Advertisement

ತಜ್ಞರೊಂದಿಗೆ ಚರ್ಚಿಸಿ ಸೂಕ್ತ ಶಿಫಾರಸು

04:34 PM Jul 10, 2021 | Team Udayavani |

ಧಾರವಾಡ: ರಾಜ್ಯದ ಖಾಸಗಿ ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳ ಕಟ್ಟಡ ಮತ್ತು ಅಗ್ನಿ ಸುರಕ್ಷತಾ ಪ್ರಮಾಣ ಪತ್ರಗಳ ಅಗತ್ಯತೆ ಕುರಿತು ಸರಳೀಕೃತ ಪರಿಹಾರ ಕಂಡುಕೊಂಡು, ಕಾನೂನು ತಜ್ಞರೊಂದಿಗೆ ಚರ್ಚಿಸಿ ಸೂಕ್ತ ಶಿಫಾರಸು ಮಾಡಲಾಗುವುದು ಎಂದು ಖಾಸಗಿ ಶಾಲೆ, ಕಾಲೇಜುಗಳ ಕಟ್ಟಡ ಸುರಕ್ಷತಾ ಪ್ರಮಾಣ ಪತ್ರದ ಅಗತ್ಯತೆ ಕುರಿತ ಪರಿಶೀಲನಾ ಸಮಿತಿ ಅಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ ಸಂಕನೂರ ಹೇಳಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಕಲಬುರ್ಗಿ ಹಾಗೂ ಬೆಳಗಾವಿ ಕಂದಾಯ ವಿಭಾಗಗಳ ವ್ಯಾಪ್ತಿಯ ಖಾಸಗಿ ಅನುದಾನಿತ, ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳ ಶಿಕ್ಷಣ ಸಂಸ್ಥೆಗಳ ಪದಾ ಧಿಕಾರಿಗಳಿಂದ ಅಹವಾಲು ಸ್ವೀಕಾರ ಹಾಗೂ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸುಪ್ರೀಂಕೋರ್ಟ್‌ ತೀರ್ಪಿನ ಅಡಿ-ಎನ್‌ಬಿಸಿ ನಿಯಮಗಳನ್ವಯ ರಾಜ್ಯದ ಖಾಸಗಿ ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಕಟ್ಟಡ ಮತ್ತು ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಒದಗಿಸಬೇಕಿದೆ. ಕಾನೂನು ಚೌಕಟ್ಟಿನಲ್ಲಿ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಂಡು ಖಾಸಗಿ ಶಿಕ್ಷಣ ಸಂಸ್ಥಗಳ ಹಿತ ಕಾಪಾಡಲು ಶಿಫಾರಸು ಮಾಡಿ ವರದಿ ಸಲ್ಲಿಸಲಾಗುವುದು. ತಾಲೂಕು ಮಟ್ಟದಲ್ಲಿಯೇ ಪ್ರಮಾಣ ಪತ್ರ ನೀಡುವಂತೆ ವ್ಯವಸ್ಥೆ ವಿಕೇಂದ್ರಿಕರಣ ಮಾಡಲಾಗುವುದು. ಬೆಂಗಳೂರಿನಲ್ಲಿ ಪುನಃ ಸಭೆ ನಡೆಸಿ ಮುಂದಿನ ಹಂತಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಕಟ್ಟಡ ಸುರಕ್ಷತೆ-ಅಗ್ನಿ ಸುರಕ್ಷತೆ ಕುರಿತು ಸುಪ್ರೀಂಕೋರ್ಟ್‌ ನೀಡಿದ ತೀರ್ಪುಗಳನ್ನು ಮತ್ತು ಶಿಕ್ಷಣ ಇಲಾಖೆ ಹೊರಡಿಸಿದ ಎಲ್ಲಾ ಸುತ್ತೋಲೆಗಳನ್ನು ಪರಿಶೀಲಿಸಲಾಗಿದೆ. ರಾಜ್ಯಾದ್ಯಂತ ಖಾಸಗಿ ಅನುದಾನಿತ, ಅನುದಾನ ರಹಿತ ಶಾಲಾ, ಕಾಲೇಜುಗಳ ಆಡಳಿತ ಮಂಡಳಿಗಳ ಪದಾ ಧಿಕಾರಿಗಳಿಂದ ಮನವಿ ಸ್ವೀಕರಿಸಲಾಗುತ್ತಿದೆ. ಈಗ ನಡೆದ ಕಲಬುರ್ಗಿ-ಬೆಳಗಾವಿ ವಿಭಾಗದ ಸಭೆಯಲ್ಲಿ ಉತ್ತಮ ಸಂಖ್ಯೆಯಲ್ಲಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಸಲಹೆ ನೀಡಿ, ಅಹವಾಲು ಸಲ್ಲಿಸಿದ್ದಾರೆ.

