ಹೊಸದಿಲ್ಲಿ: ಹಬ್ಬಗಳ ಹಿನ್ನೆಲೆಯಲ್ಲಿ ಹೆಚ್ಚಿನ ಮಾರಾಟದ ನಿರೀಕ್ಷೆಯಲ್ಲಿರುವ ವಾಹನ ತಯಾರಿಕ ಕಂಪೆನಿಗಳು,
ಹಳೆ ವಾಹನಗಳನ್ನು ಮಾರಿ ಅದರ ಬದಲು ಹೊಸ ವಾಹನ ಖರೀದಿ ಮೇಲೆ ಶೇ.15ರಿಂದ ಶೇ.3.5ವರೆಗೆ ರಿಯಾಯಿತಿ ನೀಡಲು ಮುಂದಾಗಿವೆ. ಕೆಲವು ಕಂಪೆನಿಗಳು ಗರಿಷ್ಠ 25 ಸಾವಿರ ರೂ.ವರೆಗೂ ರಿಯಾಯಿತಿ ನೀಡಲು ನಿರ್ಧರಿಸಿವೆ.
ವಾಹನ ನಿರ್ಮಾಣ ಕಂಪೆನಿಗಳು ಈ ನಿರ್ಧಾರವು ಆರ್ಥಿಕತೆ ಚಟುವಟಿಕೆ ಹೆಚ್ಚಳ, ಶುದ್ಧ, ಸುರಕ್ಷಿತ ಮತ್ತು ಹೆಚ್ಚು ದಕ್ಷತೆಯ ವಾಹನಗಳನ್ನು ಬಳಸಲು ಉತ್ತೇಜಿಸುತ್ತಿವೆ ಎಂದು ಹೇಳಲಾಗು ತ್ತಿದೆ.
ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಂಗಳವಾರ ದಿಲ್ಲಿಯಲ್ಲಿ, ಎಸ್‌ಐಎಂ ನಿಯೋಗದ ಜತೆ ಸಭೆ ನಡೆಸಿ, ಆಟೋಮೊಬೈಲ್ ಉದ್ಯಮ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಆಲಿಸಿದ್ದಾರೆ. ಈ ಸಭೆಯ ವೇಳೆ, ವಾಹನ ಉತ್ಪಾದಕರು ನಿಗದಿತ ಅವಧಿಗೆ ವಾಹನಗಳ ಖರೀದಿ ಮೇಲೆ ವಿನಾಯಿತಿ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಡೀಲರ್ ಅಸೋಸಿಯೇಶನ್ ಪ್ರಕಾರ ಸುಮಾರು 7 ಲಕ್ಷ ಹೊಸ ವಾಹನಗಳು ಮಾರಾಟವಾಗದೇ ಉಳಿದುಕೊಂಡಿವೆ.