Advertisement
ಜಿನ್ನೇನಹಳ್ಳಿ, ದಾಸರಹಳ್ಳಿ, ಮೇಟಿಕೆರೆ,ಯಾಳನಹಳ್ಳಿ, ಮಾಕನಹಳ್ಳಿ ಸೇರಿದಂತೆ ಹಲವು ಗ್ರಾಮದಲ್ಲಿನ ನೂರಾರು ರಾಸುಗಳಿಗೆಕಾಲುಬಾಯಿರೋಗದ ಲಕ್ಷಣಗಳು ಪತ್ತೆಯಾಗಿವೆ. ಹಲವು ದಿನಗಳ ಹಿಂದೆ ದಾಸರಹಳ್ಳಿ ಗ್ರಾಮದಲ್ಲಿ 30ಕ್ಕೂ ಹೆಚ್ಚು ರಾಸುಗಳಲ್ಲಿ ರೋಗದ ಲಕ್ಷಣಗಳೂ ಕಾಣಿಸಿಕೊಂಡವು.ನಂತರದದಿವಸದಲ್ಲಿಗ್ರಾಮದಲ್ಲಿ 290ಕ್ಕೂ ಹೆಚ್ಚು ಜಾನುವಾರುಗಳಲ್ಲಿ ಕಾಣಿಸಿಕೊಂಡಿದೆ.
ಗ್ರಾಮಗಳಲ್ಲಿಯೂ ರೋಗಗಳು ಕಾಣಿಸಿಕೊಂಡಿದೆ. ಪಶುಪಾಲನಾ ಇಲಾಖೆ ವೈದ್ಯ ನಿತ್ಯವೂ ಎಲ್ಲಾ ಗ್ರಾಮವನ್ನು ಸುತ್ತಿ ಅಗತ್ಯ ಔಷಧಿ ನೀಡುತ್ತಿದ್ದಾರೆ. ಆದರೂ ಅಷ್ಟಗಾಗಿ ರೋಗದ ಲಕ್ಷಣಗಳು ಕಡಿಮೆಯಾಗಿದೆ. ಮೊದಲು ಕಾಣಿಸಿಕೊಂಡಾಗ ಸರಿಯಾಗಿ ಚಿಕಿತ್ಸೆ ನೀಡಿದ್ದರೆ ರೋಗ ಹೆಚ್ಚು ರಾಸುಗಳಿಗೆ ಹರಡುತ್ತಿರಲಿಲ್ಲ. ಕೃಷಿ ಮಾಡಲಾಗುತ್ತಿಲ್ಲ: ಹಾಲು ನೀಡುವ ಹಸುಗಳಿಗೆ ಕಾಯಿಲೆ ತಗುಲಿದ ದಿನದಿಂದ ದಿನಕ್ಕೆ ಹಾಲಿನ ಪ್ರಮಾಣ ಗಣನೀಯವಾಗಿ ಕುಸಿದಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೃಷಿಗೆ ಬಳಕೆ ಮಾಡುವ ದೇಶೀಯ ತಳಿ ರಾಸುಗಳೂ ರೋಗಕ್ಕೆ ತುತ್ತಾಗಿರುವುರಿಂದ ರೈತರು ಕೃಷಿಗೆ ಯಂತ್ರವನ್ನು ಅವಲಂಬಿಸುವಂತಾಗಿದೆ. ಇದರಿಂದ ಈ ಬಾರಿ ದುಬಾರಿ ವೆಚ್ಚ ಮಾಡಿ ಕೃಷಿ ಮಾಡಿಸುವ ಪರಿಸ್ಥಿತಿ ನಿರ್ಮಾಣ ಆಗಿದ್ದು, ರೈತರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಇನ್ನು ಕೆಲವರು ಕೃಷಿ ಮಾಡದೆ ತಲೆ ಮೇಲೆ ಕೈಹೊತ್ತುಕೊಂಡು ಕೂರುವ ಪರಿಸ್ಥಿತಿ ನಿರ್ಮಾಣ ಆಗಿದೆ.
