Advertisement
ಪಟ್ಟಣದ ಭವಾನಿ ಮಂದಿರದಲ್ಲಿ ಗುರುವಾರ ನಡೆದ ಸಂಘದ ಕಾರ್ಯಕಾರಿ ಸಮಿತಿ ಜಿಲ್ಲಾ ಪದಾಧಿಕಾರಿಗಳ ಸಾಮಾನ್ಯಸಭೆಯಲ್ಲಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಸಂಘದ ಸದಸ್ಯರು ಅಭಿವೃದ್ಧಿ ಪ್ರಶ್ನೆ ಬಂದಾಗ ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.
ಅಧ್ಯಕ್ಷ ಸುಧಾಕರ ರಾಜಗೀರಾ ಮಾತನಾಡಿ, ಪ್ರತಿಯೊಬ್ಬರಿಗೂ ಕಡ್ಡಾಯ ಪಡಿತರ ವಿತರಿಸುವುದು, ಪಿಡಿಎಸ್ ಮೂಲಕ ಸೀಮೆ ಎಣ್ಣೆ ವಿತರಿಸುವ ವ್ಯವಸ್ಥೆ ಜಾರಿಗೆ ತರುವುದು, ಚಂಢಿಗಡ್ ಮತ್ತು ಪಾಂಡಿಚೇರಿಯಲ್ಲಿರುವ ನೇರಸೌಲಭ್ಯ ವರ್ಗಾವಣೆ ಯೋಜನೆ ಕೈ ಬಿಡುವುದು, ಅಲ್ಲಿಯೂ ಪಿಡಿಎಸ್ ಯೋಜನೆ ಜಾರಿಗೆ ತರುವಂತೆ ಅವರು ಒತ್ತಾಯಿಸಿದರು. ಪ್ರತಿ ಕ್ವಿಂಟಲ್ ಅಕ್ಕಿಗೆ 250ರೂ. ಕಮಿಷನ್ ನಿಗದಿಪಡಿಸಬೇಕು. ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಪ್ರತೀ ತಿಂಗಳು 30,000 ರೂ. ಕಮಿಷನ್ ಖಾತ್ರಿಪಡಿಸಬೇಕು. ದೇಶದಾದ್ಯಂತ ವಿತರಣೆ ಹಾಗೂ ಕಮಿಷನ್ ಏಕ ಮಾದರಿ
ಇರುವಂತೆ ನೋಡಿಕೊಳ್ಳುವುದು ಮೊದಲಾದ ಬೇಡಿಕೆಗಳನ್ನು ಈಡೇರಿಸುವಂತೆ ಅಕ್ಟೋಬರ್ 25ಕ್ಕೆ ನವದೆಹಲಿ ರಾಮಲೀಲಾ ಮೈದಾನದಲ್ಲಿ ಪಡಿತರ ವಿತರಕರ ಜೈಲ್ ಭರೋ ಕಾರ್ಯಕ್ರಮ ನಡೆಯಲಿದೆ. ಸದಸ್ಯರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಉಪಾಧ್ಯಕ್ಷ ಶಿವರಾಯ್ ಮೋಳಕೇರಾ, ಕಾರ್ಯದರ್ಶಿ ಚಂದ್ರಕಾಂತ ಕೋಟೆ ಮಾತನಾಡಿದರು. ಸಂಘದ ಹಿರಿಯ ಸದಸ್ಯರಾದ ಹುಲೆಪ್ಪ ಠಾಕೂರ, ಹುಲೆಪ್ಪ ಮುಸ್ತಾಪುರ, ವೀರಣ್ಣ ಮಿರೆ, ಗುರುನಾಥ ತೀರ್ಥ, ಸುಭಾಷರಾವ್ ಮೊದಲಾದವರು ಇದ್ದರು.