Advertisement
ಇಂತಹದ್ದೊಂದು ಬದಲಾವಣೆ ನಡೆದಿರುವುದು ಪ.ಬಂಗಾಲದ ಸಿಲಿಗುರಿ ಜಿಲ್ಲೆಯ ಹೊಸ ಜಲಪೈಗುರಿ ರೈಲ್ವೇ ನಿಲ್ದಾಣದಲ್ಲಿ. ಈ ಕೋಚ್‌ನಲ್ಲಿ ಒಮ್ಮೆ 32 ಜನರು ಊಟ ಮಾಡಬಹುದು. ಇಲ್ಲಿ ಉತ್ತರ ಭಾರತದಿಂದ ಹಿಡಿದು ದ.ಭಾರತದವರೆಗೆ, ಮಾತ್ರವಲ್ಲ ಚೀನೀ ತಿನಿಸುಗಳೂ ಸಿಗಲಿವೆ. ಇದರಿಂದ ರೈಲ್ವೇಗೆ ಆದಾಯ ಬರುತ್ತಿರುವುದು ಮಾತ್ರವಲ್ಲ, ಟ್ರೈನ್‌ನಲ್ಲಿ ಊಟ ಮಾಡುವ ವಿಶಿಷ್ಟ ಅನುಭವವೂ ಸಿಗಲಿದೆ. ಇಲ್ಲಿ ಪ್ರಯಾಣಿಕರು ಮಾತ್ರವಲ್ಲ, ಹೊರಗಿನವರೂ ಬರಬಹುದು ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬಯಿ: ಮಹಾರಾಷ್ಟ್ರದ ನಾಲ್ಕು ರೈಲು ನಿಲ್ದಾಣಗಳಲ್ಲಿ “ರೆಸ್ಟೋರೆಂಟ್ ಆನ್ ವೀಲ್ಸ್’ (ರೈಲಿನಲ್ಲಿ ಹೊಟೇಲ್) ಆರಂಭಿಸಲು ಸೆಂಟ್ರಲ್ ರೈಲ್ವೇ ಮುಂದಾಗಿದೆ. ಈಗಾಗಲೇ ಈ ರೀತಿಯ 2 ರೆಸ್ಟೋರೆಂಟ್‌ಗಳು ಮಹಾರಾಷ್ಟ್ರದಲ್ಲಿವೆ. ಇದು ಹಳಿಗಳ ಮೇಲೆ ಇರುವ ಮಾರ್ಪಡಿಸದ ಕೋಚ್‌ಗಳಲ್ಲಿ ಆಹಾರ ಸೇವಿಸುವವರಿಗೆ ಅನನ್ಯ ಅನುಭವ ನೀಡುತ್ತದೆ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ. ಶುಲ್ಕ ರಹಿತ ಆದಾಯ ಯೋಜನೆಯಡಿ ಪುಣೆಯ ಅಕುರ್ಡಿ, ಚಿಂಚಾಡ್, ಬಾರಾಮತಿ ರೈಲು ನಿಲ್ದಾಣಗಳು ಹಾಗೂ ಸಾಂಗ್ಲಿ ಜಿಲ್ಲೆಯ ಮೀರಜ್ ರೈಲು ನಿಲ್ದಾಣದಲ್ಲಿ “ರೆಸ್ಟೋರೆಂಟ್ ಆನ್ ವೀಲ್ಸ್’ ಆರಂಭಿಸಲು ಸೆಂಟ್ರಲ್ ರೈಲ್ವೇ ನಿರ್ಧರಿಸಿದೆ.