Advertisement

ಅಂಗವಿಕಲರು ಕೀಳರಿಮೆಯಿಂದ ಹೊರಬರಲಿ

12:24 PM Sep 14, 2017 | Team Udayavani |

ಚಿತ್ರದುರ್ಗ: ಪೂರ್ವಜನ್ಮದ ಶಾಪ, ಪಾಪ, ಪುಣ್ಯ ಕಾರ್ಯಗಳಿಂದ ಅಂಗವಿಕಲರಾಗುವುದಿಲ್ಲ. ಮೂಢ ನಂಬಿಕೆಯನ್ನು ದೂರ ಮಾಡಿ ಅಂಗವಿಕಲರನ್ನು ಗೌರವದಿಂದ ಕಾಣಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್‌.ಬಿ. ವಸ್ತ್ರಮಠ ಕರೆ ನೀಡಿದರು.

Advertisement

ಇಲ್ಲಿನ ಲೋಕಾಯುಕ್ತ ಕಚೇರಿ ಆವರಣದಲ್ಲಿರುವ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಬಸವೇಶ್ವರ ವಿದ್ಯಾಸಂಸ್ಥೆ, ಮೊಬಿಲಿಟಿ ಇಂಡಿಯಾ ಬೆಂಗಳೂರು ಇವುಗಳ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಚಿತ ಸಾಧನ ಸಲಕರಣೆಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯ ಹುಟ್ಟುವಾಗಲೇ ಅಂಗವಿಕಲನಾಗಬಹುದು. ಕೆಲವೊಮ್ಮೆ ನಾನಾ ಕಾರಣಗಳಿಂದ ಅಂಗವನ್ನು ಕಳೆದುಕೊಳ್ಳಬಹುದು. ಅಂಗವಿಕಲರೆಂಬ ಕೀಳರಿಮೆ ಬಿಟ್ಟು ಬದ್ಧತೆ, ಛಲ, ಇಚ್ಛಾಶಕ್ತಿಯಿಂದ ಸ್ವಾಭಿಮಾನಿಗಳಾಗಿ ಜೀವನ ಸಾಗಿಸಬೇಕು. ಜೀವನಪೂರ್ತಿ ಕೊರಗುವುದನ್ನು ಬಿಟ್ಟು ಸಾಹಸಮಯ ಗುಣ ಬೆಳೆಸಿಕೊಂಡು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ಸಿರಿವಂತರು ಅದಕ್ಕಾಗಿ ಸಹಾಯ ಮಾಡಬೇಕು. ದಾನ, ತ್ಯಾಗ ಮಾಡುವುದರಿಂದ ಮನಸ್ಸಿಗೆ ಸಂತೋಷ ಸಿಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ವಸಿರೆಡ್ಡಿ ವಿಜಯ ಜ್ಯೋತ್ಸಾ° ಮಾತನಾಡಿ, ಹಣ ಮತ್ತು ಸಾಧನ ಸಲಕರಣೆಗಳನ್ನು ನೀಡುವುದರಿಂದ ಅಂಗವಿಕಲರ ಬದುಕು ಉದ್ಧಾರವಾಗುವುದಿಲ್ಲ. ಅದಕ್ಕೆ ಬದಲಾಗಿ ಜೀವನದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಂಡು ಸಾಧನೆ ಮಾಡಿದರೆ ಯಶಸ್ಸು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಮನುಷ್ಯನಿಗೆ ಕೈಕಾಲು-ಕಣ್ಣುಗಳಿಗಿಂತ ಸ್ವತ್ಛವಾದ ಮನಸ್ಸು ಮತ್ತು ಆತ್ಮಸ್ಥೈರ್ಯ
ಬಹಳ ಮುಖ್ಯ. ಛಲ ಇದ್ದರೆ ಅಂಗವಿಕಲರು ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು. ಸರ್ಕಾರ, ಜಿಲ್ಲಾಡಳಿತ
ಹಾಗೂ ಸಂಘ-ಸಂಸ್ಥೆಗಳು ಅಂಗವಿಕಲರಿಗೆ ಸಾಧನ ಸಲಕರಣೆಗಳನ್ನು ನೀಡಿ ನೆರವು ನೀಡಬಹುದು. ಆದರೆ ಬೇರೆಯವರಿಗೆ ಹೊರೆಯಾಗದೆ ನಿಮಗೆ ನೀವೇ ಅವಲಂಬಿತರಾಗಬೇಕು ಎಂದರು. 

ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶ ಎಸ್‌.ಆರ್‌. ದಿಂಡಲಕೊಪ್ಪ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಪಿ.ಎನ್‌. ರವೀಂದ್ರ, ವಕೀಲರ ಸಂಘದ ಅಧ್ಯಕ್ಷ ಎನ್‌.ಬಿ. ವಿಶ್ವನಾಥ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾಗೇಶ್‌ ಬಿಲ್ವಾ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಅಧಿಕಾರಿ ಜೆ. ವೈಶಾಲಿ, ಬಸವೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿ.ಕೆ. ಶಂಕರಪ್ಪ, ಎಸ್‌.ಕೆ. ಪ್ರಭಾವತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ
ನಿರ್ದೇಶಕ ಬಿ. ಗಣೇಶ್‌, ಮೊಬಿಲಿಟಿ ಇಂಡಿಯಾದ ವಿವೇಕ್‌, ಸುಧಾಕರ್‌, ಸುಲೇಮಾನ್‌ ಇದ್ದರು. ಮಂಜುನಾಥ್‌ ನಾಡರ್‌ ನಿರೂಪಿಸಿದರು.  

52 ಮಂದಿ ಅಂಗವಿಕಲರಿಗೆ ವೀಲ್‌ಚೇರ್‌, ಕ್ಯಾಲಿಪರ್ಸ್‌, ಕೃತಕ ಕೈಕಾಲು, ಬುದ್ದಿಮಾಂದ್ಯ ಮಕ್ಕಳಿಗೆ ವಿಶೇಷ ಖುರ್ಚಿಗಳನ್ನು ವಿತರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next