Advertisement
ಏ.14 ರಂದು ರಾಫ್ಟ್ ಒಂದರಲ್ಲಿ ಹೆಚ್ಚಿನ ಪ್ರವಾಸಿಗರನ್ನು ಹಾಗೂ ಮಕ್ಕಳನ್ನು ಕುಳ್ಳಿರಿಸಿ ರಾಫ್ಟ್ ಮಾಡಿ, ಅವಘಡವಾದ ವಿಡಿಯೋ ವೈರಲ್ ಆದ ಕಾರಣ, ಆ ಘಟನೆ ಸಂಬಂಧ ಪ್ರಕರಣ ದಾಖಲಿಸಲಾಯಿತು. ಎಸ್ಪಿ ಸುಮನ್, ಎಸಿ ಸೇರಿದಂತೆ ನಾನು ಸಹ ಸ್ಥಳಕ್ಕೆ ಭೇಟಿ ಮಾಡಿದ್ದೆವು. ರಾಫ್ಟಿಂಗ್ ನಲ್ಲಿ ಶಿಸ್ತು ತರುವುದಷ್ಟೇ ನಮ್ಮ ಉದ್ದೇಶವಾಗಿತ್ತು ಎಂದು ಜಿಲ್ಲಾಧಿಕಾರಿ ಹೇಳಿದರು.
Related Articles
Advertisement
ಪ್ರವಾಸೋದ್ಯಮಿಗಳಿಗೆ ತೊಂದರೆ ಕೊಡುವ ಯಾವುದೇ ಉದ್ದೇಶ ನಮಗಿಲ್ಲ. ಪ್ರವಾಸಿಗರು ಹಾಗೂ ಉದ್ಯಮಿಗಳು ಇಬ್ಬರಿಗೂ ಅನುಕೂಲವಾಗಬೇಕು ಎಂದು ಜಿಲ್ಲಾಧಿಕಾರಿಗಳು, ನಿಯಮಬದ್ಧವಾಗಿ ಉದ್ಯಮ ನಡೆಸಿ ಎಂದರು.
ದಾಂಡೇಲಿ-ಜೊಯಿಡಾ ಭಾಗದಲ್ಲಿ ಜಲಕ್ರೀಡೆಗಳು ನಿಂತಿಲ್ಲ: ದಾಂಡೇಲಿ ಜೊಯಿಡಾ ಭಾಗದಲ್ಲಿ ಜಲ ಕ್ರೀಡೆಗಳು ನಿಂತಿಲ್ಲ. ಕಾಳಿ ನದಿಯಲ್ಲಿ ಒಂದು ಅವಘಡ ನಡೆಯಿತು. ಅದೃಷ್ಟವಾಶತ್ ಯಾರಿಗೂ ಏನೂ ಆಗಿಲ್ಲ. ಈ ಘಟನೆ ನಂತರ ಎಲ್ಲಾ ಉದ್ಯಮಿಗಳ ದಾಖಲೆ ಪರಿಶೀಲಿಸಿ ಎಂದಷ್ಟೇ ನಾನು ಹೇಳಿದ್ದೆ. ಉದ್ಯಮಿಗಳ ದಾಖಲೆ ತೋರಿಸಿ ಜಲ ಸಾಹಸ ಕ್ರೀಡೆಗಳನ್ನು ಮುಂದುವರಿಸಲಿ ಎಂಬ ಉದ್ದೇಶ ನನ್ನದಾಗಿತ್ತು. ಹೊಸ ನಿಯಮಗಳು, ಡೆಪಾಜಿಟ್ ವಿಷಯ ಇನ್ನೂ ಚರ್ಚೆಯ ಹಂತದಲ್ಲಿದ್ದ ಕಾರಣ ಅದರ ವಿವರಗಳನ್ನು ಮಾಧ್ಯಮಗಳಿಗೆ ನೀಡಿರಲಿಲ್ಲ. ಆದರೆ ಉದ್ಯಮಿಗಳಿಗೆ ಈ ವಿಷಯ ತಿಳಿಸಲಾಗಿತ್ತು. ಇದಕ್ಕೆ ಉದ್ಯಮಿಗಳು ಪ್ರತಿಕ್ರಿಯೆ ನೀಡಲಿಲ್ಲ. ಚರ್ಚೆಗೂ ಬರಲಿಲ್ಲ. ಡಿಪಾಜಿಟ್ ಕಡಿಮೆ ಮಾಡಿ ಎಂದು ಮನವಿಯನ್ನೂ ಸಹ ಸಲ್ಲಿಸಲಿಲ್ಲ. ಹಾಗಾಗಿ ಈ ಸಂಗತಿಯಲ್ಲಿ ಕೆಲವರಿಗೆ ತಪ್ಪು ಗ್ರಹಿಕೆಯಾಗಿದೆ. ಕೋವಿಡ್ ಸಮಯದಲ್ಲಿ ಉದ್ಯಮ ಬಂದ್ ಆಗಿದ್ದು ನನಗೂ ಗೊತ್ತಿದೆ. ಈಗ ನಾವು ಇದ್ದಕ್ಕಿದ್ದಂತೆ ಹೊಸದಾಗಿ ಕಠಿಣ ನಿಯಮ ಹೇರುವ ವಿಚಾರವಿಲ್ಲ. ಆದರೆ ಉದ್ಯಮಿಗಳು ನಮ್ಮೊಡನೆ ಚರ್ಚಿಸಲಿ ಎಂದರು.
ಪರವಾನಿಗೆ ಇಲ್ಲದವರು ಪರವಾನಿಗೆ ಪತ್ರಗಳನ್ನು ಪಡೆದು, ಇದ್ದವರು ಅಧಿಕಾರಿಗಳಿಗೆ ದಾಖಲೆ ತೋರಿಸಿ ಉದ್ಯಮ ಪ್ರಾರಂಭಿಸಲಿ ಎಂದರು.
ಎಸ್ಪಿ ಸುಮನ್ ಪನ್ನೇಕರ್ ಮಾತನಾಡಿ 2013 ರಿಂದ 2022ರ ತನಕ ಕಾಳಿ ನದಿಯಲ್ಲಿ ಜಲಸಾಹಸ ಕ್ರೀಡೆಗೆ ಸಂಬಂಧ 8 ಪ್ರಕರಣಗಳು ಘಟಸಿವೆ. ಒಂದು ಪ್ರಕರಣದಲ್ಲಿ ಮಾತ್ರ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಮೂರರಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ. ನಾಲ್ಕು ಪ್ರಕರಣಗಳು ಗಂಭೀರವಾದವುಗಳಲ್ಲ. ಒಂದು ಘಟನೆ ರಾಫ್ಟಿಂಗ್ ಗೆ ಪ್ರವಾಸಿಗರನ್ನು ಕರೆತರುವ ವಿಚಾರದಲ್ಲಿ ನಡೆದ ಮಧ್ಯವರ್ತಿಗಳ ಮಧ್ಯದ ಜಗಳ ಪ್ರಕರಣವಾಗಿದೆ ಎಂದರು. ಸಿಇಒ ಪ್ರಿಯಾಂಕಾ ಉಪಸ್ಥಿತರಿದ್ದರು.