Advertisement

ಬಹಿರಂಗ ಹೇಳಿಕೆ ನೀಡುವವರ ವಿರುದ್ಧ ಶಿಸ್ತು ಕ್ರಮಕ್ಕೆ ಅರುಣ್ ಸಿಂಗ್ ಸೂಚನೆ: ಅಶೋಕ್

02:45 PM Jun 19, 2021 | Team Udayavani |

ಬೆಂಗಳೂರು: ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಪಕ್ಷದಲ್ಲಿ ಬಹಿರಂಗ ಹೇಳಿಕೆ ನೀಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ಯಾವತ್ತಿದ್ದರೂ ಒಡೆದ ಮನೆ. ದೇಶದಲ್ಲಿ ಹಲವು ಕಾಂಗ್ರೆಸ್ ಗಳಿವೆ. ಈಗ ರಾಜ್ಯದಲ್ಲಿ ಮತ್ತೆರಡು ಕಾಂಗ್ರೆಸ್ ಹುಟ್ಟಿಕೊಳ್ಳಲಿವೆ. ಡಿ.ಕೆ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಹುಟ್ಟಿಕೊಳ್ಳಲಿವೆ. ಕಾಂಗ್ರೆಸ್ ಯಾವತ್ತೂ ಒಂದಾಗುವುದಿಲ್ಲ ಎಂದು ಟೀಕಿಸಿದರು.

ಇದನ್ನೂ ಓದಿ:ಅರುಣ್ ಸಿಂಗ್ ಬಂದುಹೋದ ಬಳಿಕ ಜಾಲಿ ಮೂಡ್ ನಲ್ಲಿದ್ದಾರೆ ಸಿಎಂ ಯಡಿಯೂರಪ್ಪ

ರಾಜ್ಯದಲ್ಲಿ 29 ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ, ಮಂಡ್ಯ ಹೊರತುಪಡೆಸಿ ಎಲ್ಲಾ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಈಗಾಗಲೇ ಕೆಲವು ಪ್ರದೇಶಗಳಲ್ಲಿ ಜನರನ್ನು ಸ್ಥಳಾಂತರ ಮಾಡಲು ಸಮುದಾಯ ಭವನಗಳನ್ನು ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.

ಉಡುಪಿ, ಚಿಕ್ಕಮಗಳೂರು ಮತ್ತು ಕಾರವಾರಕ್ಕೆ ಕೇಂದ್ರದಿಂದ ಎನ್ ಡಿಆರ್ ಎಫ್ ತಂಡ ಬಂದಿದೆ. ಎಲ್ಲಾ ಜಿಲ್ಲಾಧಿಕಾರಿಗಳ ಬಳಿ 996 ಕೋಟಿ ಹಣ ಇದೆ. ಈ ಬಾರಿ ನಿರಾಶ್ರಿತರ ಕೇಂದ್ರದಲ್ಲಿ ಪ್ರತಿ ದಿನ ಉಪಹಾರ ಊಟದಲ್ಲಿ ಬೇರೆ ಬೇರೆ ಮೆನು ಕೊಡಲಾಗಿದೆ ಎಂದು ಅಶೋಕ್ ಹೇಳಿದರು.

Advertisement

ಇದನ್ನೂ ಓದಿ: ಮಳೆಯಿಂದಾಗುವ ಅನಾಹುತ ತಪ್ಪಿಸಲು ಡಿಸಿ, ಜಿಲ್ಲಾ ಉಸ್ತುವಾರಿಗಳ ಜೊತೆ ಸಿಎಂ ಸಭೆ

Advertisement

Udayavani is now on Telegram. Click here to join our channel and stay updated with the latest news.

Next