ಖಾಸಗಿ, ಗ್ರಾಮಾಂತರ ಪ್ರದೇಶದ ಶಿಕ್ಷಣ ಸಂಸ್ಥೆಗಳಿಗೆ ಜೀವ ತುಂಬುವ ಕಳಕಳಿಯೊಂದಿಗೆ ಸಮಿತಿ ಕಾರ್ಯ ನಿರ್ವಹಿಸುತ್ತಿದೆ ಎಂದರು. ಸಮಿತಿ ಉಪಾಧ್ಯಕ್ಷರಾದ ವಿಧಾನ ಪರಿಸತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಮಾತನಾಡಿ, ರಾಜ್ಯದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ನಿರ್ಮಾಣವಾದ ಅನೇಕ ಕಟ್ಟಡಗಳಿವೆ. ಅಂತಹ ಶಿಕ್ಷಣ ಸಂಸ್ಥೆಗಳಿಂದಲೂ ಮಾಹಿತಿ ಪಡೆದು ಸಮಗ್ರವಾಗಿ ಚರ್ಚಿಸಿ, ಸರಳವಾಗಿ ಕಾನೂನಾತ್ಮಕ ತೊಡಕಾಗದಂತೆ ಎಚ್ಚರ ವಹಿಸಿ ಪರಿಹಾರ ಕಂಡುಕೊಳ್ಳಲು ಸಮಿತಿ ಪ್ರಯತ್ನಿಸಿದೆ ಎಂದರು.

Advertisement

ಖಾಸಗಿ ಶಿಕ್ಷಣ ಸಂಸ್ಥೆಗಳ ಪದಾ ಧಿಕಾರಿಗಳಾದ ಶಶಿಧರ್‌ ದಿಂಡೂರ, ಶಂಕರ ಹಲಗತ್ತಿ, ಕಲಬುರ್ಗಿಯ ಸುನೀಲ ಹುಡಗಿ, ಜಯದೇವ ಮೆಣಸಗಿ, ಗದಗಿನ ಶ್ರೀನಿವಾಸ ಹುಯಿಲಗೋಳ, ಮಹೇಶ್‌ ತೆಂಗಿನಕಾಯಿ, ಅಡಿವೆಪ್ಪ, ಮುಂಡರಗಿಯ ಡಿ.ಸಿ.ಹಿರೇಮಠ, ಹಾವೇರಿಯ ಉಮೇಶ್‌ ಗುರಲಿಂಗಪ್ಪಗೌಡ್ರ, ಕೊಪ್ಪಳದ ಎಸ್‌.ಎ. ತಹಶೀಲ್ದಾರ, ಫಕ್ಕೀರಪ್ಪ ಎಮ್ಮಿಯವರ, ಬಳ್ಳಾರಿಯ ಶ್ರೀನಿವಾಸ ಕುರಗೋಡ, ವಿಜಯಪುರದ ಸಂಗಮೇಶ ಬಿರಾದಾರ, ಕಲಬುರ್ಗಿಯ ಚನ್ನಬಸಪ್ಪ ಗಾರಂಪಳ್ಳಿ ಮತ್ತಿತರರು ಅಹವಾಲು ಮಂಡಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ, ಪ್ರಾಥಮಿಕ ಶಿಕ್ಷಣ ನಿರ್ದೇಶಕ ಪ್ರಸನ್ನಕುಮಾರ, ಲೋಕೋಪಯೋಗಿ ಮುಖ್ಯ ಇಂಜಿನಿಯರ್‌ ಶಿವಯೋಗಿ ಹಿರೇಮಠ, ಅಗ್ನಿಶಾಮಕ ಪ್ರಾದೇಶಿಕ ಅಧಿ ಕಾರಿ ಶ್ರೀಕಾಂತ, ಗೃಹ ಇಲಾಖೆಯ ಸರ್ಕಾರದ ಉಪಕಾರ್ಯದರ್ಶಿ ಪಂಪನಗೌಡ ಇದ್ದರು. ಬೆಳಗಾವಿ, ಕಲಬುರ್ಗಿ ವಿಭಾಗದ ಸಾರ್ವಜನಿಕ ಶಿಕ್ಷಣ, ಪದವಿ ಪೂರ್ವ ಶಿಕ್ಷಣ ಇಲಾಖೆಗಳ ಉಪನಿರ್ದೇಶಕರು, ಶಿಕ್ಷಣ ಸಂಸ್ಥೆಗಳ ಪದಾ ಧಿಕಾರಿಗಳು ಇದ್ದರು. ಹಿರಿಯ ಸಹಾಯಕ ನಿರ್ದೇಶಕಿ ವಿದ್ಯಾ ನಾಡಿಗೇರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next