Advertisement

ನೀವು ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು: ಸಿಎಂ ವಿರುದ್ಧ ಮತ್ತೆ ಗುಡುಗಿದ ಗುರು ಪ್ರಸಾದ್

04:51 PM Jun 07, 2021 | Team Udayavani |

ಬೆಂಗಳೂರು : ‘ಮಠ’ ಖ್ಯಾತಿಯ ನಿರ್ದೇಶಕ ಗುರು ಪ್ರಸಾದ್ ಅವರು ಮತ್ತೆ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Advertisement

ಇಂದು ಫೇಸ್ ಬುಕ್ ಲೈವ್ ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಅವರು, ಮಹಾಮಾರಿ ಕೋವಿಡ್ ವೈರಸ್​ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ‘ಯಡಿಯೂರಪ್ಪ ಇಂದು ಜನರ ಸೇವೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಆದರೆ ಅವರು ಅವರ ಮಗನ, ವಂಶದ ಸೇವೆ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಸೋಂಕಿಗೆ ಸಾವಿರಾರು ಜನರು ಸತ್ತಿದ್ದಾರೆ. ನಿಮಗೆ ಪಾಪಪ್ರಜ್ಞೆ ಇಲ್ಲವೇ? ವೋಟ್​ ಹಾಕಿದ ನಮಗೆ ಬೆಲೆ ಇಲ್ವಾ? ನಾವು ಮೋದಿ ಮುಖ ನೋಡಿಕೊಂಡು ವೋಟ್​ ಹಾಕಿದ್ವಿ. ನಿಮ್ಮ ಸ್ವಂತ ಆಸ್ತಿಗಳನ್ನು ಘೋಷಣೆ ಮಾಡಿ ಎಂದು ಸವಾಲು ಹಾಕಿದ್ದಾರೆ.

29 ಸಾವಿರ ಕನ್ನಡಿಗರು ಸತ್ತಿದ್ದಾರೆ. ಅವರೆಲ್ಲರಿಗೂ ಒಂದೊಂದು ಕೋಟಿ ರೂಪಾಯಿ ಕೊಡಿ. ಅಷ್ಟು ಕನ್ನಡಿಗರನ್ನು ಸಾಯಿಸಿದ್ದೀರಲ್ಲ ನಿಮಗೆ ಪ್ರಾಯಶ್ಚಿತ್ತ ಇಲ್ಲವೇ? ಅದು ಹೇಗೆ ಊಟ ಮಾಡುತ್ತೀರಿ? ನೀವೆಲ್ಲ ಭ್ರಷ್ಟಾಚಾರಿಗಳು. ಅದನ್ನು ನಾನು ಕೋರ್ಟ್​ನಲ್ಲಿ ಸಾಬೀತು ಮಾಡುತ್ತೇನೆ. ಅದಕ್ಕೆ ನನ್ನ ಬಳಿ ಸಾಕ್ಷಿ ಇದೆ’ ಎಂದು ಗುರುಪ್ರಸಾದ್​ ಹೇಳಿದ್ದಾರೆ.

‘ಹೈಕಮಾಂಡ್​ ಬಗ್ಗೆ ಯಡಿಯೂರಪ್ಪ ಮಾತನಾಡುತ್ತಾರೆ. ಕನ್ನಡಿಗರೇ ಹೈಕಮಾಂಡ್​. ನಾವು ಹೇಳ್ತಾ ಇದ್ದೀವಿ. ನೀವು ರಾಜಿನಾಮೆ ಕೊಟ್ಟು ಮನೆಗೆ ಹೋಗಬೇಕು. ದುಡ್ಡು ಮಾಡಿದ್ದೀರಲ್ಲ ಅದನ್ನು ನೆಕ್ಕಬೇಕು. ಎಲ್ಲ ಕೆಲಸಗಾರರನ್ನು ಒಂದೂವರೆ ವರ್ಷ ಕೂಡಿ ಹಾಕಿದ್ದೀರಿ. ಎಲ್ಲರಿಗೂ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟು, ಯಾರಿಗೂ ಏನೂ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕಾದ್ದು ಸರ್ಕಾರದ ಜವಾಬ್ದಾರಿ’ ಎಂದು ಗುರುಪ್ರಸಾದ್​ ಗುಡುಗಿದ್ದಾರೆ.

Advertisement

‘ಸಂಸ್ಕಾರಹೀನ, ಭ್ರಷ್ಟಾಚಾರಿ ರಾಜಕಾರಣಿಗಳ ಯುಗ ಮುಗಿಯುತ್ತಿದೆ. ಆದರೆ ಅದು ಸರಿಹೋಗಲು ಇನ್ನೂ 100 ವರ್ಷ ಬೇಕು. ಅದಕ್ಕೆ ಈಗ ಬೀಗ ಹಾಕುತ್ತಿದ್ದೇನೆ. ಪ್ರತಿಯೊಬ್ಬರ ಜೀವನ ಕಾಪಾಡುವುದು ಸರ್ಕಾರದ ಕೆಲಸ. ವೋಟ್​ ಹಾಕುವವರು ದುಡ್ಡು ತೆಗೆದುಕೊಳ್ಳಬೇಡಿ’ ಎಂದಿದ್ದಾರೆ ಗುರುಪ್ರಸಾದ್​. ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದೆ.

ಇನ್ನು ಕಳೆದ ಏಪ್ರಿಲ್​ನಲ್ಲಿಯೂ ಗುರುಪ್ರಸಾದ್​ ಅವರು ಸರ್ಕಾರದ ವಿರುದ್ಧ ಗುಡುಗಿದ್ದರು. ‘ತಮಗೆ ಕೊವಿಡ್​ ಬಂದಿದೆ. ಒಂದು ವೇಳೆ ಸತ್ತರೆ ಅದಕ್ಕೆ ರಾಜಕಾರಣಿಗಳು ಕಾರಣ ಎಂದು ಹೇಳಿದ್ದರು. ಈಗ ಮತ್ತೆ ಕೆಂಡಾಮಂಡಲ ಆಗಿದ್ದಾರೆ. ಅವರ ವಿಡಿಯೋಗೆ ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಅವರ ಅಭಿಪ್ರಾಯದ ಬಗ್ಗೆ ಪರ-ವಿರೋಧದದ ಚರ್ಚೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next