Advertisement
ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಗೆ ಸೂಚಿಸಿದ್ದರೂ ಕೆಂಪಕ್ಕಿಗೆ ಅವಕಾಶ ಇಲ್ಲವಾಗಿದೆ. ಮಳೆ ಯಿಂದಾಗಿ ಭತ್ತ ಮತ್ತು ಬೈ ಹುಲ್ಲು ಹಾಳಾಗಿದ್ದು ಅದಕ್ಕೂ ಸರಿಯಾಗಿ ಪರಿಹಾರ ಸಿಕ್ಕಿಲ್ಲ. ಕರಾವಳಿಯ ಕೆಲವು ಶಾಸಕರು ತಮ್ಮ ಪ್ರದೇಶದ ಸಮಸ್ಯೆಗಳ ಕುರಿತು ಪ್ರಸ್ತಾವಿಸಿರುವರೇ ವಿನಾ ಕರಾವಳಿಯ ಪ್ರಮುಖ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಗಮನ ಸೆಳೆದಿಲ್ಲ.
Related Articles
ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಡಿ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಬಹು ವರ್ಷಗಳಿಂದ ಹೋರಾಟ ಗಳು ನಡೆದಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸುತ್ತ ಬರಲಾಗಿದೆ. ಈಚೆಗೆ ಕೇಂದ್ರದ ಗೃಹ ಖಾತೆಯ ಸಹಾಯಕ ಸಚಿವ ನಿತ್ಯಾನಂದ ರಾಯ್, ಸದ್ಯ ಇದಕ್ಕೆ ಅವಕಾಶ ಇಲ್ಲ ಎಂದು ಲೋಕಸಭೆಯಲ್ಲಿ ಉತ್ತರ ನೀಡಿದ್ದಾರೆ. ಈ ಬಗ್ಗೆಯೂ ಕರಾವಳಿಯ ಶಾಸಕರು ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯುವ ಅಥವಾ ರಾಜ್ಯ ಸರಕಾರದ ಮೂಲಕ ಕೇಂದ್ರದ ಮೇಲೆ ಮತ್ತೊಮ್ಮೆ ಒತ್ತಡ ಹೇರುವ ಪ್ರಯತ್ನ ಮಾಡಬೇಕಿತ್ತು. ರಾಜ್ಯ ಸರಕಾರದಲ್ಲಿ ಕರಾವಳಿಯ ಎರಡು ಜಿಲ್ಲೆಗಳ ಮೂವರು ಸಚಿವರಿದ್ದು, ಕೇಂದ್ರ ದಲ್ಲಿ ಕೃಷಿ ಖಾತೆಯ ಸಚಿವೆ ಕರಾವಳಿ ಯವರಾಗಿದ್ದರೂ ಸ್ಥಳೀಯ ಕುಚ್ಚಲು ಅಕ್ಕಿ ಖರೀದಿಸಿ ಪಡಿತರ ವ್ಯವಸ್ಥೆ ಯಡಿ ವಿತರಿಸುವ ಪ್ರಕ್ರಿಯೆ ಇನ್ನೂ ಆರಂಭ ವಾಗಿಲ್ಲ. ಈ ಬಗ್ಗೆಯೂ ಸರಕಾರದ ಗಮನ ಸೆಳೆಯುವ ಮತ್ತು ಕೇಂದ್ರದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಲಿಲ್ಲ.
Advertisement
ಕ್ಷೇತ್ರದ ಸಮಸ್ಯೆಗೆ ಸೀಮಿತಕರಾವಳಿಯ ಶಾಸಕರು ತಮ್ಮ ಕ್ಷೇತ್ರದ ಇ-ಸ್ವತ್ತು ತಂತ್ರಾಂಶ ಸಮಸ್ಯೆ, ಯುಪಿಸಿಎಲ್ ವಿದ್ಯುತ್ ಮಾಗದಿಂದ ಅನಾನುಕೂಲ ಮತ್ತಿತರ ಸಮಸ್ಯೆ ಗಳನ್ನು ಪ್ರಶ್ನೋತ್ತರ ಕಲಾಪ ವೇಳೆ ಸರಕಾರದ ಗಮನಕ್ಕೆ ತಂದು ಪರಿ ಹಾರ ಕಂಡುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ. ಆದರೆ ಇಡೀ ಕರಾವಳಿಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಅಧಿವೇಶನವನ್ನು ವೇದಿಕೆ ಯಾಗಿ ಬಳಸಿಕೊಳ್ಳುತ್ತಿಲ್ಲ. ಈ ವಾರವಾದರೂ ಧ್ವನಿಯೆತ್ತಲಿ
ಕರಾವಳಿಯಲ್ಲಿ ಕಾಂಗ್ರೆಸ್‌ನ ಏಕೈಕ ಶಾಸಕ ಬಿಟ್ಟರೆ ಉಳಿದೆಲ್ಲ ಕ್ಷೇತ್ರಗಳಲ್ಲಿ ಆಡಳಿತಾರೂಢ ಬಿಜೆಪಿಯ ಶಾಸಕರಿದ್ದಾರೆ. ಇವರಲ್ಲಿ ಮೂವರು ಸಚಿವರು. ಶಾಸಕ, ಸಚಿವರು ಒಟ್ಟಾಗಿ ಈ ವಾರವಾದರೂ ಕರಾವಳಿಯ ವಿವಿಧ ಸಮಸ್ಯೆಗಳನ್ನು ಚರ್ಚಿಸಲು ಉಭಯ ಸದನದಲ್ಲಿ ಅವಕಾಶ ಕೋರಿ ಕನಿಷ್ಠ ಒಂದೆರಡು ತಾಸು ಕಾಲವಾದರೂ ಚರ್ಚೆ ನಡೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು ಎಂಬುದು ಕರಾವಳಿ ಭಾಗದ ಜನರ ಆಶಯ. -ರಾಜು ಖಾರ್ವಿ ಕೊಡೇರಿ