Advertisement
ಪ್ರಕಾಶ್ ಪಾಂಡೇಶ್ವರ ನಿರ್ಮಾಣದಲ್ಲಿ ಮೂಡಿಬಂದ ‘ಚಾಲಿಪೋಲಿಲು’ ಸಿನೆಮಾ ಮೂಲಕ ತುಳು ಸಿನೆಮಾ ಲೋಕಕ್ಕೆ ಹೊಸ ಭವಿಷ್ಯ ಒದಗಿಸಿದ್ದು ವೀರೇಂದ್ರ ಶೆಟ್ಟಿ. ಅಂತಹ ಭರವಸೆಯ ನಿರ್ದೇಶಕ ಚಾಲಿಪೋಲಿಲು ಸಿನೆಮಾದ ಬಳಿಕ ಎಲ್ಲಿಗೆ ಹೋಗಿದ್ದರು? ಯಾವ ಸಿನೆಮಾದಲ್ಲಿದ್ದಾರೆ? ಯಾವ ಸಿನೆಮಾ ಮಾಡುತ್ತಾರೆ? ಸಿನೆಮಾವನ್ನೇ ಮರೆತುಬಿಟ್ಟರಾ? ಉದ್ಯಮ ಆರಂಭಿಸಿದ್ದಾರಾ? ಹೀಗೆ ನಾನಾ ತರದ ಪ್ರಶ್ನೆಗಳಿಗೆ ಕಾರಣರಾದರು. ಉತ್ತರ ಮಾತ್ರ ದೊರಕುತ್ತಿರಲಿಲ್ಲ.
Related Articles
Advertisement
ದಾಖಲೆಯ ಮೇಲೆ ದಾಖಲೆ ಬರೆದ ಸಿನೆಮಾ ನಿರ್ದೇಶಕರು ಇಲ್ಲಿಯವರೆಗೆ ಎಲ್ಲಿದ್ದರು? ಎಂಬ ಪ್ರಶ್ನೆ ಕೇಳಿದಾಗ ಅವರು ಹೇಳಿದ್ದು ಹೀಗೆ.. ಚಾಲಿಪೋಲಿಲು ಸಿನೆಮಾದ ಅನಂತರ ನಾನು ಸ್ಯಾಂಡಲ್ವುಡ್‌ನತ್ತ ಮುಖ ಮಾಡಿ ಬೆಂಗಳೂರಿನಲ್ಲಿ ಬಂದು ನೆಲೆಸಿದ್ದೇನೆ. ಸಿನೆಮಾವನ್ನೇ ವೃತ್ತಿಯನ್ನಾಗಿ ಸ್ವೀಕರಿಸಿ, ಸಾಕಷ್ಟು ವರ್ಕ್‌ಔಟ್ ಮಾಡಿದ್ದೇನೆ. ಅನೇಕ ಕಥೆಯನ್ನು ಸಿದ್ಧಪಡಿಸಿದ್ದೇನೆ. ಇದೀಗ ‘ಸವರ್ಣದೀರ್ಘ ಸಂಧಿ’ ವಿಭಿನ್ನ ಟೈಟಲ್ ಹೊಂದಿರುವ ಸಿನೆಮಾ ರೆಡಿ ಮಾಡಲಾಗಿದೆ. ಸದ್ಯ ಇದು ಪೋಸ್ಟ್ ಪ್ರೊಡಕ್ಷನ್‌ನಲ್ಲಿದೆ. ವಿಶೇಷ ಅಂದರೆ ಈ ಸಿನೆಮಾವನ್ನು ನಿರ್ದೇಶಿಸುವ ಜತೆಗೆ ನಾಯಕ ನಟನಾಗಿ ನಾನೇ ನಟಿಸುತ್ತಿದ್ದೇನೆ. ಈ ಚಿತ್ರದ ಮೂಲಕ ನಟಿ ಕೃಷ್ಣಾ ಸ್ಯಾಂಡಲ್ವುಡ್‌ಗೆ ಪರಿಚಯಿಸುತ್ತಿದ್ದೇನೆ. ಈಕೆ ಖ್ಯಾತ ಕಲಾವಿದ ರವಿ ಭಟ್ (ವಿನಯಾ ಪ್ರಸಾದ ಅವರ ಸಹೋದರ)ಆವರ ಮಗಳು. ‘ಮುಂಗಾರು ಮಳೆ’ ಖ್ಯಾತಿಯ ಮನೋಮೂರ್ತಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮಲಯಾಳಂ ಚಿತ್ರ ‘ಉಸ್ತಾದ್ ಹೊಟೇಲ್’ ಖ್ಯಾತಿಯ ಲೋಕನಾಥನ್ ಶ್ರೀನಿವಾಸ್ ಛಾಯಾಗ್ರಹಣವಿದೆ. ಸುರೇಂದ್ರ ಬಂಟ್ವಾಳ್, ಪದ್ಮಜ ರಾವ್, ರವಿ ಭಟ್, ಅಜಿತ್ ಹನುಮಕ್ಕನವರ್, ನಿರಂಜನ್ ದೇಶಪಾಂಡೆ ಮುಂತಾದವರಿದ್ದಾರೆ. ಸುಮಾರು ಮೂರು ನಾಲ್ಕು ವರ್ಷಗಳಿಂದ ಈ ಚಿತ್ರದ ಹಿಂದೆ ಕೆಲಸ ಮಾಡಿದ್ದೇವೆ ಎನ್ನುತ್ತಾರೆ ಅವರು.
– ದಿನೇಶ್ ಇರಾ