Advertisement

Director ಗುರುಪ್ರಸಾದ್ ಪಂಚಭೂತಗಳಲ್ಲಿ ಲೀನ: ಯೋಗರಾಜ್ ಭಟ್, ವಿಜಿ, ಡಾಲಿ ಅಂತಿಮ ನಮನ

07:31 PM Nov 03, 2024 | Team Udayavani |

ಬೆಂಗಳೂರು: ಚಿತ್ರ ನಿರ್ದೇಶಕ ಗುರುಪ್ರಸಾದ್ ಅವರ ಅಂತ್ಯಕ್ರಿಯೆ ವಿಲ್ಸನ್ ಗಾರ್ಡನ್ ವಿದ್ಯುತ್ ಚಿತಾಗಾರದಲ್ಲಿ ರವಿವಾರ(ನ3) ಸಂಜೆ ನೆರವೇರಿಸಲಾಯಿತು.

Advertisement

ಬ್ರಾಹ್ಮಣ ವಿಧಿಯಂತೆ ಅಂತಿಮ ವಿಧಿಗಳನ್ನು ನೆರವೇರಿಸಲಾಯಿತು. ಈ ವೇಳೆ ಗುರುಪ್ರಸಾದ್ ಅವರ ಸಹೋದರ ಹರಿಪ್ರಸಾದ್, ಎರಡನೇ ಪತ್ನಿ ಸುಮಿತ್ರಾ , ಮೊದಲ ಪತ್ನಿ ಆರತಿ ಮತ್ತು ಕುಟುಂಬಸ್ಥರು ಹಾಜರಿದ್ದರು.

ಖ್ಯಾತ ಚಿತ್ರ ನಿರ್ದೇಶಕ ಯೋಗರಾಜ್ ಭಟ್, ನಟರಾದ ದುನಿಯಾ ವಿಜಯ್, ಡಾಲಿ ಧನಂಜಯ್ , ತಬಲಾ ನಾಣಿ, ಸತೀಶ್ ನೀನಾಸಂ ಮೊದಲಾದವರು ಅಂತಿಮ ವಿಧಿ ವೇಳೆ ಹಾಜರಿದ್ದರು.

ಇದನ್ನೂ ಓದಿ: Director Guruprasad: ಖ್ಯಾತ ಸ್ಯಾಂಡಲ್‌ವುಡ್‌ ನಿರ್ದೇಶಕ ಗುರುಪ್ರಸಾದ್‌ ಆ*ತ್ಮಹತ್ಯೆ

ಮಾಡನಾಯಕನ ಹಳ್ಳಿ  ದಾಸನಪುರ ರಸ್ತೆಯಲ್ಲಿರುವ ಅಪಾರ್ಟ್​ಮೆಂಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗುರುಪ್ರಸಾದ್ ಅವರ ಮೃತದೇಹ ರವಿವಾರ ಪತ್ತೆಯಾಗಿತ್ತು. ಗುರುಪ್ರಸಾದ್ ಅವರು ಮೊದಲ ಪತ್ನಿ ಆರತಿ ಅವರಿಗೆ ವಿಚ್ಛೇದನ ನೀಡಿ, 2020ರಲ್ಲಿ ಸುಮಿತ್ರಾ ಅವರನ್ನು 2ನೇ ಮದುವೆಯಾಗಿದ್ದರು. ಅವರಿಗೆ ಪುಟ್ಟ ಹೆಣ್ಣು ಮಗುವಿದೆ.

Advertisement

ಸಾಲ ಭಾದೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಜಿಗುಪ್ಪೆಯಿಂದ 3-4 ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪತ್ನಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next