Advertisement

ಮ್ಯಾನ್ v/s ವೈಲ್ಡ್ ಶೋ ಕನ್ನಡದಲ್ಲೇ ನೋಡಿ; ಕೊಡ್ಲಾಡಿ ಕಿರಣ್ ಟ್ವೀಟ್ ಗೆ ಡಿಸ್ಕವರಿ ಉತ್ತರ!

09:21 AM Aug 13, 2019 | Nagendra Trasi |

ನವದೆಹಲಿ/ಬೆಂಗಳೂರು: ಡಿಸ್ಕವರಿ ಚಾನೆಲ್ ನಲ್ಲಿ ಸೋಮವಾರ ರಾತ್ರಿ 9ಗಂಟೆಗೆ “ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಕಾರ್ಯಕ್ರಮ ವೀಕ್ಷಿಸಲು ದೇಶಾದ್ಯಂತ ಜನರು ಕುತೂಹಲದಿಂದ ಎದುರು ನೋಡುತ್ತಿರುವ ನಡುವೆಯೇ ಮತ್ತೊಂದು ಸಂತಸದ ಸುದ್ದಿ ಹೊರಬಿದ್ದಿದೆ. ಅದೇನೆಂದರೆ ಪ್ರಧಾನಿ ಮೋದಿಯ ಈ ಕಾರ್ಯಕ್ರಮವನ್ನು ಕನ್ನಡದಲ್ಲಿಯೂ ವೀಕ್ಷಿಸಬಹುದಾಗಿದೆ.

Advertisement

ಕುಂದಾಪುರದ ಕೊಡ್ಲಾಡಿಯ ಕಿರಣ್ ಎಂಬವರು, ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮ ಕನ್ನಡದಲ್ಲಿಯೂ ಲಭ್ಯವಿದೆಯೇ ಎಂದು ಟ್ವೀಟ್ ಮೂಲಕ ಡಿಸ್ಕವರಿ ಚಾನೆಲ್ ಗೆ ಕೇಳಿದ್ದರು. ಅದಕ್ಕೆ ಡಿಸ್ಕವರಿ ನೆಟ್ ವರ್ಕ್ ನ ದಕ್ಷಿಣ ಏಷ್ಯಾದ ಎಂಡಿ ಮೇಘಾ ಅವರು ಹೌದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಆ ನಿಟ್ಟಿನಲ್ಲಿ ಡಿಸ್ಕವರಿ ಚಾನೆಲ್ ಕನ್ನಡದಲ್ಲಿಯೂ ಲಭ್ಯವಾಗಲಿದ್ದು, ವೀಕ್ಷಕರು ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮವನ್ನು ಕನ್ನಡದಲ್ಲಿಯೇ ವೀಕ್ಷಿಸಬಹುದಾಗಿದೆ. ಈಗಾಗಲೇ ಟ್ವೀಟರ್ ನಲ್ಲಿ ಹಲವರು ಇವತ್ತಿನಿಂದ ಡಿಸ್ಕವರಿ ಚಾನೆಲ್ ಕನ್ನಡದಲ್ಲಿಯೂ ಲಭ್ಯ. ಕನ್ನಡದಲ್ಲಿ ನೋಡಿ, ಅಕ್ಕಪಕ್ಕದವರಿಗೂ ನೋಡಲು ಹೇಳಿ ಎಂದು ಅರುಣ್ ಜಾವಗಲ್ ಅವರು ವಿನಂತಿ ಮಾಡಿಕೊಂಡಿದ್ದಾರೆ.

Advertisement

ಡಿಸ್ಕವರಿ ವಾಹಿನಿಯನ್ನು ಕನ್ನಡದಲ್ಲಿ ವೀಕ್ಷಿಸಲು ಈ ಕೆಳಗಿನ ಹಂತ ಅನುಸರಿಸಿ ಎಂದು ಕಿರಣ್ ಟ್ವೀಟ್ ಮಾಡಿದ್ದಾರೆ…

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next