Advertisement

Udupi ಉಸ್ತುವಾರಿ ಸಚಿವರ ವಿರುದ್ಧ ಕಾಂಗ್ರೆಸ್‌ ಪಾಳಯದಲ್ಲಿ ಅಸಮಾಧಾನ?

11:41 PM Jun 05, 2024 | Team Udayavani |

ಉಡುಪಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನಿರೀಕ್ಷೆಗೂ ಮೀರಿದ ಸೋಲು ಕಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಾಳ ಯದಲ್ಲಿ ಒಂದೆಡೆ ನೀರವ ಮೌನ, ಇನ್ನೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಸಣ್ಣ ಅಸ ಮಾಧಾನ ಕೇಳಿಬರ ತೊಡಗಿದೆ.

Advertisement

ಲೋಕಸಭೆ ಚುನಾವಣೆ ಟಿಕೆಟ್‌ ಘೋಷಣೆಗೂ ಮೊದಲು ಜಿಲ್ಲೆಗೆ ಆಗ ಮಿಸಿದ್ದ ಸಚಿವೆ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಬರಲಿಲ್ಲ.

ಉಡುಪಿ-ಚಿಕ್ಕಮಗಳೂರು ಲೋಕಸಭೆ ಚುನಾವಣೆಗೆ ಪ್ರಬಲ ಅಭ್ಯರ್ಥಿಯನ್ನು ಪಕ್ಷ ಘೋಷಿಸಿ ದ್ದರೂ ಜಿಲ್ಲಾ ಉಸ್ತುವಾರಿ ಸಚಿವೆ ಒಮ್ಮೆಯೂ ಪ್ರಚಾರಕ್ಕೆ ಬರಲಿಲ್ಲ. ತಮ್ಮ ಪುತ್ರ ಬೆಳಗಾವಿಯಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಹಿನ್ನೆಲೆಯಲ್ಲಿ ಅಲ್ಲಿಯೇ ಪ್ರಚಾರ ಪ್ರಕ್ರಿಯೆ ನಡೆಸಿಕೊಂಡಿದ್ದರು.

ಜಿಲ್ಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ಪರವಾಗಿ ಒಮ್ಮೆಯೂ ಪ್ರಚಾರ ನಡೆ ಸಿಲ್ಲ. ಅಷ್ಟು ಮಾತ್ರವ ಲ್ಲದೇ ಚುನಾ ವಣೆ ಮುಗಿದ ಬಳಿಕವೂ ವಿಧಾನ ಪರಿಷತ್‌ ಚುನಾವಣೆಗೂ ಪ್ರಚಾರಕ್ಕೆ ಬರಲಿಲ್ಲ, ಒಟ್ಟಾರೆಯಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಇಡೀ ಜಿಲ್ಲೆ ಯನ್ನು ಚುನಾವಣೆ ಸಂದರ್ಭದಲ್ಲಿ ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂಬ ಆರೋಪ ಕಾಂಗ್ರೆಸ್‌ ವಲಯದ್ದು.

ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಉಸ್ತುವಾರಿ ಕೆ.ಜೆ. ಜಾರ್ಜ್‌ ಕೆಲವು ಬಾರಿ ಉಡುಪಿಗೆ ಭೇಟಿ ನೀಡಿ ಪಕ್ಷದ ಪ್ರಮುಖರ ಸಭೆ ನಡೆಸಿದ್ದರು. ಹಾಗೆಯೇ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಕೂಡ ಉಡುಪಿಗೆ ಭೇಟಿ ನೀಡಿ ಅಭ್ಯರ್ಥಿಯ ಪರ ಪ್ರಚಾರ ನಡೆಸಿದ್ದರು. ಆದರೆ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಲಕ್ಷ್ಮೀ ಹೆಬ್ಬಾಳ್ಕರ್‌ ಒಮ್ಮೆಯೂ ಚುನಾವಣೆ ಪ್ರಚಾರಕ್ಕೆ ಬಾರದೇ ಇರುವುದು ಈ ಅಸಮಾಧಾನಕ್ಕೆ ಕಾರಣ.

Advertisement

ಗೋ ಬ್ಯಾಕ್‌ ಅಭಿಯಾನ
ಈಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಉಡುಪಿಯ ಕಾಂಗ್ರೆಸ್‌ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಅವರ ವಿರುದ್ಧ ಸಾಮಾಜಿಕ ಜಾಲತಾ ಣದಲ್ಲಿ “ಗೋ ಬ್ಯಾಕ್‌’ ಅಭಿಯಾನ ನಡೆಸುತ್ತಿದ್ದು, ಸಮಸ್ಯೆ ಆದಾಗ ನೀವು ಬರುವುದೇ ಇಲ್ಲ ಎಂದು ಕಿಡಿಕಾರಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸುವಂತೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next