Advertisement

ಪ್ಲಾಸ್ಟಿಕ್‌ ತ್ಯಜಿಸಿ-ಪರಿಸರ ಉಳಿಸಿ ಅಭಿಯಾನ

01:16 PM Feb 16, 2017 | Team Udayavani |

ದಾವಣಗೆರೆ: ಕರುನಾಡ ಕನ್ನಡ ಸೇನೆ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಂಡ ಪ್ಲಾಸ್ಟಿಕ್‌ ತ್ಯಜಿಸಿ, ಪರಿಸರ ಉಳಿಸಿ ಶೀರ್ಷಿಕೆ ಅಭಿಯಾನಕ್ಕೆ ಬುಧವಾರ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಚಾಲನೆ ನೀಡಿದರು. 

Advertisement

ನಗರದ ದುರ್ಗಾಂಬಿಕ ದೇವಸ್ಥಾನದ ಮುಂಭಾಗದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಇಂದು ಪ್ಲಾಸ್ಟಿಕ್‌ ಒಂದು ದೊಡ್ಡ ಪೆಡಂಭೂತವಾಗಿ ಪರಿಣಮಿಸಿದೆ. ಅದನ್ನು ಬಳಸಿ, ಬಿಸಾಡುವುದರಿಂದ ಮಣ್ಣಲ್ಲಿ ಕೊಳೆಯದೆ, ಕರಗದೆ ಸಾವಿರಾರು ವರ್ಷ ಹಾಗೆಯೇ ಇರುತ್ತದೆ.

ಇದನ್ನು ಹಸು, ಮುಂತಾದ ಪ್ರಾಣಿಗಳು ತಿಂದು ಸಾವೀಗಿಡಾಗುತ್ತವೆ. ಇದರಿಂದ ಸಾರ್ವಜನಿಕರು ಜಾಗೃತರಾಗಬೇಕು. ದಾವಣಗೆರೆ ನಗರವನ್ನು ಪ್ಲಾಸ್ಟಿಕ್‌ಮುಕ್ತ ನಗರವನ್ನಾಗಿಸಲು ಕೈ ಜೋಡಿಸಬೇಕು ಎಂದರು. ಸೇನೆಯ ರಾಜ್ಯಧ್ಯಕ್ಷ ಕೆ.ಟಿ. ಗೋಪಾಲಗೌಡ ಮಾತನಾಡಿ, ಪ್ಲಾಸ್ಟಿಕ್‌ ಮನುಕುಲವನ್ನೇ ನಡುಗಿಸುವಷ್ಟು ಮಟ್ಟಕ್ಕೆ ಬೆಳೆದು ನಿಂತಿದೆ.

ಪ್ಲಾಸ್ಟಿಕ್‌ ನೆಲ ಸೇರಿದರೆ ಎರೆಹುಳುಗಳು ಸಾಯುತ್ತವೆ. ನೆಲದಲ್ಲಿ ಪ್ಲಾಸ್ಟಿಕ್‌ ಇದ್ದ ಜಾಗದಲ್ಲಿ ಗಿಡ-ಮರಗಳು ಬೆಳೆಯುವುದಿಲ್ಲ. ಅದ್ದರಿಂದ ಇದನ್ನು ಸಂಪೂರ್ಣ ತೊರೆಯಬೇಕು. ನ್ಯಾಯಲಯ, ರಾಜ್ಯ ಸರ್ಕಾರ ಈಗಾಗಲೇ ಪ್ಲಾಸ್ಟಿಕ್‌ ಬಳಕೆ ಮೇಲೆ ಸಂಪೂರ್ಣ ನಿಷೇಧ ಹೇರಿದೆ. 

ಮುಂದಿನ ದಿನಗಳಲ್ಲಿ ನಮ್ಮ ನಗರ ಪ್ಲಾಸ್ಟಿಕ್‌ ಮುಕ್ತ ನಗರಕ್ಕೆ ಕ್ರಮ ಕೈಗೊಳ್ಳದಿದ್ದಲ್ಲಿ ನಮ್ಮ ಸೇನೆಯಿಂದಲೇ ನ್ಯಾಯಾಲದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲಾಗುವುದೆಂದು ಎಚ್ಚರಿಸಿದರು. ಮಹಾನಗರಪಾಲಿಕೆಯ ಆರೋಗ್ಯಾಧಿಕಾರಿ ಡಾ| ಚಂದ್ರಶೇಖರ ಸುಂಕದ್‌, ನಾವು ಅಂಗಡಿಗಳಲ್ಲಿದ್ದ ಪ್ಲಾಸ್ಟಿಕ್‌ ದಾಸ್ತಾನು ಜಪ್ತಿ ಮಾಡಿದ್ದೇವೆ. ನೋಟೀಸ್‌ ಕೊಟ್ಟಿದ್ದೇವೆ. ಇದರ ನಿಷೇಧಕ್ಕೆ ಸಾರ್ವನಿಕರ ಸಹಕಾರ ಅಗತ್ಯ ಎಂದರು. 

Advertisement

ಪಾಲಿಕೆ ಸದಸ್ಯ ಪಿ.ಎನ್‌. ಚಂದ್ರಶೇಖರ್‌, ಆರೋಗ್ಯ ಅಧಿಧಿಕಾರಿಗಳಾದ ತಿಮ್ಮಪ್ಪ, ಪ್ರಕಾಶ್‌, ಹೊನ್ನಪ್ಪ, ಎಂ.ಜಿ. ಶ್ರೀಕಾಂತ್‌, ದೇವರಮನಿ, ಬಿ. ತಿರುಕಪ್ಪ, ಜಿ.ಎಂ. ಮಂಜುನಾಥ ಈ ಸಂದರ್ಭದಲ್ಲಿದ್ದರು. ವಿಜಯಲಕ್ಷ್ಮಿರಸ್ತೆ, ಬೆಳ್ಳೊಡಿ ಗಲ್ಲಿ, ಮಂಡಿಪೇಟೆ, ಗಡಿಯಾರ ಕಂಬ ಹಾಗು ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಚರಿಸಿ, ಅರಿವು ಮೂಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next