Advertisement

ರಾಷ್ಟ್ರ ಕೂಟ ಉತ್ಸವ-ಸರ್ಕಾರದೊಂದಿಗೆ ಚರ್ಚೆ

10:19 AM Dec 10, 2021 | Team Udayavani |

ಸೇಡಂ: ಬರುವ ದಿನಗಳಲ್ಲಿ ಮಳಖೇಡದಲ್ಲಿ ಸರ್ಕಾರದ ವತಿಯಿಂದಲೇ ರಾಷ್ಟ್ರಕೂಟರ ಉತ್ಸವ ಆಚರಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಚರ್ಚಿಸುತ್ತೇನೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹೇಳಿದರು.

Advertisement

ತಾಲೂಕಿನ ಮಳಖೇಡದಲ್ಲಿ ಸನ್ಮಾನ ಸ್ವೀಕರಿಸಿ, ರಾಷ್ಟ್ರಕೂಟರ ಕೋಟೆಗೆ ಭೇಟಿ ನೀಡಿ ಮಾತನಾಡಿದ ಅವರು, ಕವಿರಾಜ ಮಾರ್ಗದ ಮಾನ್ಯಖೇಟ ನೆಲವನ್ನು ರಾಷ್ಟ್ರ ಮಟ್ಟಕ್ಕೆ ಪರಿಚಯಿಸಲಾಗುವುದು. ತಾಲೂಕು, ಜಿಲ್ಲಾ ಮತ್ತು ಅಖೀಲ ಭಾರತ ಸಮ್ಮೇಳನಗಳಲ್ಲಿ ರಾಷ್ಟ್ರಕೂಟರ ನೆಲದ ಬಗ್ಗೆ ಗೋಷ್ಠಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಇನ್ನೆರಡು ದಿನಗಳಲ್ಲಿ ಪದಗ್ರಹಣ ಸಮಾರಂಭ ಇದ್ದು, ಅದಕ್ಕೂ ಮೊದಲು ರಾಷ್ಟ್ರಕೂಟರ ನೆಲಕ್ಕೆ ಬಂದಿದ್ದೇನೆ. ಚುನಾವಣೆಯ ಪ್ರಚಾರವನ್ನು ಇದೇ ನೆಲದಿಂದ ಪ್ರಾರಂಭಿಸಿದ್ದೆ ಎಂದು ಹೇಳಿದರು.

ಕಾರ್ತಿಕೇಶ್ವರ ಮಠದ ವೀರಗಂಗಾಧರ ಸ್ವಾಮೀಜಿ ಮಾತನಾಡಿ, ವಿಜಯಕುಮಾರ ತೇಗಲತಿಪ್ಪಿ ಛಲದಂಕ ಮಲ್ಲರಿದ್ದಂತೆ. ಹಿಡಿದ ಕೆಲಸ ಮಾಡದೇ ಬಿಡುವುದಿಲ್ಲ. ಮುಂದೆಯೂ ಕನ್ನಡದ ಕೆಲಸ ಮಾಡುತ್ತಾರೆ ಎಂದರು. ಸಾಹಿತಿ ಹಾಗೂ ಸಂಶೋಧಕ ಮುಡಬಿ ಗುಂಡೇರಾವ್‌, ಕಾಂಗ್ರೆಸ್‌ ಮುಖಂಡ ರಾಜಶೇಖರ ಪುರಾಣಿಕ ಮಾತನಾಡಿದರು.

ಕಸಾಪ ಗೌರವ ಕಾರ್ಯದರ್ಶಿಗಳಾದ ಸುರೇಶ ಬಡಿಗೇರ, ಶಿವರಾಜ ಅಂಗಡಿ, ವೀರಣ್ಣ ಸಜ್ಜನಶೆಟ್ಟಿ, ಗುರಣ್ಣ ತಳಕಿನ, ಅಶೋಕ ಬಂಡಿ, ರವಿ ಮರಗೋಳ, ರಮೇಶ ರಾಠೊಡ, ವಂದೇಮಾತರಂ ಕಟ್ಟಿಮನಿ, ಮಲ್ಲಿಕಾರ್ಜುನ ಲಂಗೋಟಿ, ಶಿವಾನಂದ ಮಠಪತಿ, ಬಿ.ವಿ. ಸಜ್ಜನ, ರಾಜಶೇಖರ ಮಠಪತಿ, ದೇವರಾಜ ಪುರಾಣಿಕ, ಸುಭಾಷ ರಾವೂರ, ಅರವಿಂದ ಮರಗೋಳ, ಭೀಮಾಶಂಕರ ಕೊರವಿ, ವಿಜಯಕುಮಾರರೆಡ್ಡಿ ಮಳಖೇಡ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next