Advertisement

ಕುಷ್ಟಗಿಯ ಕ್ರೀಡಾಂಗಣ ನಿರ್ವಹಣೆ ಕುರಿತು ಡಿಸಿಯೊಂದಿಗೆ ಚರ್ಚೆ: ಶಾಸಕ ಅಮರೇಗೌಡ

02:31 PM Dec 19, 2021 | Team Udayavani |

ಕುಷ್ಟಗಿ: 1.70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕುಷ್ಟಗಿ ಪಟ್ಟಣದ ನೂತನ ಒಳಾಂಗಣ ಕ್ರೀಡಾಂಗಣದ ನಿರ್ವಹಣೆಯ ಹೊಣೆಗಾರಿಕೆ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.

Advertisement

ಇಲ್ಲಿನ ತಾಲೂಕು ಕ್ರೀಡಾಂಗಣದ ಆವರಣದಲ್ಲಿ ನೂತನ ಒಳಾಂಗಣ ಕ್ರೀಡಾಂಗಣ ಲೋಕಾರ್ಪಣೆಗೊಳಿಸಿ ಮಾತನಾಡಿ, ಈಗಾಗಲೇ ಕುಷ್ಟಗಿಯ ಕ್ರೀಡಾ ಕ್ಲಬ್ ನಿರ್ವಹಿಸಲು ಮುಂದೆ ಬಂದಿದ್ದು, ಜಿಲ್ಲಾಧಿಕಾರಿಗಳು ಯಾರಿಗೆ ವಹಿಸುತ್ತಾರೆ ಎನ್ನುವುದು ಅವರ ವಿವೇಚನೆಗೆ ಬಿಡಲಾಗಿದೆ. ನಿರ್ಮಿಸಿರುವ ಸುಸಜ್ಜಿತ ಕಟ್ಟಡವನ್ನು ಒಂಪ್ಪದದ ಮೇರೆಗೆ ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳಲು ಮುಂದೆ, ಸಣ್ಣ ಪುಟ್ಟ ತೊಂದರೆ, ಡ್ಯಾಮೇಜ್ ಆದರೆ ವಹಿಸಿಕೊಂಡವರೇ ನಿರ್ವಹಿಸಬೇಕಿದೆ. ಸರಕಾರದಿಂದ ಮಾಡಲು ಸಾದ್ಯವಿಲ್ಲ ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದರು.

ಕುಷ್ಟಗಿಯಲ್ಲಿ ಕ್ರೀಡಾಪಟುಗಳು ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ನಿರ್ಮಿಸಿರುವ ಸುಸಜ್ಜಿತ ಒಳಾಂಗಣ ಕ್ರೀಡಾಂಗಣಗಳನ್ನು ನೋಡಿಕೊಂಡು ಬಂದು, ಮಾದರಿಯಾಗಿ ನಿರ್ಮಿಸಲು ಎಸ್ಟಿಮೇಟ್ ತಯಾರಿಸಲು ಸೂಚಿಸಿದ್ದೆ, ಅದರಂತೆ ಕೆ.ಆರ್.ಐ.ಡಿ.ಎಲ್ ದವರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 1.70 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಒಳಾಂಗಣ ಕ್ರೀಡಾಂಗಣವನ್ನು ಕ್ರೀಡಾಪುಟುಗಳು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಒಳಾಂಗಣದಲ್ಲಿ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಕೇರಂ ಆಟಕ್ಕೆ ವ್ಯವಸ್ಥಿತಗೊಳಿಸಲಾಗಿದೆ. ಬ್ಲಾಡ್ಮಿಂಟನ್ ಗೆ ಕೋರ್ಟ್‍ಗಳನ್ನು ಅತ್ಯಾಧುನಿಕವಾದ ವಿನ್ಯಾಸದಂತೆ ನೇಪಾಳ ಮೂಲದ ಪರಿಣಿತರು ಆಗಮಿಸಿ ಈ ವುಡನ್ ಮ್ಯಾಟ್ ಅಳವಡಿಸಿದ್ದಾರೆ. ಇದರಿಂದ ಆಟಗಾರರು ಆಡಿದಂತೆ ಪಾದಗಳಿಗೆ ಫುಶ್ ಕೊಡುತ್ತದೆ ಎಂದರು.

ಇದನ್ನೂ ಓದಿ:ದೇಶಕ್ಕಾಗಿ ತ್ಯಾಗ ಮಾಡಿದವರನ್ನು ಜಾತಿಗೆ ಸೀಮಿತ ಮಾಡಬೇಡಿ : ಸಿಎಂ 

ಈ ವೇಳೆ ಕುರಿ ಮತ್ತು ಉಣ್ಣೆ ನಿಗಮ ಅಭಿವೃಧ್ಧಿ ಮಂಡಳಿ ಅಧ್ಯಕ್ಷ ಶರಣು ತಳ್ಳೀಕೇರಿ, ಪುರಸಭೆ ಅಧ್ಯಕ್ಷ ಗಂಗಾಧರ ಹಿರೇಮಠ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಅಮೃತ ಅಷ್ಟಗಿ, ಹಿರಿಯ ಕ್ರೀಡಾಪಟು ನಾಗರಾಜ ಮೇಲಿನಮನಿ, ಉಮೇಶ ಮಂಗಳೂರು,ಪರಶುರಾಮ ನಾಗರಾಳ, ವಜೀರ ಗೋನಾಳ.  ಸುಬಾಸ್ ಕರಿಗಾರ, ಕೆಆರ್ ಡಿಐಎಲ್ ಎಇಇ ಇರ್ಫಾನ್ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next