Advertisement

Sangeeth Sivan: ಮಾಲಿವುಡ್‌, ಬಾಲಿವುಡ್‌ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

07:20 PM May 08, 2024 | Team Udayavani |

ಕೊಚ್ಚಿ/ ಮುಂಬಯಿ: ಮಾಲಿವುಡ್‌ ಹಾಗೂ ಬಾಲಿವುಡ್ ಸಿನಿರಂಗದ ಖ್ಯಾತ ನಿರ್ದೇಶಕ ಸಂಗೀತ್ ಶಿವನ್(65) ನಿಧನರಾಗಿದ್ದಾರೆ.

Advertisement

ಅನಾರೋಗ್ಯದಿಂದ ಅವರು ಇತ್ತೀಚೆಗೆ ಮುಂಬಯಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.  ಬುಧವಾರ(ಮೇ.8 ರಂದು) ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿ ಆಗಿದೆ.

ಬಾಲಿವುಡ್‌ ರಿತೇಶ್ ದೇಶಮುಖ್ ಅವರ ನಿಧನದ ಬಗ್ಗೆ ಮಾಹಿತಿ ನೀಡಿದ್ದು,ಅವರ ನಿಧನಕ್ಕೆ ಸಂತಾಪ ಸೂಚಿಸಿ, ವಿಷಯವನ್ನು ಹಂಚಿಕೊಂಡಿದ್ದಾರೆ.

ಮಾಲಿವುಡ್‌ ಹಾಗೂ ಬಾಲಿವುಡ್‌ ನಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು,  ರಘುವರನ್ ಮತ್ತು ಸುಕುಮಾರನ್ ಅಭಿನಯದ ‘ವ್ಯೂಹಂ’ ಸಿನಿಮಾ ಅವರ ನಿರ್ದೇಶನದ ಮೊದಲ ಸಿನಿಮಾವಾಗಿತ್ತು. ಮೋಹನ್‌ ಲಾಲ್‌ ಅವರೊಂದಿಗೆ ಮಾಡಿದ ‘ಯೋಧ’, ‘ಗಂಧರ್ವಂ’ ಮತ್ತು ‘ನಿರ್ಣಯಂ’  ಸಿನಿಮಾ ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿತ್ತು. ʼಯೋಧʼ ಮೂಲಕ ಮಾಲಿವುಡ್‌ ನಲ್ಲಿ ಅವರು ಖ್ಯಾತಿಗಳಿಸಿದ್ದರು.

ಅವರು ಅಮೀರ್ ಖಾನ್ ನಟಿಸಿದ ಆದಿತ್ಯ ಭಟ್ಟಾಚಾರ್ಯ ಅವರ ‘ರಾಖ್’ ಸಿನಿಮಾವನ್ನು ಸಹ-ನಿರ್ಮಾಣ ಮಾಡುವ ಮೂಲಕ ಬಿಟೌನ್‌ ಗೆ ಪ್ರವೇಶ ಮಾಡಿದ್ದರು.

Advertisement

ಇದಲ್ಲದೆ ಬಾಲಿವುಡ್‌ ನಲ್ಲಿ ಜೋರ್ (1998), ‘ಚುರಾ ಲಿಯಾ ಹೈ ತುಮ್ನೆ’, ‘ಕ್ಯಾ ಕೂಲ್ ಹೈ ಹಮ್’, ‘ಅಪ್ನಾ ಸಪ್ನಾ ಮನಿ ಮನಿ’ ಏಕ್: ದಿ ಪವರ್ ಆಫ್ ಒನ್ (2009), ಕ್ಲಿಕ್ (2010) ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. 2013 ರಲ್ಲಿ ‘ಯಮ್ಲಾ ಪಾಗ್ಲಾ ದೀವಾನಾ 2’ ಬಾಲಿವುಡ್‌ ಗೆ ಕಂಬ್ಯಾಕ್‌ ಮಾಡಿದ್ದರು.

1993 ರಲ್ಲಿ ಬಂದ ಮಲಯಾಳಂ ʼಜಾನಿʼ ಎನ್ನುವ ಅವರ  ಸಿನಿಮಾಕ್ಕೆ ಕೇರಳ ಸ್ಟೇಟ್‌ ಫಿಲ್ಮ್‌ ಅವಾರ್ಡ್‌ ನಲ್ಲಿ ಅತ್ಯುತ್ತಮ ಮಕ್ಕಳ ಸಿನಿಮಾ ಪ್ರಶಸ್ತಿ ಸಿಕ್ಕಿತ್ತು.

ಸಂಗೀತ್ ಅವರು ರಾಷ್ಟ್ರ ಪ್ರಶಸ್ತಿ ವಿಜೇತ ಛಾಯಾಗ್ರಾಹಕ-ನಿರ್ದೇಶಕ ಸಂತೋಷ್ ಶಿವನ್ ಮತ್ತು ಹೆಸರಾಂತ ಚಲನಚಿತ್ರ ನಿರ್ಮಾಪಕ ಸಂಜೀವ್ ಶಿವನ್ ಅವರ ಹಿರಿಯ ಸಹೋದರರಾಗಿದ್ದರು. ಇವರು ಪತ್ನಿ ಜಯಶ್ರೀ ಮತ್ತು ಮಕ್ಕಳಾದ ಸಜನಾ ಮತ್ತು ಶಾಂತನು ಅವರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next