ಬೆಂಗಳೂರು: ಸಾಮಾನ್ಯವಾಗಿ ಒಣ ಮೆಣಸಿನಕಾಯಿಯನ್ನು ಅಡುಗೆಗೆ ಮತ್ತು ಸಾಂಬಾರು ಪುಡಿಗೆ ಬಳಸಲಾಗುತ್ತದೆ.
ಐಐಎಚ್‌ಆರ್ ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಿದ ವಿವಿಧ ತಳಿಯ ಒಣ ಮೆಣಸನ್ನು ಮೆಣಸಿನ ಕಾಯಿ, ಚಿಲ್ಲಿ ಪೌಡರ್, ಚಿಲ್ಲಿ ಫ್ಲೇಕ್ಸ್ ಮತ್ತು ಮೆಣಸಿನ ಎಣ್ಣೆಯನ್ನು ಸೌಂದರ್ಯ ವರ್ಧಕ, ಶಾಂಪೂ, ಸೀರಂಗಳಲ್ಲಿಯೂ ಬಳಸಲಾಗುತ್ತದೆ. ರಾಜ್ಯದ 2 ಲಕ್ಷ ಎಕರೆಯಲ್ಲಿ ವಿವಿಧ ತಳಿಯ ಮೆಣಸಿನಕಾಯಿ ಬೆಳೆ ಬೆಳೆಯುತ್ತಾರೆ. ರಾಯಚೂರು, ಬಳ್ಳಾರಿ, ಬ್ಯಾಡಗಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಬೆಳೆ ಇದೆ. ತರಕಾರಿಗಾಗಿ ಹಸಿರು ಮತ್ತು ಸ್ಪೈಸಿಗಾಗಿ ಕೆಂಪು ಮೆಣಸಿನಕಾಯಿ ಬೆಳೆಯುತ್ತಾರೆ. ಆದರೆ, ಬೂದಿರೋಗ, ಬೇರು ರೋಗದಿಂದಾಗಿ ಇಳುವರಿ ಕಡಿಮೆಯಾಗುತ್ತಿದ್ದನ್ನು ಗಮನಿಸಿ ಐಐಎಚ್‌ಆರ್ ವಿಜ್ಞಾನಿಗಳು ಹೈಬ್ರೀಡ್ ಬೀಜಗಳನ್ನು ಅಭಿವೃದ್ಧಿಪಡಿಸಿದ್ದಾರೆ.
ಹೈಬ್ರೀಡ್ ಸೀಡ್ಸ್ ಉತ್ಪಾದನೆ: ಮೆಣಸಿನ ಬೆಳೆಯಲ್ಲಿ ಸಸಿಯಾಗಿದ್ದಾಗ ಇರುವ ಎಲೆಗಳು ಉತ್ತಮವಾಗಿದ್ದರೆ ಇಳುವರಿ ಹೆಚ್ಚು ಬರುತ್ತದೆ. ಮೆಣಸಿನಲ್ಲಿ 40ಕ್ಕೂ ಹೆಚ್ಚು ವೈರಸ್‌ಗಳು ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಸಾಮಾನ್ಯವಾಗಿ ಈ ಬೆಳೆ ನಾಲ್ಕು ವಿಧದ ವೈರಸ್‌ಗಳಿಂದ ಹಾನಿಯಾಗುತ್ತದೆ. ಮೆಣಸಿಕಾಯಿಯಲ್ಲಿ ಬೂದಿರೋಗ ಕಾಣಿಸಿಕೊಂಡರೆ, ಎಲೆ ಉದುರುತ್ತವೆ. ಆಗ ಶೇ.30ರಷ್ಟು ಇಳುವರಿ ಕಡಿಮೆಯಾಗುತ್ತದೆ. ಬೇರು ಕೊಳೆ ರೋಗದಿಂದ ಶೇ.100ರಷ್ಟು ಇಳುವರಿ ನಾಶವಾಗುತ್ತದೆ. ಇದನ್ನು ಅರಿತ ಐಐಎಚ್‌ಆರ್ ವಿಜ್ಞಾನಿಗಳು ಬೂದಿರೋಗ ಮತ್ತು ಬೇರು ಕೊಳೆರೋಗ ತಡೆಯುವ ವಿಧದ ಸೀಡ್ಸ್‌ಗಳನ್ನು ಅಭಿವೃದ್ಧಿಪಡಿಸಿದ್ದು, ಕಾಯಿ ಕೊಳೆ ರೋಗ ತಡೆಯುವ ತಳಿಯನ್ನು ಇನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ ಎನ್ನುತ್ತಾರೆ. ಅ
