Advertisement

Tharun Sudhir:‌ ತನ್ನ ಜೀವನದ ಹೀರೋಯಿನ್ ಪರಿಚಯಿಸಲು ರೆಡಿಯಾದ ತರುಣ್‌ ಸುಧೀರ್

05:35 PM Jul 21, 2024 | Team Udayavani |

ಬೆಂಗಳೂರು: ನಿರ್ದೇಶಕ ತರುಣ್‌ ಸುಧೀರ್‌ (Tharun Sudhir)​  ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ವಿಚಾರ ಚಂದನವನದಲ್ಲಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದೆ.

Advertisement

ಸೋನಲ್ ಮಂಥೆರೋ (Sonal Monteiro) ಜೊತೆ ಅವರು ಜೀವನದ ಹೊಸ ಹೆಜ್ಜೆಯನ್ನು ಇಡಲಿದ್ದಾರೆ ಎನ್ನಲಾಗುತ್ತಿದೆ. ಬಹುತೇಕ ತರುಣ್‌ – ಸೋನಲ್‌ ಪ್ರೇಮ್‌ ಕಹಾನಿ ಮದುವೆಯ ಹಂತಕ್ಕೆ ಬಂದಿರುವುದು ಅಧಿಕೃತವಾಗಿದ್ದು, ಈ ಬಗ್ಗೆ ಇಬ್ಬರು ಜೊತೆಯಾಗಿ ಮಾಧ್ಯಮಗಳೊಂದಿಗೆ ವಿಚಾರವನ್ನು ಹಂಚಿಕೊಳ್ಳಲು ಡೇಟ್‌ ಫಿಕ್ಸ್‌ ಆಗಿದೆ.!

ಹೌದು, ಸೋಮವಾರ ಬೆಳಗ್ಗೆ(ಜು.22ರಂದು) ತರುಣ್​ ಸುಧೀರ್ ನಾಳೆ ಬೆಳಗ್ಗೆ 11:08ಕ್ಕೆ ತಾನು ಕೈ ಹಿಡಿಯುವ ಹುಡುಗಿ, ತನ್ನ ಜೀವನದ ಹೀರೋಯಿನ್‌ ಯಾರೆಂದು ಬಹಿರಂಗ ಮಾಡಲಿದ್ದಾರೆ.

ಹೀರೋಯಿನ್‌ – ಡೈರೆಕ್ಟರ್‌ ಕುರ್ಚಿಯ ಫೋಟೋವನ್ನು ಹಂಚಿಕೊಂಡು,”ಕೊನೆಗೂ ನಿರ್ದೇಶಕರು ತನ್ನ ಜೀವನದ ನಾಯಕಿಯನ್ನು ಕಂಡುಕೊಂಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಈ ಫೋಟೋವನ್ನು ಸೋನಲ್‌ ಕೂಡ ಹಂಚಿಕೊಂಡಿದ್ದಾರೆ.

Advertisement

ಈ ಹಿಂದೆ ಮದುವೆಯ ವಿಚಾರವಾಗಿ ತರುಣ್‌, ಮದುವೆ ಆಗುತ್ತಿರುವುದು ಹೌದು. ಇದನ್ನು ನಾವು ಖುದ್ದಾಗಿ ಎಲ್ಲರ ಮುಂದೆ ಹೇಳುತ್ತೇವೆ ಎಂದು ಹೇಳಿದ್ದರು.

ನಾಳೆ ಸೋನಲ್‌ – ತರುಣ್‌ ಇಬ್ಬರೂ ಜೊತೆಯಾಗಿ ಮದುವೆ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆಯಿದೆ. ಇತ್ತೀಚೆಗೆ ತರುಣ್‌ ದರ್ಶನ್‌(Actor Darshan) ಅವರನ್ನು ಭೇಟಿಯಾಗಿ ಮದುವೆ ಬಗ್ಗೆ ಹೇಳಿದ್ದರು ಎನ್ನಲಾಗಿದೆ.

ಮೂಲಗಳ ಪ್ರಕಾರ ಆಗಸ್ಟ್‌ ತಿಂಗಳಿನಲ್ಲಿ ತರುಣ್‌ – ಸೋನಲ್‌ ಮದುವೆ ಆಗಲಿದ್ದಾರೆ ಎನ್ನಲಾಗಿದೆ.

ʼರಾಬರ್ಟ್‌ʼ ಸಿನಿಮಾದ ಸಂದರ್ಭದಲ್ಲಿ ತರುಣ್‌ – ಸೋನಲ್‌ ನಡುವಿನ ಆತ್ಮೀಯತೆ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next