Advertisement

ನಿರ್ದೇಶಕ ಲೋಹಿತ್‌ ಈಗ ನಿರ್ಮಾಪಕ

09:09 AM Mar 05, 2020 | Lakshmi GovindaRaj |

ಕನ್ನಡದಲ್ಲಿ “ಮಮ್ಮಿ’ ಹಾಗೂ “ದೇವಕಿ’ ಸಿನಿಮಾ ನಿರ್ದೇಶಿಸಿದ್ದ ಲೋಹಿತ್‌ ಈಗ ಮತ್ತೂಂದು ಸಿನಿಮಾಗೆ ಅಣಿಯಾಗಿದ್ದಾರೆ. ಹಾಗಂತ, ಈ ಬಾರಿ ಅವರು ನಿರ್ದೇಶನಕ್ಕೆ ಇಳಿದಿಲ್ಲ. ಬದಲಾಗಿ, ಸಿನಿಮಾವೊಂದರ ನಿರ್ಮಾಣ ಮಾಡುತ್ತಿದ್ದಾರೆ. ಹೌದು, ಹೊಸಬರಿಗೆ ಅದರಲ್ಲೂ ಕಂಟೆಂಟ್‌ ಇರುವ ಕಥೆಗಳನ್ನು ಸಿನಿಮಾ ಮಾಡುವ ಉದ್ದೇಶದಿಂದ “ಫ್ರೈಡೆ ಫಿಲಂಸ್‌’ ಎಂಬ ಪ್ರೊಡಕ್ಷನ್ಸ್‌ ಶುರು ಮಾಡಿ ಅದರಡಿ, ಮೊದಲ ಸಿನಿಮಾ ನಿರ್ಮಿಸುತ್ತಿದ್ದಾರೆ.

Advertisement

ಮಲಯಾಳಂನಲ್ಲಿ ಬಂದ “ಹೆಲೆನ್‌’ ಎಂಬ ಸಿನಿಮಾವನ್ನು ಕನ್ನಡಕ್ಕೆ ತರುತ್ತಿದ್ದಾರೆ. ಈಗಾಗಲೇ ತೆಲುಗು, ತಮಿಳು ಹಾಗು ಹಿಂದಿಯಲ್ಲಿ ರಿಮೇಕ್‌ ಆಗುತ್ತಿರುವ ಆ ಚಿತ್ರವನ್ನು ಲೋಹಿತ್‌ ಕನ್ನಡಕ್ಕೆ ಮಾಡುತ್ತಿದ್ದಾರೆ. ಅದೊಂದು ಅಪ್ಪ, ಮಗಳ ಕಥೆಯಾಗಿದ್ದು, ಎಮೋಷನ್ಸ್‌ ಹೊಂದಿದೆ. ಸಸ್ಪೆನ್ಸ್‌ ಥ್ರಿಲ್ಲರ್‌ ಹೊಂದಿರುವ ಚಿತ್ರದಲ್ಲಿ ಲಾಸ್ಯಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ತಂದೆ ಪಾತ್ರದ ಆಯ್ಕೆ ಇನ್ನೂ ಆಗಿಲ್ಲ. ಆದರೆ, ಲೋಹಿತ್‌ ಅವರ ತಲೆಯಲ್ಲಿ ರವಿಚಂದ್ರನ್‌ ಇದ್ದಾರೆ. ಸದ್ಯಕ್ಕೆ ಅವರಿಗೆ ಕಥೆ ಹೇಳಬೇಕಿದೆ. ಈ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ.

ಮೂಲ ಚಿತ್ರ “ಹೆಲೆನ್‌’ ನಿರ್ದೇಶಿಸಿದ್ದ ಅರುಣ್‌ ಕುಮಾರ್‌ ಹಾಗು ಸಾಬು ಇಬ್ಬರೂ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕನ್ನಡದಲ್ಲಿ ಇವರ ಮೊದಲ ಚಿತ್ರವಿದು. “ಸಿಲ್ವರ್‌ ಸ್ಟ್ರೇನ್‌ ಇಂಟರ್‌ನ್ಯಾಷನಲ್‌’ ಹಾಗೂ “ಫ್ರೈಡೆ ಫಿಲಂಸ್‌’ ಈ ಎರಡು ಪ್ರೊಡಕ್ಷನ್ಸ್‌ ಮೂಲಕ ಚಿತ್ರ ತಯಾರಾಗುತ್ತಿದೆ. ಸದ್ಯಕ್ಕೆ ಸಂಭಾಷಣೆ ಕೆಲಸ ನಡೆಯುತ್ತಿದೆ. ಮಾರ್ಚ್‌ ಅಂತ್ಯಕ್ಕೆ ಚಿತ್ರ ಶುರುವಾಗಲಿದೆ. ತಾಂತ್ರಿಕ ವರ್ಗದ ಆಯ್ಕೆ ಇನ್ನಷ್ಟೇ ಆಗಬೇಕಿದೆ ಎಂಬುದು ಲೋಹಿತ್‌ ಮಾತು.

Advertisement

Udayavani is now on Telegram. Click here to join our channel and stay updated with the latest news.

Next