ರ್ಕಾ ಹರಿತ ಮತ್ತು ಅರ್ಕಾ ಮೇಘನಾ ವಿಧದ ತಳಿಗಳು ಬೂದಿರೋಗವನ್ನು ತಡೆಯುತ್ತವೆ. ಅರ್ಕಾ ಖ್ಯಾತಿ ಮತ್ತು ಅರ್ಕಾ ಶ್ವೇತ ವೈರಸ್ ಅನ್ನು ತಡೆಗಟ್ಟುತ್ತವೆ. ಅರ್ಕಾ ತೇಜಸ್ವಿ, ಅರ್ಕಾರ ಯಶ್ವಿ, ಅರ್ಕಾ ಸಾನ್ವಿ, ಅರ್ಕಾ ತನ್ವಿ, ಅರ್ಕಾ ಗಗನ್ ಎಂಬ 5 ವಿಧದ ತಳಿಗಳು ಚಿಲ್ಲಿ ಲೀಫ್ಕಲ್ ವೈರಸ್ (ಎಲೆರೋಗ) ವನ್ನು ತಡೆಗಟ್ಟುತ್ತವೆ. ಇತ್ತೀಚೆಗೆ ಅರ್ಕಾ ನಿಹಿರ ಮತ್ತು ಅರ್ಕಾ ದೃತಿ ಎಂಬ ನೂತನ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಎಲ್ಲಾ ವಿಧದ ತಳಿಗಳ ಬೆಳೆಯು ಉನ್ನತ ಮಟ್ಟದ ಇಳುವರಿ ಬರುತ್ತಿದೆ. ಒಣ ಮೆಣಸಿನಕಾಯಿಯನ್ನು ಎಕರೆಗೆ 20 ರಿಂದ 30 ಕ್ವಿಂಟಲ್ ಮತ್ತು ಹಸಿರು ಮೆಣಸಿನಕಾಯಿಯನ್ನು ಎಕರೆಗೆ 10 ರಿಂದ 12 ಟನ್ ಬೆಳೆಯಬಹುದು. ಆಯಾ ಪ್ರದೇಶಕ್ಕೆ ಅನುಗುಣ ವಾಗಿ ತಳಿಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುತ್ತದೆ ಎಂದು ವಿಜ್ಞಾನಿ ಕೆ.ಮಾಧುರಿ ರೆಡ್ಡಿ ಹೇಳುತ್ತಾರೆ.
ಉಪಯೋಗಗಳು: ಮೆಣಸಿನಕಾಯಿಯನ್ನು ಆಹಾರ ಮತ್ತು ಫೀಡ್ ಉದ್ಯಮಗಳಲ್ಲಿ ಬಣ್ಣ ಮತ್ತು ಕಟುವಾದ ಸಾರಗಳನ್ನು ಶುಂಠಿ ಬಿಯರ್, ಸ್ಪೈಸಿ ಸಾಸ್, ಕೋಳಿ ಆಹಾರ ಮತ್ತು ಕೆಲವು ಔಷಧೀಯ ಉತ್ಪನ್ನಗಳಿಗೆ ಬಳಸಲಾಗುತ್ತದೆ. ಒಳನೋವಿಗಾಗಿ ಬಳಸುವ ಝಂಡು ಬಾಂಬ್‌ನಂತಹ ನೋವು ನಿವಾರಕ ಉತ್ಪನ್ನಗಳಲ್ಲಿ ಮತ್ತು ಯೋಧರು ಶತ್ರುಗಳಿಂದ ತಮ್ಮನ್ನ ತಾವು ರಕ್ಷಿಸಿಕೊಳ್ಳಲು ಬಳಸುವ ಪೆಪ್ಪರ್ ಸ್ಪ್ರೇಗಳಲ್ಲಿ, ಉರಿಯೂತದ ಕಾಯಿಲೆಗಳ ಔಷಧಗಳಲ್ಲಿ ಬಳಸಲಾಗುತ್ತದೆ.
ಸೌಂದರ್ಯ ಉತ್ಪನ್ನ, ಔಷಧಕ್ಕೂ ಬಳಕೆ : ಜೈವಿಕ ಸಕ್ರಿಯೆ ಗುಣಲಕ್ಷಣ ಗಳನ್ನು ಹೊಂದಿ ರುವ ಉತ್ಪನ್ನಗಳ ಮೆಣಸನ್ನು ಸೌಂದರ್ಯವರ್ಧಕ ಉದ್ಯಮಗಳು ಯಾವುದೇ ಅಡ್ಡಪರಿಣಾಮ ಗಳಿಲ್ಲದ ವಿವಿಧ ಸೌಂದರ್ಯ ಉತ್ಪನ್ನಗಳ ಉತ್ಪಾದನೆಗೆ ಯಶಸ್ವಿಯಾಗಿ ಕಾರ್ಯಗತ ಗೊಳಿಸುತ್ತವೆ. ಸೌಂದರ್ಯವರ್ಧಕ ಮತ್ತು ಔಷಧೀಯ ಮತ್ತು ಆಹಾರ ಉದ್ಯಮಗಳಲ್ಲಿ ಪರಿಸರ ಸ್ನೇಹಿ ಜೈವಿಕ-ಸಕ್ರಿಯ ಸಂಯುಕ್ತಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಶೇ.80ರಷ್ಟು ಭಾರತದಲ್ಲಿಯೇ ಉಪಯೋಗಿಸಲಾಗಿದ್ದು, ಉಳಿದ ಶೇ.20ರಷ್ಟು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ.
-ಕೆ.ಮಾಧುರಿ ರೆಡ್ಡಿ , ಐಐಎಚ್‌ಆರ್ ತರಕಾರಿ ವಿಜ್ಞಾನಿಗಳ ಮುಖ್ಯಸ್ಥೆ
-ಭಾರತಿ ಸಜ್ಜನ್