Advertisement

ಅನುದಾನ ಬಳಕೆ ತಾರತಮ್ಯ: ಬಿಜೆಪಿ ಧರಣಿ

03:45 AM Feb 15, 2017 | Team Udayavani |

ವಿಧಾನಸಭೆ: ರಾಜ್ಯ ಸರ್ಕಾರ ನೀಡುವ ವಿಶೇಷ ಘಟಕ ಯೋಜನೆಯ ಅನುದಾನವನ್ನು ಶಾಸಕರು ಸೂಚಿಸಿದ
ಕಾಮಗಾರಿಗೆ ಬದಲು ಚಿಕ್ಕೋಡಿ ಸಂಸದ ಪ್ರಕಾಶ್‌ ಹುಕ್ಕೇರಿ ಸೂಚಿಸಿರುವ ಪ್ರದೇಶಗಳಿಗೆ ನೀಡಿರುವುದಕ್ಕೆ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಆಕ್ಷೇಪ ವ್ಯಕ್ತಪಡಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು.

Advertisement

ಶಶಿಕಲಾ ಜೊಲ್ಲೆ ಅವರಿಗೆ ಪ್ರತಿಪಕ್ಷ ನಾಯಕ ಶೆಟ್ಟರ್‌ ಸೇರಿ ಎಲ್ಲರೂ ಬೆಂಬಲಿಸಿ ಸದನದ ಬಾವಿಗಿಳಿದು ಪ್ರತಿಭಟನೆ
ನಡೆಸಿದರು. ಪೌರಾಡಳಿತ ಸಚಿವ ಈಶ್ವರ ಖಂಡ್ರೆ, ನಿಪ್ಪಾಣಿ ಕ್ಷೇತ್ರದಲ್ಲಿ ವಿಶೇಷ ಘಟಕ ಯೋಜನೆಯಡಿ ಶಾಸಕರಿಗೆ
ಬಿಡುಗಡೆಯಾಗಿದ್ದ 1 ಕೋಟಿ ರೂ. ಹಣವನ್ನು ಚಿಕ್ಕೋಡಿ ಸಂಸದ ಪ್ರಕಾಶ್‌ ಹುಕ್ಕೇರಿ ಹೇಳಿದವರಿಗೆ ನೀಡಿದ್ದಾರೆ. ಅದನ್ನು
ವಾಪಸ್‌ ಪಡೆದು ಶಾಸಕರ ಹಕ್ಕು ಕಾಪಾಡಬೇಕೆಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಸರ್ಕಾರ ಸದನಕ್ಕೆ ಅವಮಾನ
ಮಾಡುತ್ತಿದೆ ಎಂದು ಆರೋಪಿಸಿದರು. ಒತ್ತಾಯಕ್ಕೆ ಮಣಿದ ಸಚಿವ ಖಂಡ್ರೆ, ಶಾಸಕರು ಸೂಚಿಸಿದ ಪ್ರದೇಶಗಳಿಗೆ ಕಾಮಗಾರಿ ಕೈಗೊಳ್ಳಲು ಸೂಚನೆ ನೀಡುವುದಾಗಿ ಹೇಳಿದ ನಂತರ ಬಿಜೆಪಿ ಸದಸ್ಯರು ಪ್ರತಿಭಟನೆ ಹಿಂಪಡೆದರು.

“2018ರ ವೇಳೆಗೆ 2 ಲಕ್ಷ ಕೋಟಿ ರೂ. ಬಜೆಟ್‌’
ವಿಧಾನಪರಿಷತ್ತು: “ನನ್ನ ಅವಧಿ ಮುಗಿಯವ 2018ರ ವೇಳೆಗೆ 2 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ ಮಂಡಿಸುತ್ತೇನೆ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರಿಸಿದ ಅವರು, “ಯಡಿಯೂರಪ್ಪ ಸಿಎಂ ಆಗಿದ್ದಾಗ ತಾನು 1 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ ಮಂಡಿಸಿದ್ದೇನೆ ಎಂದು ಹೇಳಿಕೊಂಡಿದ್ದರು. ನನ್ನ ಮುಖ್ಯಮಂತ್ರಿ ಅವಧಿ ಮುಗಿಯುವದರೊಳಗೆ ನಾನು 2 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ ಮಂಡಿಸುತ್ತೇನೆ ಎಂದು ಘೋಷಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next