Advertisement

ಕೈಕೊಟ್ಟ ಹುಡ್ಗಿಗೆ ಯಾಕ್ ಶಿಕ್ಷೆ ಇಲ್ಲ!ಸೆಲ್ಫಿ video ಪ್ರೇಮಿ ನೇಣಿಗೆ

04:50 PM Jan 29, 2017 | Team Udayavani |

ದಾವಣಗೆರೆ: ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದಾಕೆ ಇತ್ತೀಚೆಗೆ ಮೊಬೈಲ್ ಕರೆ ರಿಸೀವ್ ಮಾಡುತ್ತಿಲ್ಲ ಎಂಬ ಬೇಜಾರಿನಿಂದ ಪ್ರೇಮಿಯೊಬ್ಬ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿ ನೇಣಿಗೆ ಶರಣಾಗಿರುವ ಘಟನೆ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ನಡೆದಿದೆ.

Advertisement

ಸಂತೆಬೆನ್ನೂರಿನ ಪ್ರಕಾಶ್ ಉಪ್ಪಾರ (19) ಎಂಬ ಯುವಕ ಕಳೆದ 4 ವರ್ಷಗಳಿಂದ ತನ್ನ ಸೋದರ ಮಾವನ ಮಗಳನ್ನೇ ಪ್ರೀತಿಸುತ್ತಿದ್ದ. ಆದರೆ ಇತ್ತೀಚೆಗೆ ಆಕೆ ಈತನ ಮೊಬೈಲ್ ಕರೆ ಸ್ವೀಕರಿಸ್ತಿರಲಿಲ್ಲವಾಗಿತ್ತು. ಇದರಿಂದ ಬೇಸತ್ತ ಪ್ರಕಾಶ್, ಸೆಲ್ಫಿ ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ನಾನು ನಿನ್ನ ನಾಲ್ಕು ವರ್ಷಗಳಿಂದ ಪ್ರೀತಿಸ್ತಿದ್ದೇನೆ. ನಿನ್ನ ಮರೆಯೊಕ್ಕೆ ಆಗ್ತಿಲ್ಲ. ಒಂದು ಹುಡ್ಗಾ ಹುಡುಗಿಗೆ ವಂಚನೆ ಮಾಡಿದ್ರೆ ಶಿಕ್ಷೆ ಆಗುತ್ತೆ, ಆದರೆ ಹುಡ್ಗಿ ಹುಡುಗನಿಗೆ ವಂಚನೆ ಮಾಡಿದ್ರೆ ಯಾಕೆ ಶಿಕ್ಷೆ ಆಗಲ್ಲ, ನಿನಗೆ ಶಿಕ್ಷೆ ಆಗ್ಲೇ ಬೇಕು. ಆಕೆಗೆ ಮನೆಯಲ್ಲಿ ಏನೂ ಪ್ರಾಬ್ಲಂ ಇಲ್ಲ, ಆಕೆಯೇ ಬೇರೆ ಯಾರನ್ನೋ ಪ್ರೀತಿಸುತ್ತಿದ್ದಾಳೆ. ನನಗೆ ಸಾಯಬೇಕು ಅಂತ ಫೀಲಿಂಗ್ ಆಗ್ತಿದೆ. ಇಂತಹ ಮಗನ್ನ ಹೆತ್ತೆ ಅಂತ ಅಪ್ಪ, ಅಮ್ಮ, ಅಣ್ಣ ಬೇಜಾರ್ ಮಾಡ್ಕೊಬೇಡಿ ಅಂತ ವಿಡಿಯೋದಲ್ಲಿ ತನ್ನ ನೋವನ್ನು ತೋಡಿಕೊಂಡಿದ್ದ.

Advertisement

Udayavani is now on Telegram. Click here to join our channel and stay updated with the latest news.

Next