Advertisement

ಶಿಸ್ತುಬದ್ಧ ಜೀವನ ವ್ಯಕ್ತಿತ್ವದ ಪ್ರತಿಬಿಂಬ:ಶುಭಾ ಬಾಳಿಗ

02:30 AM Jul 19, 2017 | Harsha Rao |

ಕೊಡಿಯಾಲ್‌ಬೈಲ್‌: ನಾಯಕ ಸ್ಥಾನದಲ್ಲಿರುವವರು ಆತ್ಮ ವಿಶ್ವಾಸ, ಸಕಾರಾತ್ಮಕ ಚಿಂತನೆ, ಶಿಸ್ತುಬದ್ಧತೆ,   ಪ್ರಾಮಾಣಿಕ ಸನ್ನಡತೆಗಳಿಂದ ಸಾಂಘಿಕವಾಗಿ ಶ್ರಮಿಸಬಲ್ಲ ವ್ಯಕ್ತಿತ್ವವನ್ನು ಹೊಂದಿರಬೇಕು. ಶಿಸ್ತುಬದ್ಧ ಜೀವನ ವ್ಯಕ್ತಿತ್ವದ ಪ್ರತಿಬಿಂಬವಾಗಿದೆ ಎಂದು ನ್ಯಾಯವಾದಿ ಶುಭಾ ಬಾಳಿಗ  ಹೇಳಿದರು.  

Advertisement

ಕೆನರಾ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನ  ಕಾರ್ಯ ಕ್ರಮದಲ್ಲಿ  ಅವರು  ಮುಖ್ಯ ಅತಿಥಿಯಾಗಿದ್ದರು. ಕೆನರಾ ಹೈಸ್ಕೂಲ್‌ ಅಸೋಸಿಯೇಶನ್‌ ಗೌರವ ಕಾರ್ಯದರ್ಶಿ ಎಂ. ರಂಗನಾಥ ಭಟ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ನಾಯಕರು ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮಲ್ಲಿರುವ ಸಾಮರ್ಥ್ಯವನ್ನು ಅನಾವರಣಗೊಳಿಸುವ ಮೂಲಕ ಕಾಲೇಜಿನ ಘನತೆಯನ್ನು ಎತ್ತಿಹಿಡಿಯಲು ಶ್ರಮಿಸಬೇಕು ಎಂದು ಹೇಳಿದರು.ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡು ದುಡಿಯ ಬಲ್ಲವರೇ ಉತ್ತಮ ನೇತಾರ ರಾಗಬಲ್ಲರು ಎಂದು ಪ್ರಾಂಶುಪಾಲೆ ಡಾ| ಕೆ.ವಿ. ಮಾಲಿನಿ ಹೇಳಿದರು. ಕಾಲೇಜಿನ  ಸಂಚಾಲಕ ಮಾರೂರು ಸುಧೀರ್‌ ಪೈ ಅತಿಥಿಯಾಗಿದ್ದರು. ವಿದ್ಯಾರ್ಥಿ ಕ್ಷೇಮಪಾಲಕಿ ಪ್ರೊ| ಸಂಧ್ಯಾ ಬಿ. ಚುನಾಯಿತ ನಾಯಕರಿಗೆ ಪ್ರತಿಜ್ಞಾ  ವಿಧಿಯನ್ನು ಬೋಧಿಸಿದರು. ವಿದ್ಯಾರ್ಥಿ  ಕ್ಷೇಮಪಾಲಕಿ ಡಾ| ಭುವನಾ ರಾಮಚಂದ್ರನ್‌ ಉಪಸ್ಥಿತರಿದ್ದರು.  ಅನಸೂಯಾ ಭಾಗವತ್‌ ವಂದಿಸಿದರು.ವಿದ್ಯಾರ್ಥಿನಿ ದೀûಾ ಕಾರ್ಯ ಕ್ರಮವನ್ನು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next