Advertisement

ಚಲನಚಿತ್ರ ಬಾಲನಟರೊಂದಿಗೆ ಸಂವಾದ

03:15 AM Nov 23, 2018 | Team Udayavani |

ನೆಹರೂನಗರ: ‘ಕನಸುಗಳು’ ಕಾರ್ಯಕ್ರಮದ ಪ್ರಯುಕ್ತ ವಿವೇಕಾನಂದ ಪ. ಪೂ.  ಕಾಲೇಜಿನಲ್ಲಿ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಲನ ಚಿತ್ರದ ಬಾಲನಟರೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಚಲನಚಿತ್ರದ ಬಾಲನಟರಾದ ರಂಜನ್‌ (ಪ್ರವೀಣ), ಸಂಪತ್‌ (ಮಮ್ಮುಟ್ಟಿ), ಸಪ್ತಾ ಪಾವೂರ್‌ (ಪಲ್ಲವಿ) ಹಾಗೂ ಆತಿಶ್‌ (ಅರುಣ) ಕಾರ್ಯಕ್ರಮದಲ್ಲಿ ಭಾಗವಹಿ ಸಿದ್ದರು. ಚಲನಚಿತ್ರ ಕ್ಷೇತ್ರದ ತಮ್ಮ ಅನುಭವಗಳನ್ನು, ಮೆಚ್ಚಿದ ಘಟನೆಗಳನ್ನು ನೆನಪಿಸಿಕೊಂಡು, ಅಭಿಪ್ರಾಯ ಹಂಚಿಕೊಂಡರು.

Advertisement

ಬಾಲನಟ ರಂಜನ್‌ ಮಾತನಾಡಿ, ಪ್ರಪಂಚದಲ್ಲಿ ಯಾರೂ ದಡ್ಡರಿಲ್ಲ. ಪ್ರತಿಯೊಬ್ಬರೊಳಗೂ ಪ್ರತಿಭೆ ಇದ್ದೇ ಇರುತ್ತದೆ. ಅವುಗಳನ್ನು ಜಗತ್ತಿಗೆ ತಿಳಿಸಲು ಸೂಕ್ತವಾದ ವೇದಿಕೆ, ಅವಕಾಶಗಳು ಬೇಕು. ಅದನ್ನು ಸರಿಯಾಗಿ ಬಳಸಿಕೊಂಡರೆ ಬದುಕಿಗೆ ಹೊಸ ಅರ್ಥ ಉಂಟಾಗುತ್ತದೆ ಎಂದರು. ಬಾಲನಟಿ ಸಪ್ತಾ ಪಾವೂರ್‌ ಮಾತನಾಡಿ, ಆಸಕ್ತಿ ಇರುವ ಯಾವುದಾದರೂ ಚಟುವಟಿಕೆಗಳಲ್ಲಿ ಸಾಧನೆಯನ್ನು ಮಾಡುತ್ತಾ ಹೋದಂತೆ ಉಳಿದ ವಿಚಾರಗಳಲ್ಲೂ ತನ್ನಿಂದ ತಾನೇ ಆಸಕ್ತಿ ಮೂಡುತ್ತದೆ. ಅದು ಬದುಕಿಗೆ ಒತ್ತಡ ಎನಿಸುವುದಿಲ್ಲ ಎಂದರು.

ಸಂಪತ್‌ ಮಾತನಾಡಿ, ಪ್ರತಿಯೊಂದು ಮಗುವಿಗೂ ಶಾಲೆ ಕುರಿತು ಅಭಿಮಾನ ಇರುತ್ತದೆ. ವಿದ್ಯೆಯು ವ್ಯಕ್ತಿಗೆ ಹೊಂದಾಣಿಕೆಯ ಪಾಠವನ್ನು ಹೇಳಿಕೊಡುತ್ತದೆ. ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಪಡೆಯಬೇಕಿದ್ದರೆ ಕಠಿನ ಪರಿಶ್ರಮ ಅಗತ್ಯ. ಕನಸುಗಳನ್ನು ಸಾಧನೆಯ ಹಾದಿಯಲ್ಲಿ ಅಳವಡಿಸಿಕೊಂಡರೆ ನಿಜವಾದ ಸುಖ ಸಿಗುತ್ತದೆ ಎಂದರು.
ಉಪನ್ಯಾಸಕ ಹರೀಶ ಶಾಸ್ತ್ರಿ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next