Advertisement

ಶುದ್ದೀಕರಿಸಿದ ನೀರಿನಿಂದ ರೋಗ ದೂರ: ಶಾಸಕ ದರ್ಶನಾಪುರ

06:44 PM Jun 07, 2022 | Team Udayavani |

ಕೆಂಭಾವಿ: ಇಂದಿನ ದಿನಗಳಲ್ಲಿ ಶುದ್ಧ ಕುಡಿವ ನೀರಿನ ಅವಶ್ಯಕತೆ ಹೆಚ್ಚಿದ್ದು ಶುದ್ಧೀಕರಿಸಿದ ನೀರು ಕುಡಿಯುವು ದರಿಂದ ರೋಗ ತಡೆಗಟ್ಟಬಹುದು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

Advertisement

ಸೋಮವಾರ ಪಟ್ಟಣದ ವಾರ್ಡ್‌ ನಂ19ರಲ್ಲಿ ಖಾಸಗಿ ಕಂಪನಿ ಸಹಭಾಗಿತ್ವದಲ್ಲಿ ಪುರಸಭೆ ವತಿಯಿಂದ ಸುಮಾರು 36 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಹೈಟೆಕ್‌ ಸಮುದಾಯ ಶುದ್ಧ ಕುಡಿವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಪುರಸಭೆ ಕೇಂದ್ರವಾದ ಮೇಲೆ ಪಟ್ಟಣ ದಿನೇ ದಿನೇ ಬೆಳೆಯುತ್ತಿದೆ. ಪಟ್ಟಣ ಬೆಳೆದಂತೆ ಜನತೆಗೆ ಮೂಲ ಸೌಕರ್ಯ ಒದಗಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಇಲ್ಲಿ ಸಂಪೂರ್ಣ ಡಿಜಿಟಲೀಕರಣ ವ್ಯವಸ್ಥೆಯುಳ್ಳ ಶುದ್ಧ ಕುಡಿವ ನೀರಿನ ಘಟಕ ನಿರ್ಮಿಸಲಾಗಿದೆ ಎಂದರು.

ವಲಯದ ಹಲವು ಗ್ರಾಮಗಳಲ್ಲಿ ಇಂತಹ ಘಟಕಗಳು ತಾಂತ್ರಿಕ ಕಾರಣ ದಿಂದ ಸ್ಥಗಿತಗೊಂಡಿದ್ದು, ಈಗಾಗಲೇ ಈ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ, ಒಂದು ವಾರದಲ್ಲಿ ಕೆಟ್ಟು ಹೋಗಿರುವ ಎಲ್ಲ ಶುದ್ಧ ಕುಡಿವ ನೀರಿನ ಘಟಕ ಪ್ರಾರಂಭಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ದಾಸನಕೇರಿ, ಕಂಪನಿ ಹಿರಿಯ ಉಪಾಧ್ಯಕ್ಷ ಅಜಯ ಖನ್ನಾ, ಶಿವಕುಮಾರ, ಜಿಪಂ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್‌ ಪಾಟೀಲ, ವಾಮನರಾವ್‌ ದೇಶಪಾಂಡೆ, ಪುರಸಭೆ ಸದಸ್ಯರಾದ ರವಿ ಸೊನ್ನದ, ರಾಮಕೃಷ್ಣ, ಆರೀಫ್‌ ಖಾಜಿ, ಶಾಂತಗೌಡ ನೀರಲಗಿ, ಶರಣಬಸ್ಸು ಡಿಗ್ಗಾವಿ, ಮುದಿಗೌಡ ಮಾಲಿಪಾಟೀಲ, ಶಿವಮಹಾಂತ ಚಂದಾಪುರ, ಸಾಹೇಬಲಾಲ ಆಂದೇಲಿ, ಶಿವರಾಜ ಬೂದೂರ ಇದ್ದರು. ಗಿರೀಶ ಶಹಾಪುರ ನಿರೂಪಿಸಿದರು. ಸಿದ್ರಾಮಯ್ಯ ಇಂಡಿ ಸ್ವಾಗತಿಸಿದರು. ರಶೀದ್‌ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next