Advertisement

ಕುಂದಗೋಳ ಉಪ ಚುನಾವಣೆ ದಲಿತ ಮುಖಂಡರ ಜತೆ ಚರ್ಚೆ

12:16 PM Apr 29, 2019 | Team Udayavani |

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಲಿಡ್ಕರ್‌ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ರವಿವಾರ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿನ ದಲಿತ ಕಾಲೋನಿಗಳಿಗೆ ಭೇಟಿ ನೀಡಿ ಚುನಾವಣೆ ಸಿದ್ಧತೆ ಕುರಿತು ದಲಿತ ಮುಖಂಡರೊಂದಿಗೆ ಚರ್ಚೆ ನಡೆಸಿದರು.

Advertisement

ಕುಂದಗೋಳ, ಸಂಶಿ, ಬಿಲೇಬಾಳ, ಕಳಸ, ಯರಗುಪ್ಪಿ, ಗುಂಜಳ, ಹಿರೇನರ್ತಿ, ಚಿಕ್ಕನರ್ತಿ, ಇಂಗಳಗಿ ಗ್ರಾಮಗಳ ದಲಿತ ಕೇರಿಗಳಿಗೆ ಭೇಟಿ ನೀಡಿದ ಶಾಸಕರು, ಉಪ ಚುನಾವಣೆಯಲ್ಲಿ ದಲಿತ ಸಮಾಜ ಬಾಂಧವರು ಒಟ್ಟಾಗಿ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಬೇಕು ಎಂದು ಮನವಿ ಮಾಡಿದರು.

ಸಚಿವರಾಗಿದ್ದ ಸಿ.ಎಸ್‌.ಶಿವಳ್ಳಿ ಅವರು ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಂಡವರು. ದಲಿತ ಕಾಲೋನಿಗಳನ್ನು ಸಾಕಷ್ಟು ಅಭಿವೃದ್ಧಿಗೊಳಿಸಿದ್ದಾರೆ. ಅವರ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳಿಂದ ಕ್ಷೇತ್ರದ ಚಿತ್ರಣ ಬದಲಾಗಿದೆ. ಏ. 29ರಂದು ಕುಸುಮಾ ನಾಮಪತ್ರ ಸಲ್ಲಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಮರಿಯಪ್ಪ ಮುಡಚಿಬಣದ, ಯಲ್ಲಪ್ಪ ಕಾಲವಾಡ, ಬಸವರಾಜ, ಗುರನಾಥ ಚಲವಾದಿ, ಲೋಕೇಶ ಬೇವಿನಮರದ, ಸಿದ್ದಪ್ಪ ಚೂರಿ, ಫಕ್ಕಿರಪ್ಪ ಕರಗಲ್ಲ, ಶ್ರೀಕಾಂತ ದೊಡ್ಡಮನಿ, ಕಲ್ಲಪ್ಪ ಈಟಿ, ಪ್ರಭು, ಫರ್ವೇಜ್‌ ಕೊಣ್ಣೂರು ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next