Related Articles
Advertisement
ಅರಿವು ಮೂಡಿಸಲಾಗುತ್ತಿದೆ: ಪಶು ವೈದ್ಯಕೀಯ ತಂಡವು ಎಲ್ಲಾ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾಲು- ಬಾಯಿ ರೋಗದಿಂದಬಳಲುತ್ತಿರುವ ಜಾನುವಾರುಗಳಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಲಸಿಕೆ ನೀಡುತ್ತಿದ್ದಾರೆ. ರೋಗ ಹರಡಿರುವ ಅಕ್ಕ ಪಕ್ಕದ ಗ್ರಾಮದಲ್ಲಿನ ರೈತರಲ್ಲಿ ಹೈನುಗಾರಿಕೆ ಮಾಡುವವರಲ್ಲಿ ಕಾಲುಬಾಯಿ ರೋಗದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದು, ಮುಂದೆ ಹೆಚ್ಚಾಗುವ ಅನಾಹುತವನ್ನು ತಪ್ಪಿಸಲು ಇಲಾಖೆ ಸಿಬ್ಬಂದಿ ಮುಂದಾಗಿದ್ಧಾರೆ. ರೋಗದ ಲಕ್ಷಣ: ಜ್ವರದೊಂದಿಗೆ ಬಳಲುತ್ತಿರುವ ಜಾನುವಾರುಗಳ ಬಾಯಿಯಲ್ಲಿ ಹುಣ್ಣು ಹೆಚ್ಚಾಗಿ, ನಾಲಿಗೆಯ ಚರ್ಮ ಹಂತ ಹಂತವಾಗಿ ಸುಲಿಯುತ್ತದೆ. ಇದರ ಪರಿಣಾಮ ಮೇವು- ನೀರು ಸೇವಿಸಲಾಗದ ಪರಿಸ್ಥಿತಿ ರಾಸುಗಳಲ್ಲಿ ನಿರ್ಮಾಣವಾಗಿ ಜೊಲ್ಲು ಸುರಿಸುತ್ತಾ ನಿಲ್ಲುತ್ತವೆ. ಪಾದದ ಸುತ್ತಲಿನ ಗೊರಸಲಿನಲ್ಲಿ ಬಿರುಕಿನೊಂದಿಗೆ ಹುಳು ಕಾಣಿಸಿಕೊಂಡು ಜಾನುವಾರುಗಳು ನರಳುತ್ತವೆ. ಎರಡು ವರ್ಷದಿಂದ
ಲಸಿಕೆ ಹಾಕಿಲ್ಲ
ಪಶುಪಾಲನಾ ಇಲಾಖೆಯು ವರ್ಷಕ್ಕೆ ಎರಡು ಬಾರಿ ಕಾಲು-ಬಾಯಿ ರೋಗದ ಮುನ್ನೆಚ್ಚರಿಕೆ ಲಸಿಕೆಯನ್ನು ಜಾನುವಾರುಗಳಿಗೆ ನೀಡಬೇಕಿತ್ತು
ಆದರೆ ಕೋವಿಡ್‌ದಿಂದ ಎರಡು ವರ್ಷ ಲಸಿಕಾ ಅಭಿಯಾನ ಮಾಡದ ಹಿನ್ನೆಲೆಯಲ್ಲಿ ಈ ರೀತಿ ಸಾಮೂಹಿಕವಾಗಿ ರೋಗ ಕಾಣಿಸಿಕೊಂಡಿವೆ ಎಂದು ರೈತ ನಂಜೇಗೌಡ ಆಪಾದನೆ ಮಾಡಿದ್ಧಾರೆ. ಕಾಲುಬಾಯಿ ರೋಗಕಾಣಿಸಿಕೊಂಡಿರುವ ಗ್ರಾಮದ ರಾಸುಗಳಿಗೆ ತಾಲೂಕು ಪಶುಪಾಲನಾ ಇಲಾಖೆಯಿಂದ 80 ಸಾವಿರ ರೂ. ಮೌಲ್ಯದ 4 ಸಾವಿರ ಡೋಸ್ ಲಸಿಕೆಖರೀದಿಸಿ, ರಾಸುಗಳಿಗೆ ನೀಡಲಾಗಿದೆ.
–ಡಾ.ಎಲ್.ಜಿ.ಸೋಮಶೇಖರ್, ಪಶುಪಾಲನಾ
ಇಲಾಖೆ ಸಹಾಯಕ ನಿರ್ದೇಶಕ ಲಾಕ್‌ಡೌನ್ ತೆರವು ಮಾಡಿದ ಮೇಲೆ ರಾಸುಗಳ ಸಂತೆಯಲ್ಲಿ ಹೊರ ಜಿಲ್ಲೆಯಿಂದ ಮಿಶ್ರತಳಿ ರಾಸುಗಳು ಮತ್ತುಕೃಷಿ ಚಟುವಟಿಕೆಗೆ ದೇಶೀಯ ತಳಿ ರಾಸುಗಳನ್ನುಖರೀದಿಸಿ ತಂದಿದ್ದು, ಅವುಗಳಿಂದ ರೋಗ ಹರಡಿದೆ. ಎಲ್ಲಾ ಗ್ರಾಮದಲ್ಲಿಯೂ ಲಸಿಕೆ ಹಾಕಲಾಗಿದೆ. ದಾಸರಹಳ್ಳಿ ಯಲ್ಲಿ 35 ರಾಸುಗಳು ಮಾತ್ರ ಸಾಕಷ್ಟು ತೊಂದರೆಪಡುತ್ತಿವೆ.
-ಡಾ.ಮಂಜುನಾಥ್,
ಗಿರೀಕ್ಷೇತ್ರದ ಪಶು ವೈದ್ಯಾಧಿಕಾರಿ
ಗ್ರಾಮದಲ್ಲಿಕಾಲು-ಬಾಯಿ ರೋಗ ಕಾಣಿಸಿಕೊಂಡು ಜಾನುವಾರುಗಳು ನೋವು ಅನುಭವಿ ಸುತ್ತಿವೆ. ಪಶು ವೈದ್ಯರು ಚಿಕಿತ್ಸೆ ನೀಡಿದರೂ ರೋಗ ನಿಯಂ ತ್ರಣಕ್ಕೆ ಬರುತ್ತಿಲ್ಲ, ಜಾನುವಾರು ಸಂಕಷ್ಟ ನೋಡಲಾಗುತ್ತಿಲ್ಲ.
-ಜಯಮ್ಮ, ದಾಸರಹಳ್ಳಿ
ಹೈನುಗಾರಿಕೆ ಮಾಡುವ ಮಹಿಳೆ -ಶಾಮಸುಂದರ್ ಕೆ.ಅಣ್ಣೇನಹಳ್ಳಿ