Advertisement

ಕನ್ನಡದ ಹಿರಿಯ ನಿರ್ದೇಶಕ ಎಸ್.ಕೆ ಭಗವಾನ್‌ ವಿಧಿವಶ

12:32 PM Feb 20, 2023 | Team Udayavani |

ಬೆಂಗಳೂರು:  ಸ್ಯಾಂಡಲ್‌ ವುಡ್‌ ನ ಹಿರಿಯ ನಿರ್ದೇಶಕ ಶ್ರಿನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್‌ ಸೋಮವಾರ (ಫೆ.20 ರಂದು) ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

Advertisement

ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

1966 ರಲ್ಲಿ ಬಂದ ʼಸಂಧ್ಯಾರಾಗʼ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, ನಿರ್ದೇಶಕರಾಗಿ ಕನ್ನಡದಲ್ಲಿ ʼಕಸ್ತೂರಿ ನಿವಾಸʼ, ʼಎರಡು ಕನಸುʼ, ʼಬಯಲು ದಾರಿʼ, ʼಜೀವನ ಚೈತ್ರʼ,ʼಗಾಳಿ ಮಾತುʼ, ʼಹೊಸ ಬೆಳಕುʼ, ʼಆಪರೇಷನ್‌ ಡೈಮಂಡ್‌ ರಾಕೆಟ್‌ʼ, ʼಜೇಡರ ಬಲೆʼ, ʼಗೋವಾದಲ್ಲಿ ಸಿಐಡಿ999ʼ, ಹೀಗೆ ಅನೇಕ ಚಿತ್ರಗಳನ್ನು ಮಾಡಿ ಸೂಪರ್‌ ಹಿಟ್‌ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದರು. ಡಾ. ರಾಜ್ ಕುಮಾರ್‌ ಅವರೊಂದಿಗೆ ಬಂದ ಭಗವಾನ್‌ ಅವರ ಸಿನಿಮಾಗಳು ಆ ಕಾಲದಲ್ಲಿ ಮೋಡಿ ಮಾಡಿತ್ತು.  2019 ರಲ್ಲಿ ಸಂಚಾರಿ ವಿಜಯ್‌ ಅವರ ʼಆಡುವ ಗೊಂಬೆʼ ಚಿತ್ರವನ್ನು ನಿರ್ದೇಶನ ಮಾಡಿದ್ದರು.

ನಿರ್ದೇಶಕ ದೊರೈರಾಜ್‌ ಜೊತೆಗೂಡಿ ಅನೇಕ ಚಿತ್ರಗಳಿಗೆ ಆ್ಯಕ್ಷನ್ ಕಟ್‌ ಹೇಳಿದ್ದರು.  ದೊರೈ – ಭಗವಾನ್‌ ಎಂದೇ ಇವರು ಖ್ಯಾತಿಯಾಗಿದ್ದರು.

ಬೆಂಗಳೂರಿನ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next