Advertisement

ಸದ್ದು ಮಾಡಿದ ಬೆಳೆ-ಮನೆ ಹಾನಿ, ಭೂಸ್ವಾಧೀನ

03:17 PM Oct 15, 2022 | Team Udayavani |

ಸವದತ್ತಿ: ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಸಾರ್ವಜನಿಕರ ಅಹವಾಲು ಸ್ವೀಕಾರ ಸಂದರ್ಭದಲ್ಲಿ ಬೆಳೆ ಹಾನಿ, ಮನೆ ಹಾನಿ, ಭೂಸ್ವಾಧೀನ ವಿಷಯಗಳು ಭಾರೀ ಸದ್ದು ಮಾಡಿದವು.

Advertisement

ಮೂರು ವರ್ಷ ಕಳೆದರೂ ಬೆಳೆ ಹಾನಿ ಪರಿಹಾರ ಸಿಕ್ಕಿಲ್ಲ. ಜಮೀನು ವಾಟ್ನಿ ಕುರಿತು ತಲಾಠಿಗಳು ಸೂಕ್ತ ಕ್ರಮ ವಹಿಸುತ್ತಿಲ್ಲ. ರೈತರ ಪಹಣಿಯಲ್ಲಿ ನೀರಾವರಿ ನಿಗಮದ ಹೆಸರು, ರೈತರ ಕಡೆಗಣನೆ. ಕಾರ್ಖಾನೆಯಲ್ಲಿ ತೂಕ ಮಾಡಿದ ಹಾಗೂ ಪ್ರತ್ಯೇಕವಾಗಿ ಮಾಡಿದ ಕಬ್ಬು ಬೆಳೆ ತೂಕದಲ್ಲಿ ಅತೀವ ವ್ಯತ್ಯಾಸ ಬರುತ್ತಿದೆ ಎಂದು ದೂರಿದರು.

ಯಲ್ಲಮ್ಮ ದೇವಸ್ಥಾನ ಸ್ವಚ್ಛತೆಗೆ ಗುತ್ತಿಗೆ ಆಧಾರದಲ್ಲಿದ್ದ 45 ಜನರ ಪೈಕಿ 33 ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ. ಗುತ್ತಿಗೆದಾರ 45 ಜನರ ಹಣ ಪಾವತಿಸಿಕೊಳ್ಳುತ್ತಿದ್ದಾನೆ. 17 ಸಾವಿರ ನಿಗದಿತ ವೇತನವಿದ್ದರೂ 9 ಸಾವಿರ ಮಾತ್ರ ಪಾವತಿಸುತ್ತಿದ್ದಾನೆಂದು ದಲಿತ ಪ್ರಮುಖ ಬಸವರಾಜ ತಳವಾರ ಆರೋಪಿಸಿದರು. ಇಷ್ಟೊಂದು ಸಿಬ್ಬಂದಿ ಸ್ವಚ್ಛತೆಯಲ್ಲಿದ್ದರೂ ದೇವಸ್ಥಾನ ಸ್ವಚ್ಛತೆ ಮರೀಚಿಕೆಯಾಗಿದೆ. ಮುಜರಾಯಿ ಇಲಾಖೆಯ ಎಸಿ ಯೊಂದಿಗೆ ಚರ್ಚಿಸಲಾಗುವುದೆಂದು ಜಿಲ್ಲಾಧಿಕಾರಿ ನಿತೀಶ ಪಾಟೀಲ ತಿಳಿಸಿದರು.

ಚರಂಡಿ ಶುದ್ಧೀಕರಣ ಘಟಕ ಕಾಮಗಾರಿ ಅಪೂರ್ಣವಾದರೂ ಪುರಸಭೆಯಿಂದ ಹಣ ಪಾವತಿಸಲಾಗಿದೆ. ಪುರಸಭೆಯ ಮಳಿಗೆಗಳ ಆದಾಯ ಕುರಿತು ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲವೆಂದು ಡಿಸಿ ಅವರಿಗೆ ದೂರು ನೀಡಲಾಯಿತು. ಸುತಗಟ್ಟಿ, ಹಿಟ್ಟಣಗಿ ಗ್ರಾಮದಲ್ಲಿ ನೆಟ್‌ವರ್ಕ ಇಲ್ಲದ ಕಾರಣ ಪಡಿತರ ನೀಡುತ್ತಿಲ್ಲವೆಂದಾಗ ಬೇರೆ ವ್ಯವಸ್ಥೆ ಕಲ್ಪಿಸಿಕೊಳ್ಳಿ. ಇಲ್ಲವಾದರೆ ಪಡಿತರ ಕೇಂದ್ರದ ಅನುಮತಿ ರದ್ದುಗೊಳಿಸಲು ಆದೇಶಿಸಿದರು.

