Advertisement

‘ಕಂಠಿ, ಸಾಹೇಬ’ಚಿತ್ರ ನಿರ್ದೇಶಕ ಭರತ್ ನಿಧನ

01:16 PM Dec 25, 2020 | Adarsha |

ಬೆಂಗಳೂರು: ಕಂಠಿ, ಸಾಹೇಬ ಮುಂತಾದ ಸ್ಯಾಂಡಲ್ ವುಡ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಯುವ ನಿರ್ದೇಶಕ ಭರತ್ ಅನಾರೋಗ್ಯದಿಂದ ನಿಧನರಾಗಿದ್ದಾರೆ.

Advertisement

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ, ನಿರ್ದೇಶಕ ಭರತ್ ಚಾಮರಾಜ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬಾಲಿವುಡ್ ಲವ್ ಬರ್ಡ್ಸ್: ಆಲಿಯಾ ಜೊತೆಗಿನ ಪ್ರೀತಿ ವಿಚಾರ ಬಿಚ್ಚಿಟ್ಟ ರಣಬೀರ್ ಕಪೂರ್

ಈ ಹಿಂದೆ ಸ್ಯಾಂಡಲ್ ವುಡ್ ರೋರಿಂಗ್ ಸ್ಟಾರ್ ಶ್ರೀ ಮುರಳಿ ಹಾಗೂ ನಟಿ ರಮ್ಯ ಅಭಿನಯದ ಕಂಠಿ ಸಿನಿಮಾವನ್ನು ನಿರ್ದೇಶಿಸಿದ್ದ ಭರತ್, ಕೆಲ ವರ್ಷಗಳ ಬಳಿಕ ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ ’ಸಾಹೇಬ’ ಚಿತ್ರವನ್ನೂ ನಿರ್ದೇಶನ ಮಾಡಿದ್ದರು.

ಚಿತ್ರರಂಗವನ್ನೇ ಉಸಿರಾಗಿಸಿಕೊಂಡಿದ್ದ ನಿರ್ದೇಶಕ ಭರತ್ ರಾಮನಗರದ ಚಿಕ್ಕ ಮುಳುವಾಡಿ ಗ್ರಾಮದವರಾಗಿದ್ದು, ಕೆಲ ವರ್ಷಗಳಿಂದ ಬೆಂಗಳೂರಿನ ವಿಜಯನಗರದಲ್ಲಿ ವಾಸವಾಗಿದ್ದರು.

Advertisement

ಇದನ್ನೂ ಓದಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ: ಆರು ರಾಜ್ಯದ ಕೃಷಿಕರ ಜೊತೆ ಮೋದಿ ಸಂವಾದ

ಯುವ ನಿರ್ದೇಶಕ ಭರತ್ ಅವರ ಅಕಾಲಿಕ ಮರಣಕ್ಕೆ ಹಲವು ನಟ ನಟಿಯರು ಸೇರಿದಂತೆ ಚಿತ್ರರಂಗ ಸಂತಾಪ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.