಿತು ಮನೆಯಲ್ಲಿಯೇ ಇರಬೇಕು, ಅನಿವಾರ್ಯವಿದ್ದರೆಮಾತ್ರ ಮನೆಯಿಂದ ಹೊರಗೆ ಬರಬೇಕು, ಸಾಮಾಜಿಕಅಂತರ, ಮಾಸ್ಕ್ ಧರಿಸಿರಬೇಕು ಎಂದು ಮನವಿಮಾಡಿದರು.

Advertisement

ನಂತರ ಅಗ್ನಿಶಾಮಕ ದಳದ ಸಿಬ್ಬಂದಿನಗರದ ಜೋಡಿರಸ್ತೆಯ ನಗರಸಭೆ ಮಳಿಗೆಗಳಸಂಕೀರ್ಣ, ಸಾರ್ವಜನಿಕ ಆಸ್ಪತ್ರೆ ಸೇರಿ ವಿವಿಧ ಸರ್ಕಾರಿಕಚೇರಿಗಳ ಆವರಣವನ್ನು ಸ್ಯಾನಿಟೈಸ್‌ ಮಾಡಿದರು.ಈ ವೇಳೆ ಕೋವಿಡ್‌ ನೋಡಲ್‌ ಅಧಿಕಾರಿ ಪ್ರಸಾದ್‌,ಕಂದಾಯ ನೌಕರರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ,ಅಗ್ನಿಶಾಮಕ ದಳದ ಅಧಿ ಕಾರಿ ಕರಿಯಣ್ಣ, ಕಂದಾಯಇಲಾಖೆಯ ಮಂಜುನಾಥ್‌, ನರೇಂದ್ರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next