ಅಂಗನವಾಡಿ ಸಿಬ್ಬಂದಿ ನೇಮಕಾತಿಯಲ್ಲಿ ಅಂಗವಿಕಲ ಅಭ್ಯರ್ಥಿ ನೀಡಿದ ಖೊಟ್ಟಿ ದಾಖಲೆಗಳು, ಪುರಸಭೆ ವ್ಯಾಪ್ತಿಯಲ್ಲಿ 256 ಮನೆ ಹಾನಿಯಾದರೂ 2019 ರಲ್ಲಿ ಇವುಗಳನ್ನು ದಾಖಲಿಸದ್ದಕ್ಕೆ ಜೆಇ ನಿರ್ಮಲಾ ನಾಯಕ ಅವರನ್ನು ಡಿಸಿ ಎದುರು ಜನ ತರಾಟೆಗೆ ತೆಗೆದುಕೊಂಡರು. ಘನತ್ಯಾಜ್ಯ ವಿಲೇವಾರಿ ಘಟಕದ ಹತ್ತಿರ ನಾಯಿಗಳ ಹಾವಳಿ ಮತ್ತು ದುರ್ವಾಸನೆ ಕುರಿತಂತೆ ಮನವಿ ನೀಡಲಾಯಿತು. ಸವದತ್ತಿ ಠಾಣಾ ವ್ಯಾಪ್ತಿಗೆ ಹೆಚ್ಚುವರಿ ಪಿಎಸ್‌ಐ ನೀಡಲು ಎಸ್‌ಪಿ ಗೆ ದಲಿತ ಮುಖಂಡರೊಬ್ಬರು ಮನವಿ ಮಾಡಿದರು.

Advertisement

ಕೆಲ ವೈಯಕ್ತಿಕ ಅರ್ಜಿಗಳನ್ನು ನೇರವಾಗಿ ನಾಗರಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ನ್ಯಾಯ ಪಡೆಯಿರಿ. ದಾಖಲಾತಿ ವಿಳಂಬ ಮಾಡಿದರೂ ಜವಾಬ್ದಾರಿ ವಹಿಸಿ ಪರಿಹಾರ ನೀಡುವುದು ಅಧಿಕಾರಿಗಳ ಕರ್ತವ್ಯ. 2019-20 ರಲ್ಲಿ ಹಾನಿಗೀಡಾದ ಮನೆಗಳಿಗೆ ಪರಿಹಾರಕ್ಕೆ ಅವಕಾಶವಿಲ್ಲ. ಸರಕಾರಕ್ಕೆ ತಿಳಿಸಿ ಕ್ರಮ ವಹಿಸಲಾಗುವದು. ಮನೆ ಹಾನಿ ಪರಿಹಾರ ಸಿಗದ ಅರ್ಜಿದಾರರಿಗೆ ಬಸವ ವಸತಿ ಯೋಜನೆ ಅಥವಾ ಅಂಬೇಡ್ಕರ ವಸತಿ ಯೋಜನೆಯಲ್ಲಿ ಪರಿಹಾರ ಕಲ್ಪಿಸಲು ಡಿಸಿ ತಿಳಿಸಿದರು. ಎಸ್‌.ಪಿ. ಸಂಜೀವ ಪಾಟೀಲ, ಸಿಇಒ ದರ್ಶನ, ತಹಶೀಲ್ದಾರ್‌ ಜಿ.ಬಿ. ಜಕ್ಕನಗೌಡರ, ಡಿವೈಎಸ್‌ಪಿ ರಾಮನಗೌಡ ಹಟ್ಟಿ, ಶ್ರೀಶೈಲ ಅಕ್ಕಿ, ಕಾಂಚನಾ ಅಮಠೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next