Advertisement
ಈ ಬಗ್ಗೆ ಟ್ವೀಟ್ ಮಾಡಿ ರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಈಗ ದೇಶದಲ್ಲಿ ಒಬ್ಬರೇ ಚುನಾವಣ ಆಯುಕ್ತರಿದ್ದಾರೆ. ಸಧ್ಯದಲ್ಲೇ ಲೋಕಸಭೆ ಚುನಾವಣೆ ಘೋಷಣೆಯಾಗಲಿದೆ. ನಾನು ಈ ಮೊದಲೇ ಹೇಳಿದಂತೆ ನಮ್ಮ ದೇಶದಲ್ಲಿನ ಸ್ವತಂತ್ರ ಸಂಸ್ಥೆಗಳನ್ನು ಕಾಪಾಡದಿದ್ದರೆ ದೇಶ ನಿರಂಕುಶ ಪ್ರಭುತ್ವಕ್ಕೆ ಒಳಗಾಗುತ್ತದೆ’ ಎಂದು ಹೇಳಿದ್ದಾರೆ.
Related Articles
Advertisement
ಗೋಯಲ್ ರಾಜೀನಾಮೆ ಸಲ್ಲಿಸಿರುವುದಕ್ಕೆ ವೈಯಕ್ತಿಕ ಕಾರಣಗಳನ್ನೂ ನೀಡಿದ್ದರೂ, ಮುಖ್ಯ ಚುನಾವಣ ಆಯುಕ್ತ ರಾಜೀವ್ ಕುಮಾರ್‌ರೊಂದಿಗಿನ ಭಿನ್ನಾಭಿಪ್ರಾಯವೇ ಅವರ ರಾಜೀನಾಮೆಗೆ ಕಾರಣ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಗೋಯಲ್ ಆರೋ ಗ್ಯವಾಗಿದ್ದರು. ಯಾವುದೇ ಕೌಟುಂಬಿಕ ಸಮಸ್ಯೆಯಿರಲಿಲ್ಲ ಎಂದು ಅವರ ಸ್ನೇಹಿತರು ಹೇಳಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮಾ.15ಕ್ಕೆ ಇಬ್ಬರು ಚುನಾವಣ ಆಯುಕ್ತರ ನೇಮಕ: ಮೂಲಗಳು
ಇಬ್ಬರು ಚುನಾವಣ ಆಯುಕ್ತರನ್ನು ಮಾ.15ರಂದು ನೇಮಕ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅರುಣ್ ಗೋಯಲ್ ರಾಜೀನಾಮೆ ನೀಡಿದ ಬಳಿಕ 2 ಚುನಾವಣ ಆಯುಕ್ತರ ಸ್ಥಾನ ಖಾಲಿಯಾಗಿದ್ದು, ಇವರ ನೇಮಕಾತಿಗಾಗಿ ಆಯ್ಕೆ ಸಮಿತಿ ಶೀಘ್ರವೇ ಸಭೆ ನಡೆಸಲಿದ್ದು, ಮಾ.15ರಂದು ನೇಮಕಾತಿ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಶೀಘ್ರದಲ್ಲೇ ಲೋಕಸಭೆ ಚುನಾವಣೆ ಘೋಷಣೆಯಾಗಬೇಕಿದ್ದು, ಮುಖ್ಯ ಚುನಾವಣ ಆಯುಕ್ತರು ಮಾತ್ರ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.